ರಾಯಚೂರು : ವ್ಯಕ್ತಿಯೊಬ್ಬ ಓಎಲ್‌ಎಕ್ಸ್‌ನಲ್ಲಿ ದ್ವಿಚಕ್ರ ವಾಹನ ಮಾರಾಟ ಮಾಡುವುದಾಗಿ ಫೋಟೋ ಪೋಸ್ಟ್ ಮಾಡಿ, ನಗರದ ಓರ್ವರಿಂದ ಫೋನ್ ಪೇ ಮೂಲಕ ತನ್ನ ಖಾತೆಗೆ 48 ಸಾವಿರ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಮಿಲಿಟರಿ ಅಧಿಕಾರಿ ಎಂದು ಪರಿಚಿಯಿಸಿಕೊಂಡ ವ್ಯಕ್ತಿಯು ರಾಯಚೂರಿನ ವ್ಯಕ್ತಿಯೊಬ್ಬರಿಗೆ ಆನ್ಲೈನ್ ಮೂಲಕ ಪಡೆದು ವಂಚಿಸಿದ್ದಾರೆ. ವಂಚಕ ಓಎಲ್‌ಎಕ್ಸ್‌ನಲ್ಲಿ ಸುಜುಕಿ ಹೋಂಡಾ ಸ್ಕೂಟಿ ಮಾರುವುದಾಗಿ ಪೋಸ್ಟ್ ಹಾಕಿದ್ದಾನೆ. ಇದನ್ನು ಖರೀದಿಸಲು ಮುಂದಾಗಿದ್ದ ಯುವಕ ವಂಚಕನಿಗೆ ಫೋನ್ ಪೇ ಮೂಲಕ ಹಣ ಜಮಾ ಮಾಡಿದ್ದಾನೆ. ಆ ಬಳಿಕ ವಾಹನ ನೀಡಿದೆ ಮೋಸ ಮಾಡಿದ್ದಾನೆ. ಸಂತ್ರಸ್ತ ಈ ಕುರಿತು ಸೈಬರ್ ಕ್ರೈಂ ವಿಭಾಗಕ್ಕೆ ದೂರು ಸಲ್ಲಿಸಿದ್ದಾನೆ.
ದೂರು ದಾಖಲಿಸಿಕೊಂಡ ಎಸ್ಪಿ ಸಿ.ಬಿ ವೇದಮೂರ್ತಿ ಅವರು, ಜನರು ಆನ್ಲೈನ್ ವಹಿವಾಟು ನಡೆಸುವಾಗ ಎಚ್ಚರಿಕೆಯಿಂದ ಇರಬೇಕು. ವಸ್ತು ಪಡೆಯುವವರೆಗೂ ಹಣ ನೀಡದಂತೆ ಎಚ್ಚರಿಕೆ ನೀಡಿದ್ದಾರೆ. ವಂಚನೆಯ ಪ್ರಕರಣಗಳು ಕಂಡು ಬಂದಲ್ಲಿ ಕೂಡಲೇ ದೂರು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.