ರಾಯಚೂರು : ಮಸ್ಕಿ ಪಟ್ಟಣದ ಹೊರ ವಲಯದ ಮಸ್ಕಿ-ಕವಿತಾಳ ರಸ್ತೆಯಲ್ಲಿ ಜನರಿಗೆ ಹಣ ಹಂಚಿಕೆ ಮಾಡುತ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಜನರನ್ನು ಸಾಲಿನಲ್ಲಿ ನಿಲ್ಲಿಸಿಕೊಂಡು ಒಬ್ಬರಿಗೆ ತಲಾ 200 ರೂ. ಹಂಚಿಕೆ ಮಾಡಲಾಗಿದೆ.
ಕೆಲ ವ್ಯಕ್ತಿಗಳು 200 ರೂ., 100 ರೂ. ನೋಟುಗಳನ್ನು ಕೈಯಲ್ಲಿ ಹಿಡಿದುಕೊಂಡು ಹಂಚಿಕೆ ಮಾಡುತ್ತಿದ್ದು, ಹಣ ಹಂಚುವವರು ಮೊಬೈಲ್ನಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಯಾವ ಕಾರಣಕ್ಕೆ ಹಣ ಹಂಚಿಕೆ ಮಾಡುತ್ತಿದ್ದಾರೆ ಎನ್ನುವುದರ ಬಗ್ಗೆ ಮಾಹಿತಿಯಿಲ್ಲ.
ಪಟ್ಟಣದಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಇಂದು ಸಿಎಂ ಬಿ ಎಸ್ ಯಡಿಯೂರಪ್ಪ, ಬಿಜೆಪಿ ಸಂಭಾವ್ಯ ಅಭ್ಯರ್ಥಿ ಪ್ರತಾಪ್ಗೌಡ ಪಾಟೀಲ್ ಪರ ಪ್ರಚಾರ ನಡೆಸಲಿದ್ದಾರೆ. ಹೀಗಾಗಿ, ಸಮಾವೇಶಕ್ಕೆ ಕರೆ ತರಲು ಹಂಚಿಕೆ ಮಾಡುತ್ತಿದ್ದಾರಾ ಎಂಬ ಗುಮಾನಿ ಎದ್ದಿದೆ.
ಇದನ್ನೂ ಓದಿ..ಉಪ ಚುನಾವಣೆ ಗೆಲುವಿನ ಸಂಬಂಧ ಚರ್ಚೆ ನಡೆದಿದೆ : ದಿನೇಶ್ ಗುಂಡೂರಾವ್