ರಾಯಚೂರು : ಕೊರೊನಾ ಸೋಂಕಿತರು ಹಾಗೂ ಜೊತೆಯಲ್ಲಿದ್ದು ಅವರ ಆರೈಕೆ ಮಾಡುವವರಿಗೆ ರಾಯಚೂರಿನಲ್ಲಿ ಚಿಕನ್ ಬಿರಿಯಾನಿ ನೀಡಲಾಯ್ತು.
ಮುನ್ನೂರುಕಾಪು ಯುವಕ ಸಂಘ ಹಾಗೂ ಲೆಮಾನ್ ರೆಸಾರ್ಟ್ ಮಾಲೀಕರು, 35 ಚಿಕನ್ ಹಾಗೂ 50 ಕೆಜಿ ರೈಸ್ ಬಳಸಿ ತಾವೇ ಚಿಕನ್ ಬಿರಿಯಾನಿ ಸಿದ್ಧಪಡಿಸಿದರು.
ಬಳಿಕ ಪೊಟ್ಟಣಗಳನ್ನ ಮಾಡಿ ನಗರದಲ್ಲಿರುವ ಓಪೆಕ್ ಹಾಗೂ ರಿಮ್ಸ್ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ರೋಗಿಗಳಿಗೆ ವಿತರಣೆ ಮಾಡಿದ್ರು. ಕೊರೊನಾ ಸೋಂಕಿತರ ಜತೆಯಲ್ಲಿದ್ದು, ಅವರ ಆರೈಕೆ ಮಾಡುವವರಿಗೂ ಸಹ ಚಿಕನ್ ಬಿರಿಯಾನಿ ನೀಡಿದ್ರು.
ಕೊರೊನಾ ಸೋಂಕಿನ ಹೆಚ್ಚಳ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಾಗೂ ಅವರನ್ನ ಆರೈಕೆ ಮಾಡುವವರಿಗೆ ಊಟದ ಸಮಸ್ಯೆ ಎದುರಾಗಬಾರದು ಎನ್ನುವ ದೃಷ್ಟಿಯಿಂದ ಈ ಸಾಮಾಜಿಕ ಕಾರ್ಯಕ್ಕೆ ಸಹೃದಯರು ಮುಂದಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.