ETV Bharat / state

ಮೈಸೂರಿನಲ್ಲಿ ಭಾರತ್ ಬಂದ್‌ ಅಬ್ಬರ ಈವರೆಗೂ ಕಾಣಿಸ್ತಿಲ್ಲ.. - Latest Protest News In Mysore

ಬೆಲೆ ಏರಿಕೆ ಮತ್ತು ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ಕಾರ್ಮಿಕ ಸಂಘಟನೆಗಳು ಭಾರತ್‌ ಬಂದ್‌ಗೆ ಕರೆ ನೀಡಿವೆ. ಆದರೆ, ಮೈಸೂರಿನಲ್ಲಿ ಈವರೆಗೂ ಬಂದ್‌ ಬಿಸಿ ತಟ್ಟಿಲ್ಲ.

Various Organization Protest In Mysore
ಭಾರತ್ ಬಂದ್ ಗೆ ಸಾಂಸ್ಕೃತಿಕ ನಗರಿಯಲ್ಲಿ ನೀರಸ ಪ್ರತಿಕ್ರಿಯೆ
author img

By

Published : Jan 8, 2020, 11:35 AM IST

Updated : Jan 8, 2020, 11:41 AM IST

ಮೈಸೂರು: ಸಾಂಸ್ಕೃತಿನಗರಿಯಲ್ಲಿ ಈವರೆಗೂ ಭಾರತ ಬಂದ್‌ನ ಬಿಸಿ ಇನ್ನೂ ತಟ್ಟಿಲ್ಲ. ಒಂಚೂರು ಅಳುಕಿನಿಂದ ಜನ ಎಂದಿನಂತೆ ವಾಹನಗಳಲ್ಲಿ ಸಂಚರಿಸ್ತಿದ್ದಾರೆ.

ಭಾರತ ಬಂದ್‌ಗೆ ಸಾಂಸ್ಕೃತಿಕ ನಗರಿಯಲ್ಲಿ ನೀರಸ ಪ್ರತಿಕ್ರಿಯೆ..

ಶಾಲಾ-ಕಾಲೇಜುಗಳು,ಸಾರಿಗೆ ಸಂಸ್ಥೆ ಬಸ್, ಹೋಟೆಲ್‌ಗಳು ಎಂದಿನಂತಿವೆ. ಬಂದ್ ಹಿನ್ನೆಲೆಯಲ್ಲಿ ಜನ ಸಂಚಾರ ಸ್ವಲ್ಪ ಕಡಿಮೆ ಇದೆ. ನಗರದ ಪ್ರಮುಖ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಬ್ಯಾಂಕ್ ನೌಕರರು ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ. ಪ್ರತಿಭಟನಾ ಮೆರವಣಿಗೆಯನ್ನು ಜೆಕೆ ಮೈದಾನದಿಂದ ಪುರಭವನದವರಗೆ ಮಾತ್ರ ನಡೆಸಲು ಅನುಮತಿ ನೀಡ್ಲಾಗಿದೆ.

ಪ್ರವಾಸಿ ಸ್ಥಳಗಳಾದ ಅರಮನೆ, ಮೃಗಾಲಯ ಮತ್ತು ಚಾಮುಂಡಿ ಬೆಟ್ಟಕ್ಕೆ ಪ್ರವಾಸಿಗರು ಕಡಿಮೆ ಇರುವುದು ಕಂಡು ಬಂದಿದೆ. ಕೆಲ ಕಡೆ ಬಂದ್ ಭೀತಿಯಿಂದಾಗಿ ಅಂಗಡಿ-ಮುಂಗಟ್ಟುಗಳು ಅಲ್ಲಲ್ಲಿ ಮುಚ್ಚಿವೆ. ಬಹುತೇಕ ಪ್ರಮುಖ ತಾಲೂಕು ಕೇಂದ್ರಗಳಲ್ಲಿ ಬಂದ್​​​ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಾಂಗ್ರೆಸ್ ಕೂಡ ಬಂದ್​​ಗೆ ಬೆಂಬಲ ವ್ಯಕ್ತಪಡಿಸಿದೆ. ಇವತ್ತು ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿ ನಂತರ ಕಾಂಗ್ರೆಸ್ ಮುಖಂಡರು ಬಂದ್‌ನಲ್ಲಿ ಭಾಗವಹಿಸಲಿದ್ದಾರೆ.

Intro:ಮೈಸೂರು: ಭಾರತ್ ಬಂದ್ ಗೆ ಸಾಂಸ್ಕೃತಿಕ ನಗರಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನ ಜೀವನ ಸಾಮಾನ್ಯವಾಗಿದೆ.

Body:ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಾಗೂ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಹಲವು ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ಗೆ ಮೈಸೂರಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಜನ ಸಂಚಾರ ಸಾಮಾನ್ಯವಾಗಿದೆ,
ಶಾಲಾ ಕಾಲೇಜುಗಳು, ಸರ್ಕಾರಿ ಬಸ್ ಗಳು, ಹೋಟೆಲ್ ಗಳು, ತೆರದಿದ್ದು ಬಂದ್ ಬಿಸಿ ಹಿನ್ನಲೆಯಲ್ಲಿ ಜನ ಸಂಚಾರ ಸ್ವಲ್ಪ ಕಡಿಮೆ ಇದ್ದು, ನಗರದ ಪ್ರಮುಖ ಸ್ಥಳಗಳಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು ಬಂದ್ ಹಿನ್ನಲೆಯಲ್ಲಿ ಬ್ಯಾಂಕ್ ನೌಕರರು ಪ್ರತಿಭೆ ನಡೆಸಲಿದ್ದು, ಪ್ರತಿಭಟನೆಗೆ ಜೆ.ಕೆ ಮೈದಾನದಿಂದ ಪುರಭವನದ ವರಗೆ ಮಾತ್ರ ಮೆರವಣಿಗೆ ನಡೆಸಲು ಅನುಮತಿ ನೀಡಲಾಗಿದೆ.
ಈ ಮಧ್ಯೆ ಕಾಂಗ್ರೆಸ್ ಕೂಡ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿ ನಂತರ ಕಾಂಗ್ರೆಸ್ ಮುಖಂಡರು ಬಂದ್ ನಲ್ಲಿ ಭಾಗವಹಿಸಲಿದ್ದಾರೆ.
ಚಿತ್ರಮಂದಿರಗಳಲ್ಲಿ ಬೆಳಿಗಿನ ಪ್ರದರ್ಶನಕ್ಕೆ ಜನ ಕಡಿಮೆ ಇದ್ದು, ಪ್ರವಾಸಿ ಸ್ಥಳಗಳಾದ ಅರಮನೆ, ಮೃಗಾಲಯ ಮತ್ತು ಚಾಮುಂಡಿ ಬೆಟ್ಟಕ್ಕೆ ಪ್ರವಾಸಿಗರು ಕಡಿಮೆ ಇದ್ದು ಕೆಲವು ಕಡೆ ಬಂದ್ ಭೀತಿಯಲ್ಲಿ ಅಂಗಡಿ ಮುಂಗಟ್ಟುಗಳು ಅಲ್ಲಲ್ಲಿ ಮುಚ್ಚಿದ್ದು, ಬಹುತೇಕ ಮೈಸೂರು ನಗರ ಹಾಗೂ ಮೈಸೂರು ಜಿಲ್ಲೆಯ ಪ್ರಮುಖ ತಾಲ್ಲೂಕು ಕೇಂದ್ರಗಳಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

Conclusion:
Last Updated : Jan 8, 2020, 11:41 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.