ETV Bharat / state

ವಿದ್ಯುತ್​ ಅವಘಡ: ಮೇವು ಕೊಯ್ಯಲು ಹೋದ ಗ್ರಾ.ಪಂ.ಸದಸ್ಯ ಸಾವು - ಹರವಿ ಗ್ರಾಮ ಪಂಚಾಯತಿ ಸದಸ್ಯ ಸಾವು

ಜಾನುವಾರುಗಳಿಗೆ ಮೇವು ಕೊಯ್ಯುತ್ತಿದ್ದ ವೇಳೆ ವಿದ್ಯುತ್​ ತಂತಿ ಕಟ್ಟಾಗಿ ಕೈಗೆ ತಗುಲಿದ ಪರಿಣಾಮ ಸ್ಥಳದಲ್ಲಿಯೇ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆಯ ಹರವಿ ಗ್ರಾಮದಲ್ಲಿ ನಡೆದಿದೆ.

grama-panchayat-member-death-in-raichuru-haravi
ಗ್ರಾಪಂ ಸದಸ್ಯ ಸಾವು
author img

By

Published : Apr 12, 2020, 2:55 PM IST

ರಾಯಚೂರು: ಜಾನುವಾರುಗಳಿಗೆ ಮೇವು ತರಲು ಹೋಗಿದ್ದ ಗ್ರಾ.ಪಂ.ಸದಸ್ಯ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ ಘಟನೆ ನಡೆದಿದೆ.

ಸಿರವಾರ ತಾಲೂಕಿನ ಹರವಿ ಗ್ರಾಮದ ಹೊರವಲಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ತಾಯಣ್ಣ(45) ಮೃತ ಗ್ರಾ.ಪಂ ಸದಸ್ಯ.

ಇಂದು ಬೆಳಿಗ್ಗೆ ಜಾನುವಾರುಗಳಿಗಾಗಿ ಹೊಲದಲ್ಲಿ ಮೇವು ಕೊಯ್ಯುತ್ತಿದ್ದ ವೇಳೆ ಮೋಟಾರ್​ನಿಂದ ಬೋರ್​​ವೇಲ್​ಗೆ ಸಂಪರ್ಕ ನೀಡಿದ್ದ ವೈರ್ ಕಟ್ ಆದ ಪರಿಣಾಮ ವಿದ್ಯುತ್ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸಿರವಾರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.