ETV Bharat / state

ಗ್ರಾಪಂ ಚುನಾವಣೆ: ಹಾಡಿಯ 95 ವರ್ಷದ ವೃದ್ಧೆಯಿಂದ ಮತದಾನ

author img

By

Published : Dec 22, 2020, 4:49 PM IST

ಮೈಸೂರು ಜಿಲ್ಲೆಯಲ್ಲಿ ಶಾಂತಿಯುತವಾಗಿ ಮತದಾನ ನಡೆಯುತ್ತಿದ್ದು, ಹಾಡಿ ಹಾಗೂ ಆದಿವಾಸಿ ಜನರು ಉತ್ಸಾಹದಿಂದ ವೋಟಿಂಗ್​ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಇದೇ ವೇಳೆ 95 ವರ್ಷದ ಅಜ್ಜಿಯೊಬ್ಬರು ಮತಗಟ್ಟೆಗೆ ಆಗಮಿಸಿ ಮತದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

tribals votes in mysore
ಗ್ರಾಮ ಪಂಚಾಯ್ತಿ ಚುನಾವಣೆ

ಮೈಸೂರು: ಜಿಲ್ಲೆಯ ಗಿರಿಜನ ಹಾಡಿಗಳಲ್ಲೂ ಆದಿವಾಸಿಗಳು ಗ್ರಾಪಂ ಚುನಾವಣೆಯಲ್ಲಿ ಉತ್ಸಾಹದಿಂದ ಮತ ಚಲಾವಣೆ ಮಾಡುತ್ತಿದ್ದು, ಹಾಡಿಯ 95 ವರ್ಷದ ವೃದ್ಧೆಯಿಂದ ಸಹ ಮತ ಚಲಾವಣೆಯಾಗಿದೆ.

ಗ್ರಾಮ ಪಂಚಾಯ್ತಿ ಚುನಾವಣೆ
ಜಿಲ್ಲೆಯ 5 ತಾಲೂಕಿನಲ್ಲಿ ಮೊದಲ ಹಂತದ ಗ್ರಾಮ‌ ಪಂಚಾಯ್ತಿ ಚುನಾವಣೆ ನಡೆಯುತ್ತಿದ್ದು, ಗಿರಿಜನ ಹಾಡಿಗಳಲ್ಲಿನ ಆದಿವಾಸಿಗಳು ಉತ್ಸಾಹದಿಂದ ಮತದಾನ ಮಾಡಿದ್ದಾರೆ. ಹಾಡಿಗಳಾದ ವೀರನಹೊಸಳ್ಳಿ, ಗುರುಪುರ, ನಾಗಪುರ ಸೇರಿದಂತೆ ಇತರ ಹಾಡಿಗಳಿಂದ ಆದಿವಾಸಿಗಳು ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. ನಾಗಾಪುರದ 95 ವರ್ಷದ ಪುಟ್ಟಮ್ಮ ಎಂಬ ವೃದ್ಧೆ ಸಹ ಮತಗಟ್ಟೆಗೆ ಬಂದು ಮತ ಚಲಾವಣೆ ಮಾಡಿದ್ದು ವಿಶೇಷವಾಗಿತ್ತು. ಜೊತೆಗೆ ಮತಗಟ್ಟೆಯಲ್ಲಿ ಗಿರಿಜನ‌ ಮತದಾರರಿಗೆ ಮತ ಹಾಕಲು ಅಧಿಕಾರಿಗಳು ಮಾರ್ಗದರ್ಶನ ನೀಡುತ್ತಿರುವುದು ಕಂಡು ಬಂತು‌.

ಗುಂಪುಗುಂಪಾಗಿ ಬಾರದಂತೆ ಪೊಲೀಸರಿಂದ ಎಚ್ಚರಿಕೆ:
ಮೈಸೂರು ಜಿಲ್ಲೆಯಲ್ಲಿ ಮೊದಲನೇ ಹಂತದ ಗ್ರಾಮ ಪಂಚಾಯ್ತಿ ಚುನಾವಣೆಗೆ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯುತ್ತಿದೆ. ಮತದಾರರಿಂದ ನೂರು ಮೀಟರ್ ದೂರದಲ್ಲಿ ಅಭ್ಯರ್ಥಿಗಳು ಮತಯಾಚನೆ ಮಾಡಿದ್ದು, ಪೊಲೀಸರು ಭದ್ರತೆ ನೀಡುವುದರ ಜೊತೆಗೆ ಕೊರೊನಾ ಬಗ್ಗೆ ಜಾಗೃತಿ ಕೂಡ ಮೂಡಿಸುತ್ತಿದ್ದಾರೆ. ಮತಗಟ್ಟೆ ಕೇಂದ್ರಗಳ ಬಳಿ ಗುಂಪು ಗುಂಪಾಗಿ ಸೇರುತ್ತಿರುವ ಜನರಿಗೆ ಪೊಲೀಸರು ವಾರ್ನಿಂಗ್ ಮಾಡುತ್ತಿದ್ದಾರೆ‌.

ಕೊರೊನಾ ಮುನ್ನೆಚ್ಚರಿಕೆ ಕ್ರಮ ಮತ್ತು ಚುನಾವಣಾ ನಿಯಮ ಪಾಲಿಸದಿದ್ದರೆ ಕೇಸ್ ಹಾಕಲಾಗುತ್ತದೆ ಎಂದು ಮತದಾರರಿಗೆ ಹಾಗೂ ಮತಯಾಚಿಸುವ ಅಭ್ಯರ್ಥಿಗಳಿಗೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ. ಹುಣಸೂರು, ಪಿರಿಯಾಪಟ್ಟಣ, ಹೆಚ್.ಡಿ.ಕೋಟೆ, ಸರಗೂರು, ಕೆ.ಆರ್.ನಗರ ತಾಲೂಕುಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.