ETV Bharat / state

ಅಂತ್ಯ ಸಂಸ್ಕಾರಕ್ಕೆ ಸ್ಮಶಾನದಲ್ಲಿ ಸ್ಥಳದ ಅಭಾವ: ರಾಯಚೂರಲ್ಲಿ ಮೃತರ ಸಂಬಂಧಿಗಳ ಪರದಾಟ - ಗೌರವಯುತ ಅಂತ್ಯ ಸಂಸ್ಕಾರ

ರಾಂಪೂರ ಬಡಾವಣೆ ನಗರಸಭೆಗೆ ಸೇರ್ಪಡೆಗೊಂಡು ಎರಡು ದಶಕಗಳು ಕಳೆದರೂ, ಹಳೆಯ ಅರ್ಧ ಎಕರೆ ಸ್ಮಶಾನ ಭೂಮಿಯಲ್ಲೇ ಹಲವಾರು ದಶಕಗಳಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನಡೆಸಿಕೊಂಡು ಬರುತ್ತಿದೆ. ಇದೀಗ ಈ ಸ್ಮಶಾನದಲ್ಲಿ ಶವ ಸಂಸ್ಕಾರಕ್ಕೆ ಸ್ಥಳದ ಅಭಾವ ಎದುರಾಗಿದೆ.

deprivation-of-place-in-cemetery-raichur-news
ಅಂತ್ಯ ಸಂಸ್ಕಾರಕ್ಕೆ ಸ್ಮಶಾನದಲ್ಲಿ ಸ್ಥಳದ ಅಭಾವ
author img

By

Published : May 13, 2021, 3:46 PM IST

ರಾಯಚೂರು: ನಗರದ ವಾಡ್೯ ನಂ. 35 ರಾಂಪೂರ ಬಡಾವಣೆಯಲ್ಲಿ, ಕೆಳದ ಎರಡು ತಿಂಗಳಲ್ಲಿ 27 ಜನರು ಸಹಜವಾಗಿ ಮೃತಪಟ್ಟಿದ್ದಾರೆ. ಆದರೆ ಅವರ ಗೌರವಯುತ ಅಂತ್ಯ ಸಂಸ್ಕಾರಕ್ಕೆ ಸ್ಮಶಾನದಲ್ಲಿ ಸ್ಥಳದ ಅಭಾವದಿಂದ ಮೃತರ ಸಂಬಂಧಿಗಳು ಪರದಾಡುವಂತಾಗಿದೆ.

ಅಂತ್ಯ ಸಂಸ್ಕಾರಕ್ಕೆ ಸ್ಮಶಾನದಲ್ಲಿ ಸ್ಥಳದ ಅಭಾವ

ಓದಿ: ತಾಯಿಯ ಜೀವ ಉಳಿಸಿದ ಮೈಸೂರಿನ ಕೋವಿಡ್ ಆಸ್ಪತ್ರೆಯಲ್ಲಿ ಮಗನಿಂದ ಉಚಿತ ವೈದ್ಯಕೀಯ ಸೇವೆ!

ರಾಂಪೂರ ಬಡಾವಣೆ ಪಂಚಾಯಿತಿಯಿಂದ ನಗರಸಭೆಗೆ ಸೇರ್ಪಡೆಗೊಂಡು ಎರಡು ದಶಕಗಳು ಕಳೆದರೂ, ಹಳೆಯ ಅರ್ಧ ಎಕರೆ ಸ್ಮಶಾನ ಭೂಮಿಯಲ್ಲಿ ಹಲವಾರು ದಶಕಗಳಿಂದ ಮೃತ ಪಟ್ಟವರ ಅಂತ್ಯಸಂಸ್ಕಾರ ನಡೆಸಿಕೊಂಡು ಬರುತ್ತಿದೆ. ಇದೀಗ ಸಂಪೂರ್ಣವಾಗಿ ಭರ್ತಿಯಾಗಿದೆ. ಹೊಸದಾಗಿ ಕುಣಿ ತೊಡಲು ಸ್ಥಳವಿಲ್ಲದ ಕಾರಣ, ಹಳೆಯ ಕುಣಿಗಳ ಮೇಲೆ ಅಂತ್ಯಸಂಸ್ಕಾರ ನಡೆಸುವ ಅನಿವಾರ್ಯತೆ ಎದುರಾಗಿದೆ.

5 ಸಾವಿರಕ್ಕೂ ಅಧಿಕ ಜನ ಸಂಖ್ಯೆ ಹೊಂದಿರುವ ಬಡಾವಣೆಯಲ್ಲಿ ಅತಿ ಹೆಚ್ಚು ಜನರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರು ವಾಸವಾಗಿದ್ದಾರೆ. ಕಳೆದ ಎರಡು ತಿಂಗಳಲ್ಲಿ 27 ಜನರು ಸಹಜವಾಗಿ ಮೃತಪಟ್ಟಿದ್ದು, ಸ್ಮಶಾನದಲ್ಲಿ ಸ್ಥಳದ ಅಭಾವ ಇರುವುದರಿಂದ ಉಳ್ಳವರು ತಮ್ಮ ಖಾಸಗಿ ಸ್ಥಳದಲ್ಲಿ ಗೌರವಯುತ ಅಂತ್ಯ ಸಂಸ್ಕಾರ ನೆರವೇರಿಸುದ್ದಾರೆ. ಆದ್ರೆ ಸ್ವಂತ ಜಮೀನು ಇಲ್ಲದ ಬಡವರು, ಇಂದು ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿ ಕೆಲ ದಿನಗಳ ಅಂತರದಲ್ಲಿ ಅದೇ ಸ್ಥಳದಲ್ಲಿ ಮತ್ತೊಬ್ಬರ ಅಂತ್ಯಕ್ರಿಯೆ ನಡೆಸುವ ಅನಿವಾರ್ಯತೆ ಎದುರಾಗಿದೆ. ಈ ಸಂದರ್ಭದಲ್ಲಿ ಕೊಳೆತ ಶವಗಳನ್ನು ಸಹ ತೆಗೆದು ಹಾಕಿರುವ ಘಟನೆಗಳು ನಡೆದಿವೆ.

ಹೊಸ ಸ್ಮಶಾನಕ್ಕಾಗಿ 2018ರಲ್ಲಿ ಬಡಾವಣೆಯ ಸುತ್ತಲೂ ನಾಲ್ಕು ಸರ್ಕಾರಿ ಸ್ಥಳಗಳನ್ನು ಗುರುತಿಸಿದ್ದರೂ ಸಹ ಇಲ್ಲಿಯವರೆಗೆ ಯಾವುದೇ ಸ್ಥಳವನ್ನು ಅಂತಿಮಗೊಳಿಸಿಲ್ಲ. ಈ ಕುರಿತು ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಬೇಡಿಕೆಯನ್ನು ಅವರು ಈಡೇರಿಸಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.