ಮೈಸೂರು : ವಸತಿ ಶಾಲೆಯಲ್ಲಿ ಇದ್ದ ಮಗಳನ್ನು ನೋಡಲು ಬಂದ ತಾಯಿ, ಬಸ್ ಇಳಿಯುವಾಗ ಆಯಾತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ಮುದ್ದಹಳ್ಳಿಯ ಕಡುಬಿನ ಕಟ್ಟೆ ಗೇಟ್ ಬಳಿ ನಡೆದಿದೆ.
ಮೊರಾರ್ಜಿ ಶಾಲೆಯಲ್ಲಿ ಓದುತ್ತಿರುವ ತಮ್ಮ ಮಗಳನ್ನು ನೋಡಲು ಚನ್ನಪಟ್ಟಣ ಗ್ರಾಮದಿಂದ ಮಹಿಳೆ ಭಾಗ್ಯಮ್ಮ (30) ಶನಿವಾರ ಮಧ್ಯಾಹ್ನ ಆಗಮಿಸಿದ್ದರು. ಸರ್ಕಾರಿ ಬಸ್ನಲ್ಲಿ ಬಂದ ಇವರು ಮುದ್ದಹಳ್ಳಿ ಕಡುಬಿನ ಕಟ್ಟೆ ಗೇಟ್ನಲ್ಲಿ ಬಸ್ ಇಳಿಯುವಾಗ ಅವರು ಇಳಿಯುವ ಮುನ್ನವೇ ಬಸ್ ಮುಂದೆ ಚಲಿಸಿದೆ. ಪರಿಣಾಮ, ಆಯತಪ್ಪಿ ಕೆಳಗೆ ಬಿದ್ದ ಭಾಗ್ಯಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆಯಿಂದ ಹೆದರಿದ ಸರ್ಕಾರಿ ಬಸ್ ಚಾಲಕ ಮತ್ತು ನಿರ್ವಾಹಕ ಬಸ್ನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದು, ಸ್ಥಳಕ್ಕೆ ನಂಜನಗೂಡು ಸಂಚಾರಿ ಪೊಲೀಸರು ಆಗಮಿಸಿ ತನಿಖೆ ಕೈಗೊಂಡಿದ್ದಾರೆ.