ETV Bharat / state

ಮೈಸೂರು: ಬಹಿರ್ದೆಸೆಗೆ ಹೋದ ನವ ವಿವಾಹಿತ ಹುಲಿ ದಾಳಿಗೆ ಬಲಿ - ಹುಣಸೂರು ತಾಲೂಕಿನಲ್ಲಿ ಹುಲಿ ದಾಳಿ

ನವ ವಿವಾಹಿತನೊಬ್ಬ ಹುಲಿ ದಾಳಿಗೆ ಬಲಿಯಾಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ನಡೆದಿದೆ.

tiger-killed-a-man-in-mysuru
ಮೈಸೂರು: ಬಹಿರ್ದೆಸೆಗೆ ಹೋದ ನವ ವಿವಾಹಿತ ಹುಲಿ ದಾಳಿಗೆ ಬಲಿ
author img

By

Published : Sep 9, 2021, 9:26 AM IST

ಮೈಸೂರು: ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ವ್ಯಕ್ತಿಯೊಬ್ಬ ಹುಲಿ ದಾಳಿಗೆ ಬಲಿಯಾಗಿರುವ ಘಟನೆ ಹುಣಸೂರು ತಾಲೂಕಿನ ಅಯ್ಯನಕೆರೆ ಹಾಡಿಯಲ್ಲಿ ನಡೆದಿದೆ.

ಅಯ್ಯನಕೆರೆ ಹಾಡಿ ನಿವಾಸಿ ಕರಿಯಯ್ಯ ಎಂಬುವರ ಮಗ ಗಣೇಶ್ (24) ಹುಲಿ ದಾಳಿಗೆ ಬಲಿಯಾದ ವ್ಯಕ್ತಿ. ಗಣೇಶ್ ಬುಧವಾರ ಬೆಳಗ್ಗೆ ಹಾಡಿಯ ಅಂಚಿನಲ್ಲಿರುವ ಕಾಡಿಗೆ ಬಹಿರ್ದೆಸೆಗೆಂದು ಹೋಗಿದ್ದ ವೇಳೆ ದಾಳಿ ಮಾಡಿದ ಹುಲಿ, ಆತನ ಕತ್ತು ಹಿಡಿದು ಸಾಯಿಸಿದೆ. ನಂತರ ಮುಖದ ಕೆಲ ಭಾಗ ತಿಂದು, ಗಣೇಶನ ಮೃತದೇಹವನ್ನು 300 ಮೀ‌.ನಷ್ಟು ದೂರ ಎಳೆದುಕೊಂಡು ಹೋಗಿದೆ.

ಮಧ್ಯಾಹ್ನ 12 ಗಂಟೆಯಾದರೂ ಗಣೇಶ್ ಮನೆಗೆ ವಾಪಸ್ ಬಾರದೇ ಇದ್ದುದರಿಂದ, ಆತನ ಪತ್ನಿ ಹಾಗೂ ಸಹೋದರ ಕಾಡಿನೊಳಗೆ ಹುಡುಕಾಡಿದ್ದಾರೆ. ಕೆರೆ ಬಳಿ ಗಣೇಶನ ಚಪ್ಪಲಿ, ಹುಲಿ ಹೆಜ್ಜೆ, ರಕ್ತದ ಕಲೆಗಳು ಎಳೆದೊಯ್ದಿರುವ ಕುರುಹು ಕಂಡು ಬಂದಿದೆ. ಬಳಿಕ ಪೊದೆಯೊಳಗೆ ಇದ್ದ ಶವ ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ನಿರ್ದೇಶಕ ಮಹೇಶ್ ಕುಮಾರ್ ಹಾಗೂ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ MES ಅವನತಿ.. ಶಿವಸೇನೆ ಕಂಗಾಲು: ಬಿಜೆಪಿ ವಿರುದ್ಧ ರಾವತ್​ ಕೆಂಡಾಮಂಡಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.