ETV Bharat / state

ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ನಾನೂ ಪ್ರಬಲ ಆಕಾಂಕ್ಷಿ: ಸುನೀಲ್ ಬೋಸ್ - ಕೀಳು ಮಟ್ಟದ ರಾಜಕೀಯ ಮಾಡುವುದಿಲ್ಲ

2008 ರಿಂದ ಕಾಂಗ್ರೆಸ್ ಪಕ್ಷ ಕೊಟ್ಟ ಕೆಲಸವನ್ನು ಚಾಚು ತಪ್ಪದೇ ಮಾಡುತ್ತಾ ಬಂದಿದ್ದೇನೆ. ಹೀಗಾಗಿ ಲೋಕಸಭಾ ಚುನಾವಣೆಗೆ ಸ್ಫರ್ಧಿಸಲು ಅವಕಾಶ ಕೊಡಿ ಎಂದು ಪಕ್ಷವನ್ನು ಕೇಳುವುದಾಗಿ ಸುನೀಲ್ ಬೋಸ್ ಹೇಳಿದ್ದಾರೆ.

sunil-bose-reaction-on-contest-of-lok-sabha-election
ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ನಾನೂ ಒಬ್ಬ ಪ್ರಬಲ ಆಕಾಂಕ್ಷಿ: ಸುನೀಲ್ ಬೋಸ್
author img

By

Published : Jul 22, 2023, 4:02 PM IST

Updated : Jul 22, 2023, 4:52 PM IST

ಸುನೀಲ್ ಬೋಸ್

ಮೈಸೂರು: ಮುಂದಿನ ಲೋಕಸಭಾ ಚುನಾವಣೆಗೆ ನಾನು ಪ್ರಬಲ ಆಕಾಂಕ್ಷಿ, ಪಕ್ಷ ಟಿಕೆಟ್​ ನೀಡಿದರೆ ನಾನು ಸ್ಪರ್ಧಿಸುತ್ತೇನೆ. ಇಲ್ಲ ಎಂದರೇ ಯಾರನ್ನು ಪಕ್ಷ ಗುರುತಿಸಿ ಟಿಕೆಟ್ ನೀಡುತ್ತದೋ ಅವರ ಪರವಾಗಿ ನಿಂತು ಗೆಲ್ಲಿಸುವ ಕೆಲಸ ಮಾಡುತ್ತೇನೆ ಎಂದು ಸಚಿವ ಡಾ.ಹೆಚ್. ಸಿ.ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಹೇಳಿದರು. ಮೈಸೂರಿನ ಕಲಾಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗುವ ಇಂಗಿತ ವ್ಯಕ್ತಪಡಿಸಿದರು.

ಮುಂದಿನ ಲೋಕಸಭಾ ಚುನಾವಣೆಗೆ ನಾನು ಸಹ ಪ್ರಬಲ ಆಕಾಂಕ್ಷಿ. 2008 ರಿಂದ ಕಾಂಗ್ರೆಸ್ ಪಕ್ಷ ಕೊಟ್ಟ ಕೆಲಸವನ್ನು ಚಾಚು ತಪ್ಪದೇ ಮಾಡುತ್ತಾ ಬಂದಿದ್ದೇನೆ. ಹಾಗಾಗಿ ನಾನು ಕೂಡ ಪಕ್ಷಕ್ಕೆ ದುಡಿದಿರುವುದರಿಂದ ನನಗೂ ಒಂದು ಅವಕಾಶ ಮಾಡಿಕೊಡಿ ಎಂದು ಕೇಳುತ್ತೇನೆ. ಹೈಕಮಾಂಡ್​ ಟಿಕೆಟ್​ ಕೊಟ್ಟರೆ ಸ್ಫರ್ಧೆ ಮಾಡುತ್ತೇನೆ, ಇಲ್ಲ ಬೇರೆಯವರಿಗೆ ಕೊಟ್ಟಿರೆ ಅವರ ಪರವಾಗಿ ದುಡಿಯುತ್ತೇನೆ ಎಂದು ಹೇಳಿದರು.

ಬಿಜೆಪಿ ಮತ್ತು ಜೆಡಿಎಸ್​ನವರು ನಿಮ್ಮನ್ನು ಟಾರ್ಗೆಟ್​ ಮಾಡಿತ್ತಿದ್ದಾರೆಯೇ ಎಂದು ಮಾಧ್ಯದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬೆಳೆಯುವಂತವರಿಗೆ ವೈರಿಗಳು ಇರುತ್ತಾರೆ. ವೈರಿಗಳು ಇದಷ್ಟು ಬೆಳೆಯಲು ಅನುಕೂಲವಾಗುತ್ತದೆ. ಅವರು ಟಾರ್ಗೆಟ್​ ಮಾಡಿದಾಗ ಮಾಧ್ಯಮದವರು ಸತ್ಯ ಇದೆಯೇ ಎಂದು ಹುಡಕಬೇಕು ಎಂದರು.

ಕೀಳು ಮಟ್ಟದ ರಾಜಕೀಯ ಮಾಡುವುದಿಲ್ಲ: ಹೊರ ಗುತ್ತಿಗೆಯಲ್ಲಿ ಕೆಲಸ ಮಾಡುವವರನ್ನು ನಿಗದಿತ ಕಾಲಾವಧಿ ಮುಗಿದ ಮೇಲೆ ಅವರನ್ನು ಕೆಲಸದಿಂದ ತೆಗೆಯುವುದು ಆಯಾ ಇಲಾಖೆಯ ಕೆಲಸವಾಗಿದೆ. ಇದರಲ್ಲಿ ನಾನು ಅವರನ್ನು ಕೆಲಸದಿಂದ ತೆಗೆಸಿದೆ ಎಂಬ ಮಾತು ಸತ್ಯಕ್ಕೆ ದೂರವಾದದ್ದು. ಇಂತಹ ಕೀಳು ಮಟ್ಟದ ರಾಜಕಾರಣವನ್ನ ನಾನಾಗಲಿ ಅಥವಾ ನಮ್ಮ ತಂದೆಯವರಾಗಲಿ ಮಾಡುವುದಿಲ್ಲ ಎಂದು ಹೇಳಿದರು.

ರಾಜಕೀಯದಲ್ಲಿ ಬೆಳೆಯುವಾಗ ಇವೆಲ್ಲ ಸಾಮಾನ್ಯ. ಈ ಪ್ರಕರಣದಲ್ಲಿ ನನ್ನ ಹಸ್ತಕ್ಷೇಪ ಇಲ್ಲ. ಚುನಾವಣಾ ಸಂದರ್ಭದಲ್ಲಿ ಟಿ.ನರಸೀಪುರ ಕ್ಷೇತ್ರದ ಎಲ್ಲ ಕಡೆ ಓಡಾಡಿ, ತಂದೆ ಪರವಾಗಿ ಕೆಲಸ ಮಾಡಿ ತಂದೆಯನ್ನು ಗೆಲ್ಲಿಸಿಕೊಟ್ಟಿದ್ದೇನೆ. ಜನರಿಗೆ ಕೊಟ್ಟ ಮಾತಿನಂತೆ ಕೆಲಸ ಮಾಡುವುದು ನನ್ನ ಕರ್ತವ್ಯವಾಗಿದೆ. ನಾನಾಗಲಿ ಅಥವಾ ನನ್ನ ತಂದೆಯವರಾಗಲಿ ಯಾವಾಗಲೂ ಕೀಳು ಮಟ್ಟದ ಹಾಗೂ ದ್ವೇಷದ ರಾಜಕಾರಣ ಮಾಡಿದವರಲ್ಲ. ಆಡಿಯೋ ವೈರಲ್ ವಿಚಾರ ಈಗ ನನಗೆ ಗೊತ್ತಾಗಿದೆ. ಅಧಿಕಾರಿ ಯಾಕೆ ನನ್ನ ಹೆಸರನ್ನು ಬಳಸಿದನೋ ಗೊತ್ತಿಲ್ಲ. ಈ ಬಗ್ಗೆ ಮಾಹಿತಿ ಪಡೆಯತ್ತೇನೆ ಎಂದರು.

ಹೊಸ ಸರ್ಕಾರ ಬಂದಾಗ ವರ್ಗಾವಣೆ ನಡೆಯುವುದು ಸಹಜ ಪ್ರಕ್ರಿಯೆ. ಇದು ಯಾವ ಸರ್ಕಾರ ಬಂದರು ನಡೆಯುತ್ತದೆ. ಬೇರೆ ಸರ್ಕಾರ ಬಂದಾಗ ಟಿ.ನರಸೀಪುರದಲ್ಲಿ ವರ್ಗಾವಣೆ ನಡೆದಿಲ್ಲವೇ?. ಅವರಿಗೆ ಬೇಕಾದ ಅಧಿಕಾರಿಗಳನ್ನು ಹಾಕಿಸಿಕೊಳ್ಳುತ್ತಾರೆ. ಇದರಲ್ಲಿ ಹೊಸದೇನು ಇಲ್ಲ ಎಂದು ಸುನೀಲ್ ಬೋಸ್ ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: ಹಾಲಿನ ಬೆಲೆ ಲೀಟರಿಗೆ 3 ರೂಪಾಯಿ ಹೆಚ್ಚಿಸಿ ಶ್ರಮಜೀವಿಗಳ ಕಿಸೆಗೆ ಕನ್ನ.. ಕಾಂಗ್ರೆಸ್ಸಿಗರು ಜನರ ತಲೆಯ ಮೇಲೆ ಫ್ಲವರ್ ಪಾಟ್ ಇಡುತ್ತಿದ್ದಾರೆ: ಕುಮಾರಸ್ವಾಮಿ ಕಿಡಿ

Last Updated : Jul 22, 2023, 4:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.