ರಾಯಚೂರು: ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯಿಂದ ಇಂದು 10ನೇ ತಂಡದ ನಾಗರಿಕ, ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ಗಳ ನಿರ್ಗಮನ ಪಥಸಂಚಲನ ನಡೆಯಿತು.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಳ್ಳಾರಿ ವಲಯದ ಐಜಿಪಿ ನಂಜುಂಡ ಸ್ವಾಮಿ ಆಗಮಿಸಿದ್ದರು. ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಪೊಲೀಸರಿಗೆ ಇರುವುದು ಎರಡು ಹಬ್ಬಗಳು ಮಾತ್ರ. ಒಂದನೇಯದು ಪೊಲೀಸ್ ಧ್ವಜಾ ದಿನ ಹಾಗೂ ಎರಡನೇಯದು ಹುತಾತ್ಮರ ದಿನಾಚರಣೆ ಎಂದರು.
ಪೊಲೀಸರಿಗೆ ಈ ಹಿಂದೆ ಸರಕಾರ್ ಎನ್ನುತಿದ್ದರು. ಇದಕ್ಕೆ ಕಾರಣ ಪೊಲೀಸರು ಆಸ್ತಿಪಾಸ್ತಿ ರಕ್ಷಣೆ ಮಾಡಿ ಜನರ ರಕ್ಷಣೆಗೆ ಮುಂದಾಗುತ್ತಾರೆ ಎಂದು. ಪೊಲೀಸರು ಸಂವಿಧಾನದ ಆಶಯಗಳಿಗೆ ಬದ್ಧರಾಗಿ ಕೆಲಸ ಮಾಡುವ ಮೂಲಕ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.