ETV Bharat / state

KRS ಅಣೆಕಟ್ಟು ಯೋಜನೆಗಳು ಇನ್ನೂ ಪೂರ್ಣಗೊಂಡಿಲ್ಲ: ನಿವೃತ್ತ ತಹಶೀಲ್ದಾರ್ ಬದರಿನಾಥ್ - retired tahsildar Badarinath

ಕೆಆರ್​ಎಸ್​ ಅಣೆಕಟ್ಟಿಗೆ ಸಂಬಂಧಿಸಿದ ಅನೇಕ ಯೋಜನೆಗಳು ಇನ್ನೂ ಪೂರ್ಣಗೊಂಡಿಲ್ಲ ಎಂದು ಮೈಸೂರಿನಲ್ಲಿ ನಿವೃತ್ತ ತಹಶೀಲ್ದಾರ್ ಬದರಿನಾಥ್ ಹೇಳಿದ್ದಾರೆ.

retired tahsildar Badarinath
ನಿವೃತ್ತ ತಹಶೀಲ್ದಾರ್ ಬದರಿನಾಥ್
author img

By

Published : Jul 16, 2021, 6:59 AM IST

ಮೈಸೂರು: ಕೆಆರ್​ಎಸ್ ಅಣೆಕಟ್ಟು ನಿರ್ಮಾಣವಾಗಿ 85 ವರ್ಷ ಕಳೆದರೂ, ಇದಕ್ಕೆ ಸಂಬಂಧಿಸಿದ ಯೋಜನೆಗಳು ಇನ್ನೂ ಪೂರ್ಣಗೊಂಡಿಲ್ಲ ಎಂದು ನಿವೃತ್ತ ತಹಶೀಲ್ದಾರ್ ಬದರಿನಾಥ್ ಹೇಳಿದ್ದಾರೆ.

ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂದಿನ ಮೈಸೂರು - ಮದ್ರಾಸ್ ಸರ್ಕಾರದ ಒಪ್ಪಂದದಂತೆ ಕೆಆರ್​ಎಸ್ ಅಣೆಕಟ್ಟೆಯಿಂದ 1,25,000 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ನೀಡಬೇಕಿತ್ತು. ಆದರೆ, ಈಗ ಕೇವಲ 96,419 ಎಕರೆ ಮಾತ್ರ ನೀರಾವರಿ ಪ್ರದೇಶವಾಗಿದೆ. ಇದುವರೆಗೂ ಸಹ ಉಳಿದ 28,581 ಎಕರೆ ಪ್ರದೇಶಕ್ಕೆ ನೀರು ಕೊಟ್ಟಿಲ್ಲ ಎಂದರು.

ಈ ಯೋಜನೆ ಇನ್ನೂ ಪೂರ್ಣವಾಗದಿದ್ದರೂ ಕೂಡ ಶ್ರೀರಂಗಪಟ್ಟಣದಲ್ಲಿ ವಿದ್ಯುತ್ ಪವರ್ ಜನರೇಟಿಂಗ್ ಯೂನಿಟ್ ಮಾಡಲಾಗುತ್ತಿದೆ. ವಿದ್ಯುತ್ ಉತ್ಪಾದನೆಗೆ ನಿರಂತರವಾಗಿ ನೀರು ಹರಿಸುವುದರಿಂದ ಕೆಆರ್​ಎಸ್ ಅಣೆಕಟ್ಟೆಯಲ್ಲಿ ನೀರು ಸಂಗ್ರಹ ಕಡಿಮೆಯಾಗುತ್ತದೆ. ಅಲ್ಲದೇ ಇದರಿಂದ ನೀರಾವರಿ ಪ್ರದೇಶಗಳಿಗೆ ತೊಂದರೆಯಾಗಲಿದೆ ಎಂದು ತಿಳಿಸಿದರು.

ವಿದ್ಯುತ್ ಉತ್ಪಾದನೆಗೆ ಬಿಡಲಾಗುವ ನೀರು ತಮಿಳುನಾಡಿಗೆ ಸೇರುತ್ತದೆ. ಹಾಗಾಗಿ ಸರ್ಕಾರ ಈ ಬಗ್ಗೆ ಗಮನಹರಿಸಬೇಕು. ಅಲ್ಲದೇ ನಂಜನಗೂಡು ಭಾಗದ ಕೆರೆಗಳನ್ನು ಅಭಿವೃದ್ಧಿಪಡಿಸಿದಲ್ಲಿ ಕೆಆರ್​​ಎಸ್​ನಲ್ಲಿ ನೀರು ಉಳಿತಾಯವಾಗಲಿದೆ. ಅಣೆಕಟ್ಟಿನಲ್ಲಿ ಉಳಿತಾಯದ ನೀರನ್ನು ಬೆಂಗಳೂರಿಗೆ ಸರಬರಾಜು ಮಾಡಬಹುದು ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.