ETV Bharat / state

ಮೈಸೂರಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ದಾಳಿ: ಮಹಿಳೆ ಸೇರಿ ಮೂವರು ಅರೆಸ್ಟ್​

ಮೈಸೂರಿನ ಮಾಡಿಗೋಕುಲಂನ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಡಿ ಮನೆಯ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ, ಮೂವರನ್ನು ಬಂಧಿಸಿದ್ದಾರೆ.

ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ದಾಳಿ
author img

By

Published : Aug 18, 2019, 5:26 PM IST

ಮೈಸೂರು: ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಡಿ ಮನೆಯೊಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಮೂವರನ್ನು ಬಂಧಿಸಿ, ಓರ್ವ ಮಹಿಳೆಯನ್ನು ರಕ್ಷಿಸಿದ್ದಾರೆ.

ಬಂಧಿತರಿಂದ 14,070 ರೂ.ನಗದು, 04 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ವೇಶ್ಯಾವಾಟಿಕೆ ನಡೆಸುತ್ತಿದ್ದ ಚಿಕ್ಕಮಗಳೂರು ಜಿಲ್ಲೆಯ ನಿಲುವಾಗಿಲು ಗ್ರಾಮದ ರಘುನಂದ(35), ಹಾಸನ ಜಿಲ್ಲೆಯ ಹಿರಿಸಾವೆ ಗ್ರಾಮದ ಪ್ರದೀಪ್(29), ಉಡುಪಿ ಜಿಲ್ಲೆಯ ಹೆಣಗುಡ್ಡದ ನಿವಾಸಿ ಶ್ವೇತಾ (30) ಬಂಧಿತರು.

ಮಾಡಿಗೋಕುಲಂ 3ನೇ ಹಂತ, 13ನೇ ಕ್ರಾಸ್‍ನಲ್ಲಿರುವ ಮನೆಯೊಂದರಲ್ಲಿ ಹೊರ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳಿಂದ ಮಹಿಳೆಯರನ್ನು ಕರೆಯಿಸಿಕೊಂಡು ಅವರಿಗೆ ಹಣದ ಅಮಿಷವೊಡ್ಡಿ, ವೇಶ್ಯಾವಾಟಿಕೆಗೆ ತಳ್ಳುತ್ತಿದ್ದರು ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ.

ಈ ಸಂಬಂಧ ವಿವಿಪುರಂ‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ಧ ಈ ಮೊದಲು ಲಷ್ಕರ್ ಹಾಗೂ ವಿಜಯನಗರ ಪೊಲೀಸ್ ಠಾಣೆಗಳಲ್ಲಿ ಇದೇ ವಿಚಾರವಾಗಿ ಐಟಿಪಿ ಕಾಯ್ದೆ ಅನ್ವಯ ಪ್ರಕರಣಗಳು ದಾಖಲಾಗಿವೆ. ಆದರೂ ಸಹ ಜಾಮೀನಿನ ಮೇಲೆ ಹೊರ ಬಂದು ಮತ್ತೆ ಇದೇ ಚಾಳಿಯನ್ನು ಮುಂದುವರೆಸಿದ್ದಾರೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Intro:ಕ್ರೈಮ್ Body:ವೇಶ್ಯಾವಾಟಿಕೆ ಅಡ್ಡ ಮೇಲೆ ದಾಳಿ ಮೂವರ ಬಂಧನ
ಮೈಸೂರು: ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಯ ಮೇಲೆ ಸಿಸಿಬಿ ಪೊಲೀಸರ ದಾಳಿ ಮಾಡಿ, ಮೂವರ ಬಂಧಿಸಿ ಒಬ್ಬ ಮಹಿಳೆ ರಕ್ಷಣೆ ಮಾಡಿದ್ದಾರೆ.
ಬಂಧಿತರಿಂದ 14,070 ರೂ.ನಗದು, 04 ಮೊಬೈಲ್ ಫೋನ್‍ಗಳ ವಶ ಪಡಿಸಿಕೊಂಡಿದ್ದಾರೆ. ವೇಶ್ಯಾವಾಟಿಕೆ ನಡೆಸುತ್ತಿದ್ದ
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ನಿಲುವಾಗಿಲು ಗ್ರಾಮದ ರಘುನಂದ(35) ,ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದ ಹಿರಿಸಾವೇ ಗ್ರಾಮದ ಪ್ರದೀಪ್(29),ಉಡುಪಿ ಜಿಲ್ಲೆಯ ಹೇಣಗುಡ್ಡದ ನಿವಾಸಿ 3) ಶ್ವೇತಾ (30) ಬಂಧಿತರು.

ಗೋಕುಲಂ 3ನೇ ಹಂತ, 13ನೇ ಕ್ರಾಸ್‍ನಲ್ಲಿರುವ ಮನೆಯೊಂದರ ಮೇಲೆ ದಾಳಿ ಮಾಡಿ, ಹೊರಜಿಲ್ಲೆಗಳಿಂದ ಹಾಗೂ ಹೊರರಾಜ್ಯಗಳಿಂದ ಹೆಂಗಸರನ್ನು ಕರೆಯಿಸಿಕೊಂಡು ಅವರಿಗೆ ಹಣದ ಅಮಿಷ ಒಡ್ಡಿ ಅವರನ್ನು ವೇಶ್ಯಾವಾಟಿಕೆಗೆ ಬಳಕೆ ಮಾಡಿಕೊಳ್ಳುತ್ತಿದ್ದರು ಮಾಹಿತಿ ಮೇರೆಗೆ ದಾಳಿ ಮಾಡಿ ಮೂವರನ್ನು ಬಂಧಿಸಿ, ಓರ್ವ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಈ ಸಂಬಂಧ ವಿವಿಪುರಂ‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ವಿರುದ್ದ ಈ ಮೊದಲು ಲಷ್ಕರ್ ಹಾಗೂ ವಿಜಯನಗರ ಪೊಲೀಸ್ ಠಾಣೆಗಳಲ್ಲಿ ಇದೇ ವಿಚಾರವಾಗಿ ಐ.ಟಿ.ಪಿ. ಕಾಯ್ದೆ ರೀತ್ಯಾ ಪ್ರಕರಣಗಳು ದಾಖಲಾಗಿದ್ದರೂ ಸಹ,
ಜಾಮೀನಿನ ಮೇಲೆ ಹೊರ ಬಂದು ಮತ್ತೆ ಇದೇ ಚಾಳಿಯನ್ನು ಮುಂದುವರೆಸಿದ್ದಾರೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.Conclusion:ಕ್ರೈಮ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.