ರಾಯಚೂರು : ಅಪ್ರಾಪ್ತ ಬಾಲಕಿಯ ವಿವಾಹ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ತಂಡ, ಬಾಲ್ಯ ವಿವಾಹ ತಡೆದು ಬಾಲಕಿಯನ್ನು ರಕ್ಷಿಸಿರುವ ಘಟನೆ ಲಿಂಗಸುಗೂರಿನಲ್ಲಿ ನಡೆದಿದೆ.
ತಾಲೂಕಿನ ನೀರಲಕೇರಿ ಗ್ರಾಮದ ರಾಮಣ್ಣ ಬಡಗಿ ಎಂಬುವರು ಅಪ್ರಾಪ್ತ ಬಾಲಕಿಗೆ ವಿವಾಹ ಮಾಡಲು ತಯಾರಿ ನಡೆಸಿದ್ದರು. ಖಚಿತ ಮಾಹಿತಿ ಮೇರೆಗೆ ಶಿಶು ಅಭಿವೃದ್ಧಿ ಯೊಜನಾಧಿಕಾರಿಗಳು ವಿವಾಹ ಬಂಧನಕ್ಕೆ ಸಿಲುಕುತ್ತಿರುವ ಬಾಲಕಿಯನ್ನು ರಕ್ಷಿಸಿ ತಂದೆಯಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದಾರೆ.