ರಾಯಚೂರು: ಬಿಸಿಲಿನ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದ್ದು, ಇದರಿಂದ ಜಿಲ್ಲೆಯ ಜನರು ಹೈರಾಣಾಗಿದ್ದಾರೆ.
ಈ ಬಿಸಿಲಿನ ತಾಪಮಾನ ನಾಳೆ ನಡೆಯುವ ಮತಎಣಿಕೆ ಕೊಠಡಿಗಳಿಗೆ ತಾಕದಂತೆ ಜಿಲ್ಲಾಡಳಿತ ಮತ ಎಣಿಕೆ ಕೊಠಡಿಗಳನ್ನ ಕೂಲ್ ಆಗಿರಿಸಲು ನೂರಾರು ಕೂಲರ್ಗಳನ್ನ ಆಳವಡಿಕೆ ಮಾಡಿದೆ. ನಗರದ ಎಲ್ವಿಡಿ ಮತ್ತು ಎಸ್ಆರ್ ಪಿಯು ಕಾಲೇಜುಗಳಲ್ಲಿ ಮತಎಣಿಕೆ ನಡೆಯಲಿದ್ದು,ಮತಎಣಿಕೆ ನಡೆಯುವ ಪ್ರತಿಯೊಂದು ಕೊಠಡಿಗಳಿಗೆ ಕೂಲರ್ಗಳನ್ನ ಅಳವಡಿಸಲಾಗುತ್ತಿದೆ. ಬಿಸಿಲಿನ ತಾಪಮಾನದಿಂದಾಗಿ ಮತಎಣಿಕೆ ಅಡಚಣೆ ಉಂಟಾಗಬಾರದು ಹಾಗೂ ಮತಯಂತ್ರಕ್ಕೆ ಯಾವುದೇ ರೀತಿಯಾಗಿ ತೊಂದರೆಯಾಗಬಾರದು ಎನ್ನುವ ದೃಷ್ಠಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು,ಸುಮಾರು 100 ಕೂಲರ್ ಗಳನ್ನ ಬಳಕೆ ಮಾಡಿಕೊಳ್ಳಲಾಗಿದೆ.
ಮತ ಎಣಿಕೆ ಕೇಂದ್ರ ಕೊಠಡಿ ಹೊರಗಡೆಯಿರುವ ಪ್ರತಿಯೊಂದು ಕಿಟಕಿಗಳಿಗೆ ಕೂಲರ್ ಆಳವಡಿಸುವ ಮೂಲಕ ಕೊಠಡಿಗಳನ್ನ ಕೂಲ್ ಆಗಿರಿಸುವ ಸಿದ್ದತೆ ಮಾಡಿಕೊಂಡಿದೆ.