ETV Bharat / state

ಕೈ ಕೊಟ್ಟ ಮಳೆ: ನುಗು ಜಲಶಾಯದಿಂದ ನಾಲೆಗಳಿಗೆ ನೀರು ಬಂದ್ - ಮಳೆ

ಮುಂಗಾರು ಕೈಕೊಟ್ಟ ಹಿನ್ನಲೆ ಜಲಾಶಯಗಳಿಂದ ನಾಲೆಗಳಿಗೆ ಹರಿಸುವ ನೀರು ಬಂದ್ ಮಾಡಲಾಗಿದೆ.

ನುಗು ಜಲಶಾಯ
author img

By

Published : Jun 29, 2019, 1:54 PM IST

ಮೈಸೂರು: ಮುಂಗಾರು ಮುನುಸಿಕೊಂಡಿರುವುದರಿಂದ ಅನ್ನದಾತ ಕಂಗಾಲಾಗಿದ್ದಾನೆ. ಈ ವೇಳೆಯಲ್ಲಿ ನೇಗಿಲಯೋಗಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಹೌದು, ವಾಡಿಕೆಯಂತೆ ಜೂನ್ ಆರಂಭದಲ್ಲಿಯೇ ಮುಂಗಾರು ಆರಂಭಗೊಂಡು ಕೃಷಿಕರೆಲ್ಲ ಬಿತ್ತನೆ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಬೇಕಾಗಿತ್ತು.

ಆದರೆ, ಮುಂಗಾರು ಕೈಕೊಟ್ಟಿರುವುದರಿಂದ ಜಲಾಶಯಗಳಿಂದ ನಾಲೆಗಳಿಗೆ ನೀರು ಬಿಡುತ್ತಿಲ್ಲ.ಇದರಿಂದ ಗಾಯದ ಮೇಲೆ ಉಪ್ಪು ಸವರಿದ ರೀತಿಯ ಸ್ಥಿತಿ ಅನ್ನದಾತನಿಗಾಗಿದೆ.
ಸರಗೂರು ತಾಲೂಕಿನ ನುಗು ಜಲಾಶಯ ಕಾವೇರಿ ಕೊಳ್ಳದ ಭಾಗದ ಜಲಾಶಯಗಳಲ್ಲಿ ಅತ್ಯಂತ ಎತ್ತರದ ಜಲಾಶಯವಾಗಿದೆ. ಈ ಜಲಾಶಯದಿಂದ ನಾಲೆಗಳಿಗೆ ನೀರು ಬಿಡುತ್ತಿದ್ದರಿಂದ ಆ ಭಾಗದ 40ಕ್ಕೂ ಹೆಚ್ಚು ಹಳ್ಳಿಗಳಿಗೆ ನೀರಿನ ಉಪಯೋಗವಾಗುತ್ತಿತ್ತು. ಕೃಷಿಗೆ ಅಲ್ಲದೆ ಜಾನುವಾರುಗಳ ನೀರಿನ ಅಭಾವ ಕೂಡ ನೀಗುತ್ತಿತ್ತು.

ನುಗು ಜಲಶಾಯ

ಇದೀಗ ಮುಂಗಾರು ಕೈಕೊಟ್ಟ ಹಿನ್ನಲೆ ಜಲಾಶಯಗಳಿಂದ ನಾಲೆಗಳಿಗೆ ಹರಿಸುವ ನೀರು ಬಂದ್ ಮಾಡಲಾಗಿದೆ. ಮಳೆ ಕೈ ಕೊಟ್ಟ ನಂತರ ನಾಲೆ ನೀರನ್ನ ನಂಬಿ ಅನ್ನದಾತರು ಕಾಳು ಕಡ್ಡಿ ಬೆಳೆಯಲು ಮುಂದಾಗಿದ್ರು. ಆದರೆ ಆ ಆಲೋಚನೆಗಳಿಗೂ ತಣ್ಣೀರು ಎರಚುವಂತಹ ಪರಿಸ್ಥಿತಿ ಎದುರಾಗಿದೆ. ಮುಂಗಾರು ಬೆಳೆಗೆ ಈ ದುಸ್ಥಿತಿ ಬಂದಿದೆ. ಒಂದ್ವೇಳೆ ಜುಲೈನಲ್ಲಿ ಮತ್ತೆ ಮಳೆ ಕೈಕೊಟ್ಟರೆ ಹಿಂಗಾರು ಬೆಳೆಗೆ ನಮ್ಮ ಗತಿ ಏನು ಎಂಬ ಚಿಂತೆ ರೈತರನ್ನು ಕಾಡುತ್ತಿದೆ.

Intro:ಕೈಕೊಟ್ಟ ಮುಂಗಾರು ಜಲಾಶಯ

Body:ಕೈಕೊಟ್ಟ ಮುಂಗಾರು

Conclusion:ಮುನುಸಿಕೊಂಡ‌ ಮುಂಗಾರು ಎಫೆಕ್ಟ್ : ನುಗು ಜಲಾಯಶದಿಂದ ನಾಲೆಗಳಿಗೆ ನೀರು ಬಂದ್
ಮೈಸೂರು: ಮುಂಗಾರು ಮುನುಸಿಕೊಂಡಿರುವುದರಿಂದ ಕಂಗಾಲಾಗಿರುವ ಅನ್ನದಾತನ ಮೇಲೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಹೌದು, ವಾಡಿಕೆಯಂತೆ ಜೂನ್ ಆರಂಭದಲ್ಲಿಯೇ ಮುಂಗಾರು ಆರಂಭಗೊಂಡು ಬಿತ್ತನೆ ಕಾರ್ಯ ಚಟುವಟಿಕೆಯಲ್ಲಿ ಕೃಷಿಕರು ಸಂಪೂರ್ಣವಾಗಿ ತೊಡಗಿಕೊಳ್ಳಬೇಕಾಯಿತು.ಆದರೆ ಮುಂಗಾರು ಕೈಕೊಟ್ಟಿರುವುದರಿಂದ ಜಲಾಶಯಗಳಿಂದ ನಾಲೆಗಳಿಗೆ ನೀರು ಬಿಡುತ್ತಿಲ್ಲ.ಇದರಿಂದ ಗಾಯದ ಮೇಲೆ ಉಪ್ಪು ಸವಾರಿದ ರೀತಿಯ ಸ್ಥಿತಿ ಅನ್ನದಾತನಿಗಾಗಿದೆ.
ಸರಗೂರು ತಾಲ್ಲೂಕಿನ ನುಗು ಜಲಾಶಯ ಕಾವೇರಿ ಕೊಳ್ಳದ ಭಾಗದ ಜಲಾಶಯಗಳಲ್ಲಿ ಅತ್ಯಂತ ಎತ್ತರದ ಜಲಾಶಯವಾಗಿದೆ.ಈ ಜಲಾಶಯದಿಂದ ನಾಲೆಗಳಿಗೆ ನೀರು ಬಿಡುತ್ತಿದ್ದರಿಂದ ಆ ಭಾಗದ 40ಕ್ಕೂ ಹೆಚ್ಚು ಹಳ್ಳಿಗಳಿಗೆ ನೀರಿನ ಉಪಯೋಗವಾಗುತ್ತಿತ್ತು.ಕೃಷಿಗೆ ಅಲ್ಲದೇ ಜಾನುವಾರುಗಳಿಗೂ ನೀರಿನ ಅಭಾವ ನೀಗುತ್ತಿತ್ತು.
ಆದರೆ ಮುಂಗಾರು ಮಳೆ ಕೈಕೊಟ್ಟ ಹಿನ್ನಲೆಯಲ್ಲಿ ಜಲಾಶಯಗಳಿಂದ ನಾಲೆಗಳಿಗೆ ನೀರು ಬಂದ್ ಮಾಡಲಾಗಿದೆ.ಮಳೆ ನಂಬಿ ಕೈ ಸುಟ್ಟುಕೊಂಡಿರುವ ರೈತರು, ನಾಲೆಗಳಲ್ಲಿ ಹರಿಯುವ ನೀರಿನ ಮೂಲಕ ಕಾಳು ಕಡ್ಡಿಗಳನ್ನು ಬೆಳೆದುಕೊಂಡು ಮನೆಮಂದಿಗೆ ಕೂಳಿಗಾದರು ವ್ಯವಸಾಯ ಮಾಡೋಣವೆಂದು ಭಾವಿಸಿದ್ದರು.ಆದರೆ ಆಲೋಚನೆಗಳಿಗೆ ತಣ್ಣೀರು ಎರಚುವಂತಹ ಪರಿಸ್ಥಿತಿ ಎದುರಾಗಿದೆ.
ಮುಂಗಾರು ಬೆಳೆಗೆ ಈ ರೀತಿಯಾದರೆ.ಜುಲೈ ನಲ್ಲಿ ಮುಂಗಾರು ಮತ್ತೆ ಕೈಕೊಟ್ಟರೆ ಹಿಂಗಾರು ಬೆಳೆಗೆ ನಮ್ಮಗತಿ ಏನು ಎಂಬ ಚಿಂತೆ ರೈತರಿಗೆ ಕಾಡುತ್ತಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.