ETV Bharat / state

ಮುಳುಗಿತು ಗೂಗಲ್​ ಬ್ಯಾರೇಜ್​... ರಾಯಚೂರು ಜಿಲ್ಲೆಯಲ್ಲಿ ನೂರಾರು ಕುಟುಂಬಗಳು ಬೀದಿಗೆ - ನಾರಾಯಣಪುರ ಜಲಾಶಯ

ಕೃಷ್ಣ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾದ ಹಿನ್ನೆಲೆ ರಾಯಚೂರು ಜಿಲ್ಲೆಯಲ್ಲಿ ಪ್ರವಾಹ ಮುಂದುವರೆದಿದೆ. ನಾರಾಯಣಪುರ ಜಲಾಶಯ ಮತ್ತು ಭೀಮಾ ನದಿಯಿಂದ ಲಕ್ಷಾಂತರ ಕ್ಯೂಸೆಕ್​ ನೀರು ಹರಿದು ಬಿಟ್ಟ ಪರಿಣಾಮ ಕುರವಕುಲ ನಡುಗಡ್ಡೆ ಪ್ರದೇಶಕ್ಕೆ ನೀರು ನುಗ್ಗುತ್ತಿದೆ. ನಡುಗಡ್ಡೆಯಲ್ಲಿ ವಾಸಿಸುವ ನೂರಾರು ಕುಟುಂಬಗಳ 500ಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ಸಿಲುಕಿದ್ದಾರೆ.

Raichur district, ರಾಯಚೂರು ಜಿಲ್ಲೆ
author img

By

Published : Aug 11, 2019, 12:54 PM IST

Updated : Aug 11, 2019, 3:22 PM IST

ರಾಯಚೂರು: ಕೃಷ್ಣ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾದ ಹಿನ್ನೆಲೆ ನೂರಾರು ಕುಟುಂಬಗಳು ಪ್ರವಾಹಕ್ಕೆ ಸಿಲುಕಿಕೊಂಡಿವೆ.

ನಾರಾಯಣಪುರ ಜಲಾಶಯದಿಂದ 6.30 ಲಕ್ಷ ಕ್ಯೂಸೆಕ್​ ಹಾಗೂ ಭೀಮಾ ನದಿಯಿಂದ 2.85 ಲಕ್ಷ ಕ್ಯೂಸೆಕ್​ ನೀರು ಹರಿಬಿಟ್ಟ ಪರಿಣಾಮ ತಾಲೂಕಿನ ಸಂಗಮವಾಗಿ ಭೀಮಾ ಮತ್ತು ಕೃಷ್ಣ ನದಿಯಲ್ಲಿ 9.15 ಲಕ್ಷ ಕ್ಯೂಸೆಕ್​ ನೀರು ಹರಿಯುತ್ತಿದೆ. ಇದರಿಂದ ಕುರವಕುಲ ನಡುಗಡ್ಡೆ ಪ್ರದೇಶಕ್ಕೆ ನೀರು ನುಗ್ಗುತ್ತಿದ್ದು, ನಡುಗಡ್ಡೆಯಲ್ಲಿ ವಾಸಿಸುವ ನೂರಾರು ಕುಟುಂಬದ 500ಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ಸಿಲುಕಿದ್ದಾರೆ. ನಡುಗಡ್ಡೆ ಪ್ರದೇಶದಲ್ಲಿನ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿ ಉಂಟಾಗಿದ್ದು, ಇದೀಗ ಮನೆಗಳಿಗೆ ನೀರು ನುಗ್ಗುವ ಆತಂಕ ಶುರುವಾಗಿದೆ.

ಪ್ರವಾಹದಿಂದ ಜಿಲ್ಲೆಯಲ್ಲಿ ಉಂಟಾಗಿರುವ ಹಾನಿ

ಗೂಗಲ್ ಬ್ಯಾರೇಜ್ ಮುಳುಗಡೆ:
ನಾರಾಯಣಪುರ ಜಲಾಶಯದಿಂದ 6 ಲಕ್ಷಕ್ಕೂ ಅಧಿಕ ಕ್ಯೂಸೆಕ್​ ನೀರು ಹರಿಬಿಟ್ಟ ಪರಿಣಾಮ ದೇವದುರ್ಗ ತಾಲೂಕಿನ ಗೂಗಲ್ ಬ್ಯಾರೇಜ್ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಬ್ರಿಡ್ಜ್ ಮೇಲೆ ನೀರು ಹರಿಯುತ್ತಿದ್ದು, ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೇ ರಾಯಚೂರು-ಯಾದಗಿರಿ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಸಂಚಾರವನ್ನು ಸ್ಥಗಿತಗೊಂಡಿದೆ. ಬ್ಯಾರೇಜ್ ಮುಳುಗಡೆಗೊಂಡು ಅಪಾಯ ಮಟ್ಟ ಮೀರಿ ನೀರು ಹರಿಯುತ್ತಿದೆ.

ಸಂತ್ರಸ್ತರ ನೆರವಿಗೆ ಧಾವಿಸಿದ ಜಿಲ್ಲಾಡಳಿತ:
ತಾಲೂಕಿನ‌ ಗುರ್ಜಾಪುರ, ಅರಶಣಗಿ, ಆತ್ಕೂರು, ಡಿ.ರಾಂಪೂರು, ಕುರ್ವಕಲಾ ಮತ್ತಿತರೆ ಗ್ರಾಮಗಳಲ್ಲಿನ ಸಂತ್ರಸ್ತರ ನೆರವಿಗೆ ಜಿಲ್ಲಾಡಳಿತ, ನೋಡಲ್ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮುಖ್ಯವಾಗಿ ಮಿಲಿಟರಿ ಸಿಬ್ಬಂದಿ ಯಾವುದನ್ನು ಲೆಕ್ಕಿಸದೆ ಜನರ ರಕ್ಷಣ ಕಾರ್ಯವೂ ಮುಂದಾಗಿದ್ದು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Intro:ಸ್ಲಗ್: ಗೂಗಲ್ ಬ್ಯಾರೇಜ್ ಮುಳುಗಡೆ
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 11-೦8-2019
ಸ್ಥಳ: ರಾಯಚೂರು
ಆಂಕರ್: ನಾರಾಯಣಪುರ ಜಲಾಶಯದಿಂದ 6 ಲಕ್ಷಕ್ಕೂ ಅಧಿಕ ಕ್ಯೂಸೆಕ್ಸ್ ನೀರು ಹರಿದು ಬಿಟ್ಟ ಪರಿಣಾಮ ಗೂಗಲ್ ಬ್ಯಾರೇಜ್ ಸಂಪೂರ್ಣವಾಗಿ ಮುಳುಗಡೆಗೊಂಡಿದೆ. Body:ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗೂಗಲ್ ಬ್ರೀಡ್ಜ್ ಕಂ ಬ್ಯಾರೇಜ್ ಸಂಪೂರ್ಣವಾಗಿ ಮುಳಗಡೆಗೊಂಡು, ಬ್ರೀಡ್ಜ್ ಮೇಲೆ ನೀರು ಹರಿಯುತ್ತಿದ್ದು, ಬ್ರೀಡ್ಜ್ ಮೇಲೆ ವಾಹನ ಸಂಚಾರವನ್ನ ಸಹ ಸ್ಥಗೀತಗೊಳಿಸಲಾಗಿದೆ. ಅಲ್ಲದೇ ರಾಯಚೂರು-ಯಾದಗಿರಿ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಸಂಚಾರ ಸ್ಥಗಿತಗೊಂಡಿದೆ. Conclusion:ಬ್ರೀಡ್ಜ್ ಕಂ ಬ್ಯಾರೇಜ್ ಮುಳುಗಡೆಗೊಂಡು ಅಪಾಯ ಮಟ್ಟ ಮೀರಿ ಹರಿಯುವುದರಿಂದ ಗ್ರಾಮಕ್ಕೆ ನೀರು ನುಗ್ಗುವ ಭೀತಿ ಎದುರಾಗಿದ್ದು, ಸುತ್ತಮುಲಿನ ಸಾವಿರಾರ ಎಕರೆ ಪ್ರದೇಶದ ಹೊಲ-ಗದ್ದೆಗಳು ಜಲಾವೃತಗೊಂಡು ಬೆಳೆ ನಷ್ಟ ಉಂಟು ಮಾಡಿದೆ.

Last Updated : Aug 11, 2019, 3:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.