ETV Bharat / state

ಪರೀಕ್ಷೆಯಲ್ಲಿ ಫೇಲಾಗುವ ಭಯದಿಂದ ಪಿಯು ವಿದ್ಯಾರ್ಥಿನಿ ನೇಣಿಗೆ ಶರಣು.. - ಮೈಸೂರು ಅಪರಾಧ ಸುದ್ದಿ

ಮಾರ್ಚ್ 4ರಂದು ದ್ವಿತೀಯ ಪಿಯು ಪರೀಕ್ಷೆ ಇದೆ. ಈ ಪರೀಕ್ಷೆಗೆ ಸರಿಯಾಗಿ ಓದಿಲ್ಲ, ಫೇಲ್ ಆಗುತ್ತೇನೆ ಎಂದು ತಿಳಿದು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದು ಬಂದಿದೆ.

Student committed suicide over Exam fear at Nanjangud
ನಂಜನಗೂಡಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು
author img

By

Published : Feb 28, 2020, 12:33 PM IST

ಮೈಸೂರು : ಪರೀಕ್ಷಾ ಭಯದಿಂದ ವಿದ್ಯಾರ್ಥಿನಿ ನೇಣಿಗೆ ಶರಣಾದ ಘಟನೆ ನಂಜನಗೂಡು ತಾಲೂಕಿನ ಬಿಳಿಗಿರಿ ಗ್ರಾಮದಲ್ಲಿ ಜರುಗಿದೆ.

ಪ್ರಿಯಾಂಕ್ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಈಕೆ ತಿ.ನರಸೀಪುರ ಸರ್ಕಾರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಮಾರ್ಚ್ 4ರಂದು ದ್ವಿತೀಯ ಪಿಯು ಪರೀಕ್ಷೆ ಇದೆ. ಈ ಪರೀಕ್ಷೆಗೆ ಸರಿಯಾಗಿ ಓದಿಲ್ಲ, ಫೇಲ್ ಆಗುತ್ತೇನೆ ಎಂದು ಆಗಾಗ ಮನೆಯಲ್ಲಿ ಹೇಳುತ್ತಿದ್ದಳಂತೆ.

ನಿನ್ನೆ ಸಂಜೆ ಕಾಲೇಜು ಮುಗಿಸಿಕೊಂಡು ಮನೆಗೆ ಬಂದ ಈಕೆ, ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ. ಮೃತಳ ತಂದೆ ಬಿಳಿಗೆರೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.