ರಾಯಚೂರು : ಉರಿಗೌಡರನ್ನು ಮತ್ತು ನಂಜೇಗೌಡರನ್ನು ಇತಿಹಾಸ ಪುಟಗಳಿಂದ ಹೊರತಂದಿರುವುದಕ್ಕೆ, ಕಾಂಗ್ರೆಸ್ ಮತ್ತು ಜೆಡಿಎಸ್ನವರಿಗೆ ಏಕೆ ಇರಿಸು ಮುರಿಸು ಎಂದು ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು. ರಾಯಚೂರು ತಾಲೂಕಿನ ಮಟಮಾರಿ ಗ್ರಾಮದಲ್ಲಿ ಇಂದು ಆಯೋಜಿಸಿದ ಜಿಲ್ಲಾ ಪರಿಶಿಷ್ಟ ಜಾತಿಗಳ ಸಮಾವೇಶದ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು. ಉರಿಗೌಡ ಮತ್ತು ನಂಜೇಗೌಡರ ಕುರಿತು ಒಂದು ಇತಿಹಾಸ ಇದೆ ಎಂದು ತಿಳಿಸಿದರು.
ವೋಟ್ಗಾಗಿ ನಡೆಯಿತಾ ಟಿಪ್ಪು ಹುಟ್ಟುಹಬ್ಬ? : ಟಿಪ್ಪುವಿನ ಬರ್ತ್ ಡೇ ಮಾಡಿ ಎಂದು ಯಾರಾದರೂ ಮುಸ್ಲಿಂರು ಬಂದು ನಿಮಗೆ ಅರ್ಜಿ ಕೊಟ್ಟಿದ್ರಾ?. ಅವರನ್ನು ಓಲೈಕೆ ಮಾಡಲು ಕೇಳಿದ್ರಾ?. ನಿಮ್ಮ ರಾಜಕೀಯ ತೆವಲಿಗಾಗಿ, ಕಾಂಗ್ರೆಸ್ ವೋಟ್ ಬ್ಯಾಂಕ್ ಗಾಗಿ ನೀವು ಇದನ್ನು ಎಲ್ಲಾ ಮಾಡುವಂತದ್ದು ಎಂದು ಛಲವಾದಿ ನಾರಾಯಣಸ್ವಾಮಿ ಅವರು ಗುಡುಗಿದರು.
ನಿರ್ಮಾಪಕ ಮುನ್ನಿರತ್ನ ಅವರು ಸಿನಿಮಾ ಮಾಡುವ ಪರ ವಿರೋಧ ನನ್ನ ಪ್ರಶ್ನೆ ಅಲ್ಲ. ನನ್ನ ಕೆಲಸಕ್ಕೂ ನನ್ನ ಪಕ್ಷಕ್ಕೂ ಸಂಬಂಧವಿಲ್ಲ. ನನ್ನ ಕೆಲಸ ಬಿಟ್ಟುಬಿಡು ಎಂದು ಪಕ್ಷ ಹೇಳುವುದು ಇಲ್ಲ. ನಿರ್ಮಲಾನಂದ ಸ್ವಾಮೀಜಿಗಳು ಇಂದು ಮಧ್ಯೆ ಪ್ರವೇಶ ಮಾಡಿ ಈ ಬಗ್ಗೆ ಸಿನಿಮಾ ಅಥವಾ ಚರ್ಚೆ ಮಾಡದಂತೆ ಮುನಿರತ್ನ ಅವರನ್ನು ಕರೆದು ಸಲಹೆ ನೀಡಿದ್ದಾರೆ. ಈ ವಿಚಾರವಾಗಿ ಮುನ್ನಿರತ್ನ ಅವರು ಸಹ ಈ ಕುರಿತು ಸಿನಿಮಾ ಮಾಡುವುದಿಲ್ಲ ಎಂದು ಹೇಳಿದ್ದಾರೆ ಎಂದರು.
ಸಿದ್ದರಾಮಯ್ಯನನ್ನು ಸೋಲಿಸಲು ಸಿದ್ಧರಾದರಾ ದಲಿತ ನಾಯಕರು? : ಇನ್ನು ಈ ವೇಳೆ ಮಾಜಿ ಸಿಎಂ ಸಿದ್ಧರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದಿಲ್ಲ, ವರುಣಾದಿಂದ ಅಖಾಡಕ್ಕಿಳಿಯುತ್ತಾರೆ ಎಂಬ ವಿಚಾರ ಕುರಿತಂತೆ ಪ್ರತಿಕ್ರಿಯೆ ನೀಡಿದ ಛಲವಾದಿ ನಾರಾಯಣಸ್ವಾಮಿ ಅವರು, ಸಿದ್ದರಾಮಯ್ಯನವರು ಎಂದು ಕೋಲಾರದಿಂದ ಸ್ಪರ್ಧೆ ಮಾಡುತ್ತೇನೆ ಎಂದರೂ, ಅಂದೇ ನಾನು ಅವರು ಅಲ್ಲಿ ನಿಲ್ಲಲ್ಲ ಎಂದಿದ್ದೆ. ಏಕೆಂದರೆ ಅವರ ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲೇ 38 ಸಾವಿರದಿಂದ ಸೋತಿದ್ದರು. ಅಲ್ಲಿಂದ ಬಾದಾಮಿಗೆ ಓಡಿ ಹೋಗಿ ಬಚಾವಾಗಿದ್ದರು ಎಂದು ನಾರಾಯಣಸ್ವಾಮಿ ಟೀಕಿಸಿದರು.
ಈ ಬಾರಿ ಬಾದಾಮಿಯಿಂದ ಗೆಲ್ಲಲು ಸಾಧ್ಯವಿಲ್ಲ ಎನ್ನುವುದನ್ನು ತಿಳಿದ ಮೇಲೆ ಸಿದ್ದರಾಮಯ್ಯ ಕೋಲಾರಕ್ಕೆ ಬರುತ್ತಾರೆ. ಆದರೆ ಕೋಲಾರ ಕಾಂಗ್ರೆಸ್ನಲ್ಲಿ ಗುಂಪುಗಾರಿಕೆಯಿದೆ. ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ ಹಾಗೂ ಪರಮೇಶ್ವರ್ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ದಲಿತ ನಾಯಕರನ್ನು ಈ ಹಿಂದೆ ಸಿದ್ದರಾಮಯ್ಯ ಸೋಲಿಸಿದ್ದರು. ಇದರಿಂದ ದಲಿತರು ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಿ, ದಲಿತ ವಿರೋಧಿ ನಾಯಕರಾಗಿದ್ದಾರೆ. ಅದೇ ರೀತಿ ಈಗ ಸಿದ್ದರಾಮಯ್ಯರನ್ನು ಸೋಲಿಸಲು ದಲಿತ ನಾಯಕರು ಮುಂದಾಗಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ಸ್ವಾಮೀಜಿಗಳ ಮಾತನ್ನು ಪಾಲಿಸೋಣ ಎಂದ ಸಿಎಂ.. ಉರಿಗೌಡ ನಂಜೇಗೌಡ ಸಿನಿಮಾ ವಿಚಾರವಾಗಿ ಇಂದು ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ನಿರ್ಮಲಾನಂದ ಸ್ವಾಮೀಜಿಯವರ ಸಲಹೆಯನ್ನು ಪಾಲಿಸಬೇಕು ಎಂದು ಹೇಳಿದ್ದರು.
ಇದನ್ನೂ ಓದಿ :ಯಾರದೋ ಅಪ್ಪನ ಮಗ, ಅಣ್ಣನ ಮಗ ಎನ್ನುವ ಕಾರಣಕ್ಕೆ ಟಿಕೆಟ್ ನೀಡುವುದಿಲ್ಲ: ಬಿ.ವೈ. ವಿಜಯೇಂದ್ರ