ರಾಯಚೂರು: ಕೊರೊನಾ ಸೆಮಿ ಲಾಕ್‌ಡೌನ್ ಎರಡನೇ ದಿನಕ್ಕೆ ಕೊಟ್ಟಿದ್ದು, ಜನರ ಓಡಾಟ ಕಂಡು ಬಂತು.
ಮಂಗಳವಾರ ಅಕ್ಷಯ ತದಿಗೆ ಅಮಾವಾಸ್ಯೆ ಹಿನ್ನೆಲೆಯಲ್ಲಿ ಜನರು ತೆಂಗಿನಕಾಯಿ, ಹೂ, ಹಣ್ಣು ಖರೀದಿಯಲ್ಲಿ ತೊಡಗಿದ್ದರು. ವ್ಯಾಪಾರ ನಡೆಸುವ ವೇಳೆ ನಗರದ ತೀನ್ ಕಂದಿಲ್, ಮಹಾವೀರ ಚೌಕ್, ತರಕಾರಿ ಮಾರುಕಟ್ಟೆಗಳಲ್ಲಿ ಹೆಚ್ಚಿನ ಜನ ಸಂದಣಿಯಿಂದ ಟ್ರಾಫಿಕ್ ಸಮಸ್ಯೆ ಉಂಟಾಯಿತು. ಸಂಚಾರಿ ಪೊಲೀಸರು ಸಂಚಾರ ನಿಯಂತ್ರಿಸಿ ಅನಾವಶ್ಯಕ ಸಂಚರಿಸುವವರಿಗೆ ಖಡಕ್ ವಾರ್ನಿಂಗ್ ನೀಡಿ ಕಳುಹಿಸಿದರು.