ರಾಯಚೂರು: ಯುವಕನ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಜಿಲ್ಲೆಯ ಸಿಂಧನೂರು ಗ್ರಾಮೀಣ ಠಾಣೆ ಪೊಲೀಸರು ಯಶ್ವಸಿಯಾಗಿದ್ದಾರೆ.
2019 ಡಿ.11 ರಂದು ಜಿಲ್ಲೆಯ ಸಿಂಧನೂರು ತಾಲೂಕಿನ ಆರ್.ಹೆಚ್.ಕ್ಯಾಂಪ್-1 ನಿವಾಸಿ ರಾಜೇಶ್(26) ಯುವಕನನ್ನು ಕೊಲೆ ಮಾಡಿ ದೇಹವನ್ನು ಕಾಲುವೆ ಎಸೆದು ಆರೋಪಿಗಳು ಪರಾರಿಯಾಗಿದ್ದರು. ಪ್ರಕರಣ ಭೇದಿಸಿದ ಪೊಲೀಸರು 3 ಆರೋಪಿಗಳನ್ನು ಸೆರೆ ಹಿಡಿದ್ದಾರೆ. ಆರೋಗ್ಯ ಸ್ವಾಮಿ ಅಲಿಯಾಸ್ ಸ್ವಾಮಿ, ಪೀಟರ್ ಗೆರಾಲ್ಡ್, ಆರೋಗ್ಯ ಸ್ವಾಮಿ, ಸಗಯರಾಜ್ ಅಲಿಯಾಸ್ ಸಹಾಯರಾಜ್ ಬಂಧಿತ ಆರೋಪಿಗಳಾಗಿದ್ದಾರೆ.
ಮೇಲ್ನೋಟಕ್ಕೆ ಪ್ರಕರಣ ಸಾಮಾನ್ಯವಾಗಿ ಕಂಡು ಬಂದಿದ್ದರು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅನುಮಾನ ಕಂಡು ಬಂದಿತ್ತು. ಹೀಗಾಗಿ ಪ್ರಕರಣ ಗಂಭೀರವಾಗಿ ಪರಿಗಣಿಸಿ ವಿಶೇಷ ತಂಡ ರಚಿಸಿ ತನಿಖೆ ನಡೆಸಿದಾಗ ಪ್ರೇಮದ ವಿಚಾರಕ್ಕೆ ಕೊಲೆ ಕಾರಣವೆಂದು ತಿಳಿದು ಬಂದು, ಕೊಲೆ ಮಾಡಿದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು, ಕೊಲೆಗೆ ಬಳಸಿರುವ ಸಾಮಾಗ್ರಿಗಳನ್ನು ಜಪ್ತಿ ಮಾಡಿಕೊಂಡು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಹಾಗೂ ಹೆಚ್ಚುವರಿ ಎಸ್ಪಿ ಹರಿಬಾಬು, ಡಿವೈಎಸ್ಪಿ ವಿಶ್ವನಾಥ ಮಾರ್ಗದರ್ಶನದಲ್ಲಿ ವಿಶೇಷ ತಂಡ ಸಿಂಧನೂರು ಸಿಪಿಐ ಬಾಲಚಂದ್ರ ಡಿ.ಲಕ್ಕಂ, ಸಿಂಧನೂರು ಗ್ರಾಮೀಣ ಪಿಎಸ್‌ಐ, ಜಿ.ಎಸ್.ರಾಘವೇಂದ್ರ ನೇತೃತ್ವದ ತಂಡ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶ್ವಸಿಯಾಗಿದ್ದು, ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.