ETV Bharat / state

ರಾಯಚೂರಲ್ಲಿಂದು 115 ಕೊರೊನಾ​ ಪ್ರಕರಣ: ಓರ್ವ ಸಾವು

author img

By

Published : Sep 22, 2020, 9:27 PM IST

ಜಿಲ್ಲೆಯಲ್ಲಿ ಇಂದೂ 115 ಹೊಸ ಕೊರೊನಾ ಪ್ರಕರಣ ದಾಖಲಾಗಿದ್ದು, ಸೋಂಕಿನಿಂದಾಗಿ ಓರ್ವ ಮೃತಪಟ್ಟಿದ್ದಾನೆ. ಇದಲ್ಲದೇ ಜಿಲ್ಲೆಯಲ್ಲಿ ಒಟ್ಟು1,651 ಸಕ್ರಿಯ ಪ್ರಕರಣಗಳಿದ್ದು, ವಿವಿಧ ಕೋವಿಡ್ ಸೆಂಟರ್​ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

115 New corona cases reported in Raichur today and one died from virus
ರಾಯಚೂರು ಕೊರೊನಾ ಪ್ರಕರಣ

ರಾಯಚೂರು: ಜಿಲ್ಲೆಯಲ್ಲಿಂದು 115 ಕೊರೊನಾ ಪಾಸಿಟಿವ್ ಪ್ರಕರಣಗಳ ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯ ಸೋಂಕಿತರ ಸಂಖ್ಯೆ 10,622ಕ್ಕೆ ತಲುಪಿದೆ. ರಾಯಚೂರು ತಾಲೂಕಿನಲ್ಲಿ 41, ಮಾನ್ವಿ 24, ಲಿಂಗಸೂಗೂರು 18, ಸಿಂಧನೂರು 24, ದೇವದುರ್ಗ 8 ಪ್ರಕರಣಗಳು ಇಂದು ಪತ್ತೆಯಾಗಿವೆ.

ಈವರೆಗೆ ಪತ್ತೆಯಾಗಿರುವ ಸೋಂಕಿತರ ಪೈಕಿ 8,838 ಜನ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, ಇನ್ನುಳಿದಂತೆ 1,651 ಸಕ್ರಿಯ ಪ್ರಕರಣಗಳಿವೆ. ಈ ನಡುವೆ ಇಂದು ಓರ್ವ ಸೋಂಕಿತ ಮೃತಪಟ್ಟಿದ್ದು, ಈ ಮೂಲಕ ಮೃತರ ಸಂಖ್ಯೆ 133ಕ್ಕೆ ಏರಿಕೆಯಾಗಿದೆ.

ರಿಮ್ಸ್, ಓಪೆಕ್ ಕೋವಿಡ್ ಆಸ್ಪತ್ರೆಯಲ್ಲಿ 332 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ತಾಲೂಕಿನ ಸಾಂಸ್ಥಿಕ​​​​ ಕ್ವಾರಂಟೈನ್​​​​ನಲ್ಲಿ 83 ಮಂದಿ ಇದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಎನ್​​​​ಎಂಸಿಎಚ್, ಖಾಸಗಿ ಕೋವಿಡ್ ಆಸ್ಪತ್ರೆ, ಹೋಟೆಲ್​​​ ಕ್ವಾರೆಂಟೈನ್​​​​ನಲ್ಲಿ 182 ಮಂದಿ ಇದ್ದು ನಿಗಾ ಇಡಲಾಗಿದೆ.

ಜಿಲ್ಲಾದ್ಯಂತ ಹೋಮ್ ಕ್ವಾರಂಟೈನ್​​​ನಲ್ಲಿ 1,054 ಮಂದಿ ಇದ್ದಾರೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.