ರಾಯಚೂರು : ಒಳ ಜಗಳದಿಂದ ಕಾಂಗ್ರೆಸ್ ಪಕ್ಷ ಒಡೆದ ಮನೆಯಾಗಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ಹೇಳಿದ್ದಾರೆ. ಸಿಂಧನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಮ್ಮ ಗೆಲುವಿನ ನಾಗಾಲೋಟ ಮುಂದುವರೆಯಲಿದೆ. ಬಿಜೆಪಿಯ ಗೆಲುವಿನ ರಥ ನಿಲ್ಲುವುದಿಲ್ಲ.
ಕಾಂಗ್ರೆಸ್ ನಾಯಕರ ಒಳ ಜಗಳದಿಂದಾಗಿ ಪಕ್ಷ ಒಡೆದ ಮನೆಯಾಗಿದೆ. ದೇಶದಲ್ಲಿ ಐದು ರಾಜ್ಯಗಳಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ. ಪಶ್ಚಿಮ ಬಂಗಾಳದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿ, ಆಡಳಿತ ನಡೆಸಿದ ಸಿದ್ದರಾಮಯ್ಯ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ಅಲ್ಲದೇ ಸರ್ಕಾರದ ಆಡಳಿತಾವಧಿಯಲ್ಲಿ ಸಹ ತಮ್ಮ ನಾಯಕರಿಗೆ ಹಣ ಕೊಟ್ಟಿದ್ದಾರೆ. ಇದು ಶೇ. 30ರಷ್ಟು ಅನ್ನೋದನ್ನು ಅವರು ಹೇಳಬೇಕಾಗಿಲ್ಲ, ಜನ ಹೇಳಬೇಕು, ಅದಕ್ಕಾಗಿಯೇ ಸಿದ್ದರಾಮಯ್ಯ ಸರ್ಕಾರ ಹೋಗಿದೆಯೆಂದು ಟೀಕಿಸಿದರು.
ಬಸವನಗೌಡ ಪಾಟೀಲ್ ಯತ್ನಾಳ್ ವಿರೋಧದ ಬಗ್ಗೆ ಪ್ರಶ್ನಿಸಿದಾಗ, ಈ ಬಗ್ಗೆ ಆಗಾಗ ಕೇಳಬೇಡಿ. ಶಿಷ್ಟಾಚಾರ ಸಮಿತಿ ನಿರ್ಣಯ ತೆಗೆದುಕೊಳ್ಳಲಿದೆ. ಯತ್ನಾಳ್ ಹೇಳಿಕೆ ಬಗ್ಗೆ ಕಾರ್ಯಕರ್ತರಿಗೆ ಅರ್ಥವಾಗಿದೆ. ಸಿದ್ದರಾಮಯ್ಯ ಹಾಗೂ ಯತ್ನಾಳ್ ಸಿಎಂ ಬದಲಾವಣೆಯಾಗುತ್ತಾರೆ ಅಂತಾರೆ. ಹಾಗೇನೂ ಆಗುವುದಿಲ್ಲ ಎಂದರು.
ಇದನ್ನೂ ಓದಿ: ರಾಹುಲ್ ಗಾಂಧಿ ಮುಂದೆ ಈ ದೇಶದ ಮಹಾನಾಯಕರಾಗಲಿದ್ದಾರೆ: ಮಲ್ಲಿಕಾರ್ಜುನ ಖರ್ಗೆ ಭವಿಷ್ಯ
ಹಣ ಹಂಚಿಕೆಯ ವಿಷಯದ ಬಗ್ಗೆ ಪ್ರತಿಕ್ರಿಯಿಸಿ, ಈ ವಿಡಿಯೋ ಸುಳ್ಳು. ರಾಹುಲ್ ಗಾಂಧಿ ಸಹ ಈ ರೀತಿ ಸುಳ್ಳು ಹೇಳುತ್ತಾರೆ. ರಾಹುಲ್ ಗಾಂಧಿ ಸೀರಿಯಸ್ ವ್ಯಕ್ತಿ ಅಲ್ಲ ಎಂದು ವ್ಯಂಗ್ಯವಾಡಿದ್ರು.