ETV Bharat / state

ಹಾಟ್​ಸ್ಪಾಟ್ ರಾಜ್ಯಗಳಿಂದ ಬರುವವರಿಗೆ ನಿರ್ಬಂಧ: ಮೈಸೂರು ಡಿಸಿ ಅಭಿರಾಮ್

ಕಂಟೈನ್ಮೆಂಟ್ ವಲಯಗಳಲ್ಲೂ ಕೆಲ ಸಡಿಲಿಕೆ ಮಾಡಲಾಗಿದೆ. ಪೂರ್ತಿ ಪ್ರದೇಶ, ಗ್ರಾಮಗಳ ಬದಲು ಸಂಬಂಧಿಸಿದ ಮನೆ ಮತ್ತು ಬೀದಿ ಮಾತ್ರ ನಿರ್ಬಂಧಿತ ಪ್ರದೇಶ ಹಾಗೂ ಅಪಾರ್ಟ್​​ಮೆಂಟ್​​ಗಳಾದರೇ ಮೂರು ಮಹಡಿಗಷ್ಟೆ ಸೀಮಿತ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.

ಅಭಿರಾಮ್
ಅಭಿರಾಮ್
author img

By

Published : May 27, 2020, 6:53 PM IST

ಮೈಸೂರು: ಹಾಟ್​ಸ್ಪಾಟ್ ರಾಜ್ಯಗಳಿಂದ ಬರುವವರಿಗೆ ಸರ್ಕಾರ ನಿರ್ಬಂಧ ವಿಧಿಸಿದೆ. ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಕೇರಳ, ದೆಹಲಿ, ರಾಜಸ್ಥಾನ ರಾಜ್ಯಗಳ ಮೇಲೆ ನಿಗಾವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಕೆಲ ಸಡಿಲಿಕೆ ಮಾಡಲಾಗಿದೆ. ಸಂಪೂರ್ಣ ಪ್ರದೇಶ, ಗ್ರಾಮಗಳ ಬದಲು ಸಂಬಂಧಿಸಿದ ಮನೆ ಮತ್ತು ಬೀದಿ ಮಾತ್ರ ನಿರ್ಬಂಧಿತ ಪ್ರದೇಶ ಆಗಲಿದೆ. ಅಪಾರ್ಟ್​​ಮೆಂಟ್​​ಗಳು ಇದ್ದರೇ ಮೂರು ಮಹಡಿಗಷ್ಟೆ ಸೀಮಿತವಾಗಿ ಇರಲಿದೆ ಎಂದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಅಭಿರಾಮ್

ವಲಸೆ ಕಾರ್ಮಿಕರನ್ನು ಉತ್ತರಪ್ರದೇಶ, ಬಿಹಾರ್, ಜಾರ್ಖಂಡ್​ಗಳಿಗೆ ನಾಲ್ಕು ರೈಲುಗಳ ಮೂಲಕ ಕಳುಹಿಸಲಾಗಿದೆ. ಕೊನೆಯ ಎರಡು ರೈಲುಗಳಿಗೆ ಸರ್ಕಾರವೇ ಪ್ರಯಾಣದ ವೆಚ್ಚ ಭರಿಸಿದೆ. ನಾಗಲ್ಯಾಂಡ್, ಮಣಿಪುರ,ಮಧ್ಯಪ್ರದೇಶ ಇತರೆ ರಾಜ್ಯಗಳಿಗೆ ಹೋಗುವ ಕಾರ್ಮಿಕರಿಗೆ ಬೆಂಗಳೂರಿನವರೆಗೆ ಬಸ್ ಮೂಲಕ ಕಳುಹಿಸಲಾಗಿದೆ. ಅಲ್ಲಿಂದ ಅವರು ರೈಲು ಮೂಲಕ ತೆರಳಿದ್ದಾರೆ ಎಂದರು.

ಹಾಟ್​ಸ್ಪಾಟ್ ರಾಜ್ಯಗಳಿಂದ ಬರುವವರಿಗೆ ಸರ್ಕಾರ ನಿರ್ಬಂಧ ಹಾಕಿದೆ. ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಕೇರಳ, ದೆಹಲಿ, ರಾಜಸ್ಥಾನ ರಾಜ್ಯಗಳ ಮೇಲೆ ನಿಗಾ ವಹಿಸಲಾಗಿದೆ. ಅನ್ಯ ರಾಜ್ಯಗಳಿಂದ ಬರುವವರಿಗೆ 7 ದಿನಗಳ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ ಎಂದರು.

ಕೇರಳದಿಂದ ಹೆಚ್.ಡಿ ಕೋಟೆಯ ಕಾಡಂಚಿನ ಗ್ರಾಮಗಳಿಗೆ ಬರುತ್ತಿರುವ ಬಗ್ಗೆ ದೂರು ಬಂದಿದೆ. ಮದ್ಯ ಖರೀದಿಗಾಗಿ ಬರುತ್ತಿರುವ ಬಗ್ಗೆ ನಿಗಾ ವಹಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.