ETV Bharat / state

ಭಾರತೀಯ ರೈಲ್ವೆ ಸರಕು ಸಾಗಣೆಯಲ್ಲಿ ಮೈಸೂರು ರೈಲ್ವೆ ವಿಭಾಗಕ್ಕೆ ಎರಡನೇ ಸ್ಥಾನ.. ಆದಾಯದಲ್ಲೂ ಉತ್ತಮ ಸಾಧನೆ

author img

By ETV Bharat Karnataka Team

Published : Sep 20, 2023, 8:16 PM IST

ಮೈಸೂರು ರೈಲ್ವೆ ವಿಭಾಗವೂ ಸರಕು ಸಾಗಣೆಯಲ್ಲಿ ಎರಡನೇ ಸ್ಥಾನ ಸಾಧಿಸಿರುವ ಹಿನ್ನೆಲೆ ರೈಲ್ವೆ ಖಾತೆ ರಾಜ್ಯ ಸಚಿವ ದರ್ಶನಾ ಜರ್ದೋಶ್ ಅವರು ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ಅವರಿಗೆ ಸೆ.19ರಂದು ನವದೆಹಲಿಯಲ್ಲಿ ರೈಲ್ವೆ ಮಂಡಳಿಯಿಂದ ಪ್ರಶಸ್ತಿ ವಿತರಣೆ ಮಾಡಿದರು.

Minister Darshana Zardosh distributed the award to Manager Shilpi Agarwal,
ಸಚಿವೆ ದರ್ಶನಾ ಜರ್ದೋಶ್ ಅವರು ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ಗೆ ಪ್ರಶಸ್ತಿ ವಿತರಿಸಿದರು.

ಮೈಸೂರು: ಭಾರತೀಯ ರೈಲ್ವೆಯ ಮೈಸೂರು ವಿಭಾಗವು ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ 28% ಕ್ಕಿಂತ ಹೆಚ್ಚು ಸರಕು ಸಾಗಣೆಯ ಅಸಾಧಾರಣ ಬೆಳವಣಿಗೆಯನ್ನು ಸಾಧಿಸುವ ಮೂಲಕ ದೇಶದಲ್ಲೇ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ.
ಮೈಸೂರು ರೈಲ್ವೆ ವಿಭಾಗವೂ ಸರಕು ಸಾಗಣೆಯಲ್ಲೇ ಭಾರತೀಯ ರೈಲ್ವೆಯಲ್ಲಿ ಎರಡನೇ ಸ್ಥಾನ ಪಡೆದಿದ್ದು, ರೈಲ್ವೆ ಖಾತೆ ರಾಜ್ಯ ಸಚಿವ ದರ್ಶನಾ ಜರ್ದೋಶ್ ಅವರು ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ಅವರಿಗೆ ಸೆ.19ರಂದು ನವದೆಹಲಿಯಲ್ಲಿ ರೈಲ್ವೆ ಮಂಡಳಿಯಿಂದ ಪ್ರಶಸ್ತಿ ನೀಡಿದರು.

ಪ್ರಸಕ್ತ ವರ್ಷದ ಆಗಸ್ಟ್ ವರೆಗಿನ ಸರಕು ಸಾಗಣೆಯಲ್ಲಿ ಹಲವಾರು ಮಹತ್ವದ ಮುಖ್ಯಾಂಶಗಳು ಇಂತಿವೆ.. ಮೈಸೂರು ವಿಭಾಗವು 2023 ರ ಜನವರಿ ಮಾಸದ 1.074 ದಶಲಕ್ಷ ಟನ್​ಗಳ ಸಾಗಣೆಯ ಹಿಂದಿನ ದಾಖಲೆಯನ್ನು ಮೀರಿಸಿ, 1.119 ದಶಲಕ್ಷ ಟನ್ಗಳಷ್ಟು ಮಾಸಿಕ ಲೋಡಿಂಗ್ ಸಾಧಿಸಿದೆ.

- ವಿಭಾಗವು 230 ರೇಕಗಳೊಂದಿಗೆ 0.927 ದಶಲಕ್ಷ ಟನ್​​​ದ ಅತ್ಯಧಿಕ ಮಾಸಿಕ ಕಬ್ಬಿಣದ ಅದಿರು ಲೋಡಿಂಗ್ ಅನ್ನು ಸಾಧಿಸಿ ಮಾರ್ಚ್ 2023 ರಲ್ಲಿ 198 ರೇಕ್ಗಳೊಂದಿಗಿನ 0.803 ದಶಲಕ್ಷ ಟನ್​ದ ಹಿಂದಿನ ದಾಖಲೆಯನ್ನು ಸರಿಗಟ್ಟಿದೆ- ವಿಭಾಗವು ಆಗಸ್ಟ್ 14, 2023 ರಂದು 12 ರೇಕ್ಗಳೊಂದಿಗೆ ಒಂದೇ ದಿನದಲ್ಲಿ ಅತ್ಯಧಿಕ ಸಂಖ್ಯೆಯ ಕಬ್ಬಿಣದ ಅದಿರು ರೇಕ್​ಗಳ ಲೋಡಿಂಗ್ ನ ಹೊಸ ದಾಖಲೆಯನ್ನು ಸ್ಥಾಪಿಸಿದೆ.

- ವಿಭಾಗವು ಆಗಸ್ಟ್ 14 2023 ರಂದು 848 ವ್ಯಾಗನ್​ಗಳೊಂದಿಗೆ ಒಂದೇ ದಿನದಲ್ಲಿ ಅತಿ ಹೆಚ್ಚು ವ್ಯಾಗನ್​ಗಳನ್ನು ಲೋಡ್ ಮಾಡಿರುವ ಹೊಸ ದಾಖಲೆಯನ್ನು ಸ್ಥಾಪಿಸಿದೆ.

ಆಗಸ್ಟ್ 2023ರಲ್ಲಿ ವಿಭಾಗದಿಂದ ಹೊರಡುವ ಸಾಗಣೆಯ ಲೋಡಿಂಗ್ ಸಾಧನೆ 309.5 ರೇಕ್ಗಳೊಂದಿಗೆ 1.119 ದಶಲಕ್ಷ ಟನ್ ಲೋಡ್ ಆಗಿದೆ ಮತ್ತು ಆಗಸ್ಟ್ 2022ಕ್ಕೆ ಹೋಲಿಸಿದರೆ ಶೇಕಡ 65.5 ಹೆಚ್ಚಳದ ಬೆಳವಣಿಗೆಯನ್ನು ಹೊಂದಿದೆ. ಈ ಸಾಧನೆಯು ಮಾಸಿಕವಾಗಿ ನಿಗದಿಯಾದ 0.820 ದಶಲಕ್ಷ ಟನ್​​​ಗಳ ಗುರಿಯನ್ನು ಸಾಧಿಸಿ ಶೇಕಡ 36.5% ರಿಂದ ಮೀರಿಸಿದೆ.

ಕಬ್ಬಿಣದ ಅದಿರು ಲೋಡಿಂಗ್​​ಗೆ ಸಂಬಂಧಿಸಿದಂತೆ ಆಗಸ್ಟ್ 2023ರಲ್ಲಿ ವಿಭಾಗದ ಲೋಡಿಂಗ್ ನಿರ್ವಹಣೆ 0.927 ದಶಲಕ್ಷ ಟನ್ ಗಳೊಂದಿಗೆ 230 ರೇಕ್​ಗಳ ಲೋಡಿಂಗ್ ಆಗಿದೆ. ಆಗಸ್ಟ್ 2022 ಕ್ಕೆ ಹೋಲಿಸಿದರೆ 93.1% ನ ಹೆಚ್ಚಳವನ್ನು ಸೂಚಿಸುತ್ತದೆ. ಆಗಸ್ಟ್ 2023 ರ ವರೆಗಿನ ಕಬ್ಬಿಣದ ಅದಿರು ಒಟ್ಟು 809 ರೇಕ್​ರ್​​ಗಳೊಂದಿಗೆ 3.272 ದಶಲಕ್ಷ ಟನ್ ಲೋಡಿಂಗ್ ಆಗಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಅತ್ಯಂತ ಹೆಚ್ಚು ಅಂದರೆ 47.5% ರಷ್ಟು ಹೆಚ್ಚಳವಾಗಿದೆ.

ತೈಲ ಸಾಗಣೆಯಲ್ಲೂ ಅದ್ಭುತ ಸಾಧನೆ: ವಿಭಾಗವು ಪಿಎಲ್ ಒ (ಪೆಟ್ರೋಲಿಯಂ ತೈಲ ಮತ್ತು ಲೂಬ್ರಿಕೆಂಟ್​ಗಳು) ಲೋಡಿಂಗ್​ದಲ್ಲಿ ಅದ್ಭುತ ಸಾಧನೆ ಮೆರೆದಿದೆ. ಆಗಸ್ಟ್ 2023 ರಲ್ಲಿ 0.166 ದಶಲಕ್ಷ ಟನ್ ಅನ್ನು ಲೋಡ್ ಮಾಡಲಾಗಿದೆ. ಇದು ಆಗಸ್ಟ್ 2022 ಕ್ಕೆ ಹೋಲಿಸಿದರೆ 10.7% ಹೆಚ್ಚಳ ಸಾಧಿಸಿದೆ. ಆಗಸ್ಟ್ 2023ರ ವರೆಗೆ ಒಟ್ಟು 308 ರೇಕ್ಗಳೊಂದಿಗೆ 0.800 ದಶಲಕ್ಷ ಟನ್ ಲೋಡ್ ಆಗಿದ್ದೂ, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ 8.8% ಹೆಚ್ಚಳವಾಗಿದೆ.

ಮೈಸೂರು ವಿಭಾಗವು ಸರಕು ಲೋಡಿಂಗ್​ದಲ್ಲಿ ಮಾತ್ರ ಅಲ್ಲದೇ, ಸರಕು ಸಾಗಣೆ ಆದಾಯದಲ್ಲಿಯೂ ಸಹ ಗಮನಾರ್ಹ ಹೆಚ್ಚಳ ಸಾಧಿಸಿದೆ. ಆಗಸ್ಟ್ 2023 ರ ಸರಕು ಸಾಗಣೆ ಆದಾಯವು 75.64 ಕೋಟಿಗಳಾಗಿದ್ದು, ಆಗಸ್ಟ್ 2022ಕ್ಕೆ ಹೋಲಿಸಿದರೆ ದಾಖಲೆಯ 61.42% ರಷ್ಟು ಬೆಳವಣಿಗೆಯಾಗಿದೆ. ಆಗಸ್ಟ್ 2023ರ ವರೆಗಿನ ಒಟ್ಟು ಸರಕು ಸಾಗಣೆ ಆದಾಯವು ರೂ. 399.43 ಕೋಟಿಗಳಷ್ಟಾಗಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಆರೋಗ್ಯಕರವಾದ ಶೇಕಡ 59.1 ರಷ್ಟು ಹೆಚ್ಚಳವಾಗಿದೆ.

ಈ ಸಂದರ್ಭದಲ್ಲಿ ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ಅವರು ಈ ಮೈಲಿಗಲ್ಲನ್ನು ಸಾಧಿಸುವಲ್ಲಿ ವಿಶೇಷ ಕೊಡುಗೆ ನೀಡಿದ ಮೈಸೂರು ವಿಭಾಗದ ಎಲ್ಲ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.

ಇದನ್ನೂ ಓದಿ: ಕಚ್ಚಾ ತೈಲ ಬೆಲೆ ಏರಿಕೆಯ ಪರಿಣಾಮ; ರೂಪಾಯಿ ಮೌಲ್ಯ ದಾಖಲೆ ಮಟ್ಟದಲ್ಲಿ ಕುಸಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.