ETV Bharat / state

ಮೈಸೂರು: ಕಾದಾಟದಲ್ಲಿ ಹುಲಿ ಸಾವು - ETv Bharat Karnataka

ಮತ್ತೊಂದು ಹುಲಿ ಜೊತೆ ಕಾದಾಡಿ ಗಂಡು ಹುಲಿಯೊಂದು ಅಂತರಸಂತೆ ವನ್ಯಜೀವಿ ವಲಯದ ತಾರಕ ಶಾಖೆಯ ದಮ್ಮನಕಟ್ಟೆ ಅರಣ್ಯ ಪ್ರದೇಶದಲ್ಲಿ ಮೃತಪಟ್ಟಿದೆ.

Tiger dies in fight with another tiger
ಮತ್ತೊಂದು ಹುಲಿ ಜೊತೆ ಕಾದಾಟದಲ್ಲಿ ಹುಲಿ ಸಾವು
author img

By

Published : Nov 28, 2022, 9:07 AM IST

ಮೈಸೂರು :ಅಂತರಸಂತೆ ವನ್ಯಜೀವಿ ವಲಯ ಹುಲಿಗಳ ವಿಕ್ಷೇಣೆಯ ನೆಚ್ಚಿನ ತಾಣವಾಗಿದ್ದು, ಹಲವಾರು ಪ್ರವಾಸಿಗರನ್ನು ಸೆಳೆಯುತ್ತಿದೆ. ಆದರೆ ಈ ವಲಯದಲ್ಲಿ ಇತ್ತೀಚಿಗಿನ ದಿನಗಳಲ್ಲಿ ಹುಲಿಗಳು ಸಾವನ್ನಪ್ಪುತ್ತಿವೆ. ಅಂತರಸಂತೆ ವನ್ಯಜೀವಿ ವಲಯದ ತಾರಕ ಶಾಖೆಯ ದಮ್ಮನಕಟ್ಟೆ ಅರಣ್ಯ ಪ್ರದೇಶದಲ್ಲಿ ಎರಡು ಹುಲಿಗಳ ಮಧ್ಯೆ ಕಾದಾಟ ನಡೆದು ಗಂಡು ಹುಲಿಯೊಂದು ಮೃತಪಟ್ಟಿದೆ.

ಕಬಿನಿ ಹಿನ್ನೀರಿನಲ್ಲಿ ಬೇಟೆಗಾರರ ಉರಳಿಗೆ ಸಿಲುಕಿ ಸಾವನ್ನಪ್ಪಿದ ಹೆಣ್ಣು ಹುಲಿಯ ಮರಿಗಳು ಇತ್ತೀಚೆಗೆ ಕ್ಯಾಮರಾಗೆ ಸೆರೆ ಸಿಕ್ಕಿದವು ಅವುಗಳ ಚಲನವಲನವನ್ನು ಗಮನಿಸಲು ಕೂಂಬಿಂಗ್​ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಹುಲಿ ಮೃತದೇಹ ಪತ್ತೆಯಾಗಿದೆ.

ಹುಲಿ ಕತ್ತು, ಭುಜದ ಮೇಲೆ ಗಾಯಗಳಾಗಿದ್ದು ಮತ್ತೊಂದು ಹುಲಿ ಜೊತೆ ಕಾದಾಡಿ ಮೃತಪಟ್ಟಿದೆ ಎಂದು ಅರಣ್ಯಾಧಿಕಾರಿಗಳು ಖಚಿತಪಡಿಸಿದರು. ಬಳಿಕ ಹುಲಿ ಕಳೇಬರವನ್ನ ಅರಣ್ಯಾಧಿಕಾರಿಗಳು, ಇತರ ಅಧಿಕಾರಿಗಳು ಮತ್ತು ಪಶು ವೈದ್ಯರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಇದನ್ನೂ ಓದಿ :ಕಬಿನಿ ಬಳಿ ಹೆಣ್ಣು ಹುಲಿ ಸಾವು: ತಬ್ಬಲಿ ಮರಿಗಳ ಪತ್ತೆಗೆ ಕೂಂಬಿಂಗ್ ಕಾರ್ಯಾಚರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.