ರಾಯಚೂರು: ಮಾರ್ಚ್ 14 ರ ವರೆಗೆ ಲಾಕ್ ಡೌನ್ ಮಾಡಿದ್ದರೂ ಕೂಡ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಪ್ರದೇಶದಲ್ಲಿ ಸಾರ್ವಜಿನಿಕರು ವ್ಯಾಪಾರ, ವಹಿವಾಟು ನಡೆಸಿದ್ದಾರೆ.
ಕೊರೊನಾ ಭೀತಿ ಹೆಚ್ಚಾಗುತ್ತಿರುವ ಕಾರಣ ಜನರು ಬೀದಿಗೆ ಬಾರದಂತೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ, ಅದನ್ನೂ ಮೀರಿ ಜನರು ಯುಗಾದಿ ಹಬ್ಬಕ್ಕೆ ಅಗತ್ಯ ವಸ್ತುಗಳ ಖರೀದಿಸಲು ರಸ್ತೆಗಿಳಿದಿದ್ದಾರೆ.
ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಹೊರಡಿಸಿದ್ದರೂ ಕೂಡ ಜನತೆ ಅರ್ಥ ಮಾಡಿಕೊಳ್ಳದೆ ತಮಗೂ ಇದಕ್ಕೂ ಸಂಬಂಧವಿಲ್ಲ ಎನ್ನುವಂತೆ ನಡೆದುಕೊಳ್ಳುತ್ತಿರುವುದು ನಿಜಕ್ಕೂ ಬೇಸರದ ಸಂಗತಿ.