ರಾಯಚೂರು : ಪ್ರವಾಹದಿಂದ ತತ್ತರಿಸಿದ್ದರೂ ಜಿಲ್ಲೆಯಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ನಗರದಲ್ಲಿ ಚೆಂಡು ಹೂ, ಮಲ್ಲಿಗೆ, ಕುಂಬಳಕಾಯಿ, ಬಾಳೆ ಎಲೆ, ಹಣತೆ ಹಾಗೂ ವಿವಿಧ ಹಬ್ಬದ ವಸ್ತುಗಳ ಖರೀದಿ ಜೋರಾಗಿ ನಡೆಯಿತು. ಅಲ್ಲದೇ ಹಣತೆ, ದೀಪಗಳು, ಆಕಾಶ ಬುಟ್ಟಿಗಳು ಮಾರುಕಟ್ಟೆಯಲ್ಲಿ ಗ್ರಾಹಕರ ಮನಸೆಳೆದವು. ಕುಟುಂಬದ ಸದಸ್ಯರೆಲ್ಲ ಆಗಮಿಸಿ ಹೊಸ ಬಟ್ಟೆ ಖರೀದಿಸಿ ಸಂತಸಪಟ್ಟರು. ಇದೆಲ್ಲದರ ನಡುವೆ ಗ್ರಾಹಕರಿಗೆ ಬೆಲೆ ಏರಿಕೆ ಬರೆ ಎಳೆದಿದ್ದಂತು ಸತ್ಯ.