ರಾಯಚೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು 10ನೇ ಚಾತುರ್ಮಾಸದ ದೀಕ್ಷೆಯನ್ನು ಇಂದು ಸ್ವೀಕರಿಸಿದರು. ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಚಾತುರ್ಮಾಸದಲ್ಲಿ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ನಿತ್ಯ ಹಮ್ಮಿಕೊಳ್ಳಲಾಗುತ್ತದೆ. ಈ ಬರುವ ತಿಂಗಳು 351 ನೇ ಆರಾಧನಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು.
ಇನ್ನು ದೇಶ, ವಿದೇಶ, ರಾಜ್ಯಗಳಲ್ಲಿ ಜಿಲ್ಲೆಗಳಲ್ಲಿ ಸೇರಿದಂತೆ ಮಂತ್ರಾಲಯ ಮಠದ ಶಾಖಾ ಮಠಗಳಲ್ಲಿ ಮೂಲ ಬೃಂದಾವನ ಸ್ಥಳಗಳಲ್ಲಿ ಚಾತುರ್ಮಾಸದಲ್ಲಿ ವಿಶೇಷವಾದ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತಿದೆ. ಈ ಶುಭ ಸಂದರ್ಭದಲ್ಲಿ ಮಠದ ಶಿಷ್ಯರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ತಿಳಿಸಿದ್ದಾರೆ.
ಇನ್ನು ಕಾರ್ಗಿಲ್ ವಿಜಯೋತ್ಸವ ಬಗ್ಗೆ ಮಾತನಾಡುತ್ತಾ, ದೇಶ ರಕ್ಷಣೆಯಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸಿದೇ ದೇಶಕ್ಕಾಗಿ ಹೋರಾಡಿದ ವೀರಯೋಧರನ್ನು ನೆನೆಯುವ ದಿನವಾಗಿದ್ದು, ಅವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿರುವುದು ಅಮರವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ : ಸೋರುತಿದೆ ಶಬರಿಮಲೆ ಅಯ್ಯಪ್ಪನ ಗರ್ಭಗುಡಿಯ ಚಿನ್ನಲೇಪಿತ ಮಾಳಿಗೆ!