ETV Bharat / state

ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಮೋಸ ಮಾಡಿ ಜೈಲಿಗಟ್ಟಿದರು: ಗಾಲಿ ಜನಾರ್ದನ ರೆಡ್ಡಿ

ಜನರನ್ನು ನಂಬಿ ಪಕ್ಷ ಕಟ್ಟಿದ್ದೇನೆ, ವಿರೋಧಿಗಳು ಎಷ್ಟೇ ಇದ್ದರು ಹೆದರುವುದಿಲ್ಲ - ಸಿಂಹ ಸುಮ್ಮನೆ ಇದೆ ಅಂದ್ರೆ ಸಣ್ಣ ಪುಟ್ಟ ಬೇಟೆ ಆಡೋಲ್ಲ ಎಂದರ್ಥ, ದೊಡ್ಡ ಜಿಂಕೆಯನ್ನು ಟಾರ್ಗೆಟ್ ಮಾಡಿ ಅದನ್ನೇ ಬೇಟೆಯಾಡುತ್ತೆ - ಗಾಲಿ ಜನಾರ್ದನ ರೆಡ್ಡಿ.

first-convention-of-kalyan-rajya-pragati-party-in-raichur
ಗಾಲಿ ಜನಾರ್ದನ ರೆಡ್ಡಿ
author img

By

Published : Jan 6, 2023, 10:57 PM IST

ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಮೋಸ ಮಾಡಿ ಜೈಲಿಗಟ್ಟಿದರು

ರಾಯಚೂರು: ಗಾಡಿಗೆ ಡಿಸೇಲ್​ನಿಂದ ಹಿಡಿದು ಊಟ ಹಾಕೋದಕ್ಕೆ ಜನರು ತಯಾರು ಇದ್ದಾರೆ, ನನ್ನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಇನ್ನೂ ನೂರ ಜನ ಹುಟ್ಟಿ ಬರಬೇಕು. ರೆಡ್ಡಿ ಆಸ್ತಿ ಜಪ್ತಿ ವಿಚಾರವಾಗಿ ಮಾತನಾಡಿದ ಅವರು, ಹೈಕೋರ್ಟ್, ಸುಪ್ರೀಂ ಕೋರ್ಟ್​​ಗೆ ಹೋಗುತ್ತಿದ್ದಾರೆ. ಜನರಿಂದ ನಾನು ಇದ್ದೇನೆ. ಇಲ್ಲದಿದ್ದರೆ ಇವರು ನನ್ನ ಬದುಕೋಕೆ ಬಿಡುತ್ತಿರಲ್ಲಿಲ್ಲ ಎಂದು ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ವಿರೋಧಿಗಳನ್ನು ಕುಟುಕಿದರು.

ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಇಂದು ಆಯೋಜಿಸಿದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮೊದಲ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. ಬಳ್ಳಾರಿಗೆ ಬರೋದಕ್ಕೆ ಆಗುತ್ತಿಲ್ಲವೆಂದು ಬೆಂಬಲಿಗರ ಬೇಸರ ವ್ಯಕ್ತಪಡಿಸಿದ್ದ ವಿಚಾರಕ್ಕೆ ಸಂಬಂಧಪಟ್ಟಂತೆ, ಈ ವಿಷಯವನ್ನು ಹೇಳಿದ ಅವರು, ಹುಲಿ ಬೇಟೆಗೆ ಬಂದಿಲ್ಲ ಅಂದರೆ ಅದಕ್ಕೆ ಶಕ್ತಿ ಇಲ್ಲ ಅಂತಾ ಅಲ್ಲ. ಅದಕ್ಕೆ ಹಸಿವಿಲ್ಲ ಅಂತಾನೂ ಅಲ್ಲ. ಅದು ಹೊರಗೆ ಬಂದರೆ ಸಣ್ಣ ಪುಟ್ಟ ಬೇಟೆ ಆಡೋಲ್ಲ ಎಂದು ಅರ್ಥ. ಒಂದು ಹುಲಿ ದೊಡ್ಡ ಜಿಂಕೆಯನ್ನು ಟಾರ್ಗೆಟ್ ಮಾಡಿ ಅದನ್ನೇ ಬೇಟೆಯಾಡುತ್ತೆ ಎಂದು ಮಾರ್ಮಿಕವಾಗಿ ಹೇಳಿದರು.

ಸಿಎಂ ಆಗ್ತಿನಿ ಅಂತ ಮೋಸ ಮಾಡಿದರು: ಜನರ ಪ್ರೀತಿ ಇಟ್ಕೊಂಡು ನಾನು ಎಷ್ಟು ದಿನ ಮನೇಲಿ ಕೂರುವುದಕ್ಕೆ ಆಗುತ್ತದೆ. ಕೊನೆಯ ಉಸಿರು ಇರೋವರೆಗೂ ನಾನು ಜನರ ಜೊತೆ ಇರ್ತೀನಿ. ಜನಾರ್ದನರೆಡ್ಡಿ ಸಿಎಂ ಸೀಟ್​ಗೆ ಹೋಗುತ್ತಾರೆ ಅನ್ನೋ ಕಾರಣಕ್ಕೆ ನನ್ನ ಬಲಿ ಕೊಟ್ಟರು. ಇದನ್ನು ನನ್ನ ಒಬ್ಬ ಸ್ನೇಹಿತ ನಾನು ಜೈಲಿನಲ್ಲಿ ಇದ್ದಾಗ ಹೇಳಿದ್ದ. ನಾನು ಯಾವುದೇ ಮೋಸ, ಕುತಂತ್ರ ಮಾಡಿದೋನಲ್ಲ. ಯಾರು ಯಾರು ಕುತಂತ್ರ, ಮೋಸ ಮಾಡಿದ್ದಾರೋ ಅವರನ್ನು ದೇವರು ನೋಡುತ್ತಾನೆ. ನಾನು ಏನು ಹೇಳ್ತೀನೋ ಅದನ್ನ ಮಾಡೇ ತೀರ್ತೀನಿ ಎಂದರು.

ನಿಮ್ಮ ಶಕ್ತಿ ನನ್ನ ಜೊತೆ ಇರಬೇಕು. ದೊಡ್ಡವರು ನಿಮ್ಮ ಜೊತೆ ಬಂದು ಅವರೇ ನನ್ನ ಹತ್ರ ಕರೆದುಕೊಂಡು ಬರ್ತಾರೆ. ಹೀಗಾಗಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಬೇಕು. ಯಾರೇ ತೊಂದರೆ ಮಾಡಬೇಕು ಅಂತಾ ಬಂದರೂ, ನಿಮ್ಮ ಆಶೀರ್ವಾದ ಇದ್ದರೆ ಯಾರೂ ಏನೂ ಮಾಡೋದಕ್ಕೆ ಆಗಲ್ಲ. ನೀವ್ಯಾರೂ ತಲೆ ತಗ್ಗಿಸುವಂತ ಕೆಲಸ ನಾನು ಮಾಡೋದಿಲ್ಲ ಎಂದರು.

ದಕ್ಷಿಣ ಭಾರತದಲ್ಲಿ ಬಿಜೆಪಿ ಗಟ್ಟಿಗೊಳಿಸಿದ್ದು ಜನಾರ್ದನ ರೆಡ್ಡಿ: ನಾನು ಹೊಸ ಪಕ್ಷ ಸ್ಥಾಪನೆ ಮಾಡಿ 12 ದಿನವಾಗಿದೆ, ಇದು ಮೊದಲ ಸಾರ್ವಜನಿಕ ಮತ್ತು ಕಾರ್ಯಕರ್ತರ ಸಭೆ ಇದಾಗಿದೆ. ನನ್ನ ಪಾಲಿಗೆ ಇದೊಂದು ಇದು ಒಂದು ಐತಿಹಾಸಿಕ ಸಭೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲಿದೆ. ಪ್ರಾದೇಶಿಕ ಪಕ್ಷ ಮಾಡಿ ಎಲ್ಲರೂ ಮಾಡಿ ಸೋತಿದ್ದಾರೆ. ಎಲ್ಲರೂ ಜನಾರ್ದನ ರೆಡ್ಡಿ ಏನು ಮಾಡಬಹುದು ಅಂದು ಹೇಳುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಗಟ್ಟಿಗೊಳಿಸಿದ್ದು, ಇದೇ ಜನಾರ್ದನ ರೆಡ್ಡಿ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅಧಿಕಾರಕ್ಕೆ ಬರುವುದಲ್ಲಿ ಸಂದೇಹವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜನರನ್ನು ನಂಬಿ ರಾಜಕೀಯಕ್ಕೆ: ಸಿಂಧನೂರು ಕ್ಷೇತ್ರದಿಂದಲೇ ನನ್ನ ಪಕ್ಷದ ಮೊದಲ ಸಭೆ ಮಾಡುತ್ತಿದ್ದೇನೆ. ಜನಾರ್ದನರೆಡ್ಡಿ ಜೊತೆ ಯಾರು ಬರ್ತಾರೆ ಎಂದೆಲ್ಲ ಮಾತನಾಡುತ್ತಿದ್ದರು. ಈಗಾಗಲೇ ಗಂಗಾವತಿಯಲ್ಲಿ ನನ್ನ ಪತ್ನಿ ಮನೆ ಗೃಹಪ್ರವೇಶ ಮಾಡಿದ್ದಾರೆ. ನಾನು ಜನರನ್ನು ನಂಬಿ ರಾಜಕೀಯಕ್ಕೆ ಬಂದಿದ್ದೇನೆ. ಪ್ರಾದೇಶಿಕ ಪಕ್ಷಗಳಿಗೆ ನಮ್ಮ ಭಾಗದ ಜನರ ದುಃಖ ದುಮ್ಮಾನಗಳು ತಿಳಿದಿರುತ್ತವೆ. ಜನರ ಮನೆ ಬಾಗಿಲಿಗೆ ಹೋಗಿ ಕೆಲಸ ಮಾಡುವ ಗುರಿ ಕೆಆರ್​ಪಿ ಪಕ್ಷ ಹೊಂದಿದೆ.

ವಿದೇಶಿ ರಸ್ತೆಗಳ ರೀತಿ ಉತ್ತರ ಕರ್ನಾಟಕದ ರೋಡ್​ಗಳು ಆಗುತ್ತವೆ: ಸಿಂಧನೂರಿಗೆ ಒಂದೆರಡು ವಾರದಲ್ಲಿ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತೇನೆ. ಇದರ ಜೊತೆಗೆ ಹಲವಾರು ಕ್ಷೇತ್ರದ ಅಭ್ಯರ್ಥಿಗಳನ್ನೂ ಘೋಷಣೆ ಮಾಡುತ್ತೇನೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವನ್ನಾಗಿ ಕೊಡಿ ಎಂದರೆ. ದಕ್ಷಿಣದವರು ಬಂಗಾರದ ತಟ್ಟೆಯಲ್ಲಿ ಇಟ್ಟು ಕೊಡುತ್ತಾರೆ. ಆದರೆ ಅದು ಬೇಡ, ನೀವು ಭಾರತದ ರಸ್ತೆಗಳ ಮೇಲೆ ಓಡಾಡುತ್ತಿದ್ದೇವಾ?. ಫಾರಿನ್ ನಲ್ಲಿ ಓಡಾಡ್ತಿದ್ದೇವಾ ಎಂದು ಬಾಯಿ ಮೇಲೆ ಬೆರಳಿಟ್ಟುಕೊಳ್ಬೇಕು. ಹಾಗೆ ಸಿಂಧನೂರನ್ನ ಅಭಿವೃದ್ಧಿ ಮಾಡುತ್ತೇನೆ. ಒಂದು ಅವಕಾಶ ಮಾಡಿ ಕೊಡಿ ಎಂದು ಮತದಾರರನ್ನ ಮನವಿ ಮಾಡಿದರು. ಜನಾರ್ಧನರೆಡ್ಡಿ ಒಬ್ಬಂಟಿ ಅಂತಿದ್ದಾರೆ, ನಾನು ಒಬ್ಬಂಟಿ ಅಂತಾ ತೋರಿಸಿಕೊಳ್ಳೋದಕ್ಕೆ ಬೆಂಗಳೂರಿನಲ್ಲಿ ಕೂತು ಮಾಧ್ಯಮಗೋಷ್ಠಿ ಮಾಡಿದ್ದು, ಆರು ಕೋಟಿ ಜನರಿಗೆ ಒಬ್ಬನೇ ಜನಾರ್ದನರೆಡ್ಡಿ, ಜನರೇ ನನ್ನ ಜೊತೆಗಿದ್ದಾರೆ.

ಕಿರೀಟಿ ಸಿನಿಮಾ ಎಲೆಕ್ಷನ್​ ನಂತರ ಬಿಡುಗಡೆ: ನನ್ನ ಮಗ ಸಿನಿಮಾ ನಟನಾಗಿದ್ದಾನೆ. ಚುನಾವಣೆ ನಂತರ ಮಗನ ಸಿನಿಮಾ ರಿಲೀಸ್ ಮಾಡಿಸ್ತೇನೆ. ಏಕೆಂದರೆ ಅದನ್ನ ರಾಜಕೀಯಕ್ಕೆ ಬಳಸಿಕೊಲ್ತಿದ್ದಾನೆ ಅನ್ನೋ ಅಪವಾದ ಬೇಡ. ಅದೇ ಕಾರಣಕ್ಕೆ ಚುನಾವಣೆ ಮುಗಿದ್ಮೇಲೆ ಮಗನ ಸಿನಿಮಾ ರಿಲೀಸ್ ಮಾಡೋದಾಗಿ ಘೋಷಣೆ ಮಾಡಿದರು. ಮಗ ನನಗೆ ಬೆಂಬಲವಾಗಿ, ಕೆಲಸ ಮಾಡಲು ಬರ್ತಿದ್ದಾನೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಪಟ್ಟಣದಲ್ಲಿ ಜನಾರ್ದನ ರೆಡ್ಡಿ ಮೆರವಣಿಗೆ ನಡೆಯಿತು. ಮೆರವಣಿಯ ಮಾರ್ಗದ ನಡುವೆ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಬೃಹತ್ ಗಾತ್ರ ಸೇಬಿನ ಹಾರ ಹಾಕಿ ಸ್ವಾಗತಿಸಿದರು. ಅಲ್ಲದೇ ಮುಖ್ಯರಸ್ತೆಯಲ್ಲಿ ಮೆರವಣಿಗೆಯಿಂದಾಗಿ ಸಂಚಾರದಲ್ಲಿ ಅಸ್ತವ್ಯಸ್ತವಾಗಿ ಜನರು ಕೆಲ ಸಮಯ ಜನರು ಪರದಾಡುವಂತೆ ಆಯಿತು.

ಇದನ್ನೂ ಓದಿ: ನಾನು ಬಸವಣ್ಣನ ತತ್ವದ ಮೇಲೆ ನಡೆಯುವವನು, ಒಮ್ಮೆ ಮುಂದಿಟ್ಟ ಹೆಜ್ಜೆ ಹಿಂದಿಡಲ್ಲ: ಜನಾರ್ದನ ರೆಡ್ಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.