ETV Bharat / state

ಮೈಸೂರು: ಭಾರತೀಯ ಸೇನಾ ನಿವೃತ್ತ ಮೇಜರ್ ಜನರಲ್ ಸಿ ಕೆ ಕರುಂಬಯ್ಯ ನಿಧನ - ನಿವೃತ್ತ ಮೇಜರ್ ಜನರಲ್

1971ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಸಾವಿರಾರು ಪಾಕ್ ಯೋಧರ ಶರಣಾಗತಿಗೆ ಕಾರಣರಾಗಿದ್ದರು. ಈ ವೇಳೆ ಮಗುರಾದಲ್ಲಿ ಶಸ್ತ್ರಾಸ್ತ್ರ ಸಾಗಣೆ ಮಾಡುತ್ತಿದ್ದ ಪಾಕಿಸ್ತಾನದ 300 ಟ್ರಕ್ ಗಳನ್ನು ವಶಕ್ಕೆ ಪಡೆದಿದ್ದರು. ಮೇಜರ್ ಜನರಲ್ ಸಿ ಕೆ ಕರುಂಬಯ್ಯ ಅವರ ಸೇನಾ ಸೇವೆ ಪರಿಗಣಿಸಿ ರಾಷ್ಟ್ರಪತಿ ಅವರಿಂದ ಗೌರವ ಸನ್ಮಾನ, ಸೇನಾ ಪದಕವೂ ಸಿಕ್ಕಿದೆ

Retired Major General CK Karumbaiah
ನಿವೃತ್ತ ಮೇಜರ್ ಜನರಲ್ ಸಿ ಕೆ ಕರುಂಬಯ್ಯ
author img

By ETV Bharat Karnataka Team

Published : Jan 4, 2024, 10:53 PM IST

ಮೈಸೂರು: ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ನಿವೃತ್ತ ಮೇಜರ್ ಜನರಲ್ ಸಿ ಕೆ ಕರುಂಬಯ್ಯ(88) ಅವರು ಮೈಸೂರಿನ ತಾಲೂಕಿನ ಹೆಮ್ಮನಹಳ್ಳಿಯ ಅವರ ತೋಟದ ಮನೆಯಲ್ಲಿ ಗುರುವಾರ ನಿಧನರಾದರು. ಮೃತರಿಗೆ ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅವರು ಇದ್ದಾರೆ. ವಿಜಯನಗರದಲ್ಲಿರುವ ಚಿತಾಗಾರದಲ್ಲಿ ಶುಕ್ರವಾರ (ಜ.5) ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸಿ ಕೆ ಕರುಂಬಯ್ಯ ಶಿಕ್ಷಣ : ಮಡಿಕೇರಿಯಲ್ಲಿ 1936ರ ಡಿ.3ರಂದು ಡಾ. ಸಿ ಬಿ ಕಾರಿಯಪ್ಪ ಪುತ್ರರಾಗಿ ಕರುಂಬಯ್ಯ ಜನಿಸಿದ್ದರು. ಅವರು ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪ ಅವರ ಹತ್ತಿರದ ಸಂಬಂಧಿ ಎನ್ನಲಾಗಿದೆ. ಮಡಿಕೇರಿಯ ಸೆಂಟ್ರಲ್ ಪ್ರೌಢಶಾಲೆ, ಸರ್ಕಾರಿ ಕಾಲೇಜಿನಲ್ಲಿ ಶಿಕ್ಷಣ ಪಡೆದ ಅವರು, 1957ರಲ್ಲಿ ಡೆಹ್ರಾಡೂನ್ ನ ಭಾರತೀಯ ಮಿಲಿಟರಿ ಅಕಾಡೆಮಿಗೆ ಸೇರ್ಪಡೆಗೊಂಡರು.

ರಾಷ್ಟ್ರಪತಿ ಗೌರವ, ಸೇನಾ ಪದಕ ಪಡೆದ ಸಿ ಕೆ ಕರುಂಬಯ್ಯ : ತಮ್ಮ ವೃತ್ತಿ ಜೀವನವನ್ನು ಮರಾಠ ಲಘು ಪದಾತಿದಳದ 5ನೇ ಬೆಟಾಲಿಯನ್​​ನಲ್ಲಿ ಆರಂಭಿಸಿದರು. ನಾಗಾಲ್ಯಾಂಡ್, ಮಿಜೋರಾಂ,ತ್ರಿಪುರಾದ ಸೇನೆ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದರು. 1965ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ರಾಜಸ್ಥಾನ ಗಡಿಯಲ್ಲಿ ಹೋರಾಟ ನಡೆಸಿ ಪಾಕ್​​ನ ಹಲವು ಗ್ರಾಮಗಳನ್ನು ವಶಪಡಿಸಿಕೊಂಡಿದ್ದರು.

1971ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಸಾವಿರಾರು ಪಾಕ್ ಯೋಧರ ಶರಣಾಗತಿಗೆ ಕಾರಣರಾಗಿದ್ದರು. ಮಗುರಾದಲ್ಲಿ ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ಪಾಕಿಸ್ತಾನದ 300 ಟ್ರಕ್ ಗಳನ್ನು ವಶಕ್ಕೆ ಪಡೆದಿದ್ದರು. ಅವರು ಮುನ್ನಡೆಸಿದ್ದ ರೀತಿಗೆ ರಾಷ್ಟ್ರಪತಿ ಅವರಿಂದ ಗೌರವ ಸಿಕ್ಕಿತ್ತು. ಅಲ್ಲದೇ, ಅವರಿಗೆ ಸೇನಾ ಪದಕವೂ ಒಲಿದು ಬಂದಿತ್ತು.

1972ರಲ್ಲಿ ಉತ್ತರ ಪ್ರದೇಶದ ಜಹಾಂಗೀರಾಬಾದ್ ದಂಗೆಯನ್ನು ಹತ್ತಿಕ್ಕಿದ್ದರು. ಸಿಕ್ಕೀಂನ ನಾಥೂಲಾದಲ್ಲಿ ಇವರ ಬೆಟಾಲಿಯನ್‌ಗೆ ಬ್ಲ್ಯಾಕ್ ಕ್ಯಾಟ್ ಟ್ರೋಫಿ ಸಿಕ್ಕಿತ್ತು. ವೆಲ್ಲಿಂಗ್ಟನ್​ ನ ರಕ್ಷಣಾ ಸೇವೆಗಳ ಸ್ಟಾಫ್ ಕಾಲೇಜಿನಲ್ಲಿ ಪದವಿ ಪಡೆದರು. ನಂತರ ಬೆಳಗಾವಿ ಹಾಗೂ ಹಿಮಾಚಲ ಪ್ರದೇಶದ ಸೇನಾ ಶಾಲೆಗಳ ಸ್ಟೇಷನ್ ಕಮಾಂಡರ್ ಹಾಗೂ ಕಂಟೋನ್ಮೆಂಟ್ ಬೋರ್ಡ್‌ನ ಅಧ್ಯಕ್ಷರು ಕೂಡ ಆಗಿದ್ದರು. ಕರಂಬಯ್ಯ ಅವರು ಲಡಾಖ್ ನಲ್ಲಿ 121 ಇನ್​ಫೆಂಟ್ರಿ ಬ್ರಿಗೇಡ್ ಗ್ರೂಪ್ ಮುನ್ನಡೆಸಿ, ಹೆಚ್ಚುವರಿ ಮಿಲಿಟರಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. 35 ವರ್ಷ ಭಾರತೀಯ ಸೇನೆಯ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ 1991ರ ಡಿ.31ರಂದು ಸೇವೆಯಿಂದ ನಿವೃತ್ತರಾಗಿದ್ದರು.

ಇದನ್ನೂಓದಿ :ಬಾಬಾಬುಡನ್ ಗಿರಿ ಕೇಸ್ ರೀಓಪನ್ ಮಾಡಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.