ಮೈಸೂರು: ಟಿಪ್ಪು ಎಕ್ಸ್‌ಪ್ರೆಸ್ ರೈಲಿಗೆ ಒಡೆಯರ್ ಎಕ್ಸ್‌ಪ್ರೆಸ್ ಎಂದು ಮರುನಾಮಕರಣ ಮಾಡಿರುವುದನ್ನು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ವಾಗತಿಸಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ ಪ್ರತಿಕ್ರಿಯೆ ನೀಡಿರುವ ಯದುವೀರ್, ಹತ್ತನೇ ಚಾಮರಾಜ ಒಡೆಯರ್ ಕಾಲದಿಂದಲೂ ರೈಲ್ವೆ ಅಭಿವೃದ್ಧಿಯಾಗಿದೆ. ಒಡೆಯರ್ ಎಕ್ಸ್‌ಪ್ರೆಸ್ ಎಂದು ನಾಮಕರಣ ಮಾಡಿರುವುದು ಸಂತೋಷದ ವಿಷಯ ಎಂದು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
(ಓದಿ: ಟಿಪ್ಪು, ತಾಳಗುಪ್ಪ ಎಕ್ಸ್‌ಪ್ರೆಸ್ ರೈಲುಗಳ ಹೆಸರು ಬದಲಾವಣೆ: ಶುಕ್ರವಾರದ ಶುಭಸುದ್ದಿ ಎಂದ ಸಂಸದ ಪ್ರತಾಪ್ ಸಿಂಹ)