ETV Bharat / state

ಕೈದಿಗಳಿಗೆ ಕುಟುಂಬಸ್ಥರ ಜೊತೆ ಮಾತನಾಡಲು ಇ-ಮುಲಾಕಾತ್​ ಸೇವೆ - ರಾಯಚೂರು ಕೈದಿಗಳ ಸುದ್ದಿ

ಜೈಲುವಾಸ ಅನುಭವಿಸುತ್ತಿರುವ ಕೈದಿಗಳಿಗೆ ತಮ್ಮ ಕುಟುಂಬಸ್ಥರ ಜೊತೆ ಮಾತನಾಡಲು ಕಾರಾಗೃಹ ಮತ್ತು ಸುಧಾರಣೆ ಸೇವಾ ಇಲಾಖೆಯು ಇ-ಮುಲಾಕಾತ್​ ಎಂಬ ವೆಬ್​ಸೈಟ್​ ಪ್ರಾರಂಭಿಸಿದೆ.

ಇ-ಮುಲಾಖತ್​ ಸೇವೆ
ಇ-ಮುಲಾಖತ್​ ಸೇವೆ
author img

By

Published : Dec 15, 2020, 5:37 PM IST

Updated : Dec 15, 2020, 6:04 PM IST

ರಾಯಚೂರು: ಜೈಲುವಾಸ ಅನುಭವಿಸುತ್ತಿರುವ ಅನೇಕ ಕೈದಿಗಳಿಗೆ ಕೊರೊನಾ ಸಂದರ್ಭದಲ್ಲಿ ತಮ್ಮ ಕುಟುಂಬಸ್ಥರನ್ನು ಭೇಟಿ ಮಾಡುವ ಅವಕಾಶವನ್ನು ಸ್ಥಗಿತ ಮಾಡಲಾಗಿತ್ತು. ಆದರೆ ಇದೀಗ ಕಾರಾಗೃಹ ಮತ್ತು ಸುಧಾರಣೆ ಸೇವಾ ಇಲಾಖೆ ಇ-ಮುಲಾಕಾತ್​ ವೆಬ್​ ಮೂಲಕ ಸಂಬಂಧಿಕರ ಜೊತೆ ಮಾತನಾಡಲು ಅವಕಾಶ ಕಲ್ಪಿಸಿದೆ.

ಕೋವಿಡ್ ಹಿನ್ನೆಲೆಯಲ್ಲಿ ಮಾರ್ಚ್ 16ರಿಂದ ಕೈದಿಗಳಿಗೆ ತಮ್ಮ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರ ಭೇಟಿ ನಿರ್ಬಂಧ ಮಾಡಲಾಗಿತ್ತು. ಹೀಗಾಗಿ ಇದೀಗ ಕಾರಾಗೃಹ ಮತ್ತು ಸುಧಾರಣೆ ಸೇವಾ ಇಲಾಖೆ ಇ-ಮುಲಾಕಾತ್ (e-prisons npip) ವೆಬ್ ಮೂಲಕ ಸಂದರ್ಶನಕ್ಕೆ ಅವಕಾಶ ಕಲ್ಪಿಸಿರುವುದು ಜೈಲು ವಾಸಿಗಳಲ್ಲಿ ಸಂತಸ ಮೂಡಿಸಿದೆ.

ಇ-ಮುಲಾಕಾತ್ ಸೌಲಭ್ಯ ರಾಜ್ಯದ ಎಲ್ಲಾ ಕಾರಾಗೃಹದಲ್ಲಿ ಲಭ್ಯವಿದ್ದು, ಕೈದಿಗಳ ಮಾನಸಿಕ ಸ್ಥೈರ್ಯ ಹೆಚ್ಚಲು ಸಹಾಯಕವಾಗಿದೆ. ನಗರದ ಜಿಲ್ಲಾ ಕಾರಾಗೃಹದಲ್ಲಿ ಒಟ್ಟು 171 ಕೈದಿಗಳಲ್ಲಿ 164 ಪುರುಷ ಹಾಗೂ 7 ಮಹಿಳಾ ಬಂದಿಗಳು ಇದ್ದು, ಇದರಲ್ಲಿ 5 ಜನ ಮಾತ್ರ ಶಿಕ್ಷಿತ ಅಪರಾಧಿಗಳು. ಪ್ರತಿಯೊಬ್ಬ ಜೈಲುವಾಸಿಗಳಿಗೆ ಹತ್ತು ನಿಮಿಷಗಳ ಕಾಲಾವಕಾಶ ಕಲ್ಪಿಸಲಾಗುತ್ತಿದೆ.

ಇ-ಮುಲಾಕಾತ್​ ಸೇವೆ ಮೂಲಕ ಕುಟುಂಬಸ್ಥರ ಜೊತೆ ಮಾತನಾಡುತ್ತಿರುವ ಕೈದಿ

ಕೆಲದಿನಗಳಿಂದ ಆರಂಭವಾಗಿರುವ ಈ ಸೇವೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಬಂಧಿಕರು ನೋಂದಣಿ ಮಾಡಿಸುತ್ತಿದ್ದು, ಕ್ರಮ ಸಂಖ್ಯೆ ಆಧಾರದ ಮೇಲೆ ಸಂದರ್ಶನಕ್ಕೆ ಸಮಯ ನಿಗದಿ ಮಾಡಲಾಗುತ್ತಿದೆ.

ಇ-ಮುಲಾಕಾತ್​ನಲ್ಲಿ ಸಂದರ್ಶಿಸುವವರು ತಮ್ಮ ಸ್ಮಾರ್ಟ್​ಪೋನ್, ಕಂಪ್ಯೂಟರ್ ಮೂಲಕ e- prisons npip ವೆಬ್ ಸೈಟ್​ನಲ್ಲಿ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಮತ್ತು ಇ-ಮೇಲ್ ಐಡಿ ನಮೂದಿಸಿ ನೋಂದಣಿ ಮಾಡಿಕೊಳ್ಳಬೇಕು. ಸಂದರ್ಶಕರ ಕೋರಿಕೆಯನ್ನು ಕಾರಾಗೃಹದ ಸಿಬ್ಬಂದಿ ಅನುಮತಿಸಿ ದಿನಾಂಕ ಮತ್ತು ಸಮಯ ನಿಗದಿ ಪಡಿಸುತ್ತಾರೆ.

Last Updated : Dec 15, 2020, 6:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.