ಮೈಸೂರು: ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ(ಪ್ರೈ) ಲಿಮಿಟೆಡ್ ವತಿಯಿಂದ ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ಒಂದು ಭಾರತೀಯ ಸಿಂಹ, ಒಂದು ಹುಲಿ, ಎರಡು ಜಿರಾಫೆ ಹಾಗೂ ಎರಡು ಝೀಬ್ರಾಗಳ ದತ್ತು ಸ್ವೀಕಾರದ ಅವಧಿಯನ್ನು ನವೀಕರಿಸಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ(ಪ್ರೈ) ಲಿಮಿಟೆಡ್ ಅವರು ಸಿಎಸ್‌ಆರ್ ಸ್ಕೀಮ್ ಅಡಿಯಲ್ಲಿ 2019ರ ಜುಲೈ 9 ರಿಂದ 2020ರ ಜುಲೈ 8ರವರೆ ಒಂದು ವರ್ಷದ ಅವಧಿಗೆ 5 ಲಕ್ಷ ರೂ. ಲಕ್ಷಗಳನ್ನು ಪಾವತಿಸಿ ಪ್ರಾಣಿಗಳನ್ನು ದತ್ತು ಸ್ವೀಕರಿಸಿದ್ದಾರೆ. ಕಳೆದ 4 ವರ್ಷಗಳಿಂದ ಬೃಹತ್ ಗಾತ್ರದ ಪ್ರಾಣಿಗಳ ದತ್ತು ಸ್ವೀಕಾರದ ಅವಧಿಯ ನವೀಕರಣ ಮಾಡಿರುವುದರ ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ(ಪ್ರೈ) ಲಿಮಿಟೆಡ್ ವನ್ಯ ಪ್ರಾಣಿಗಳ ಸಂರಕ್ಷಣೆಯಂತಹ ವಿಷಯದಲ್ಲಿ ತೋರಿಸಿರುವ ಆಸಕ್ತಿಗೆ ಪ್ರಾಣಿಪ್ರಿಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ(ಪ್ರೈ) ಲಿಮಿಟೆಡ್‌ನ ಜನರಲ್ ಮ್ಯಾನೇಜರ್ ರಮೇಶ್ ಕುಮಾರ್ ಲಭ್, ಡೆಪ್ಯೂಟಿ ಜನರಲ್ ಮ್ಯಾನೇಜರ್ ಪಿ ಕೆ ಬಿಸ್ವಾಲ್, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಎ ಕೆ ಕರ್ಣ್, ಮ್ಯಾನೇಜರ್ ಎನ್ ಜಿ ಮುರುಳಿ ಅಗಸ್ಟ್ 6ರಂದು ಮೃಗಾಲಯಕ್ಕೆ ಭೇಟಿ ನೀಡಿ ಪ್ರಾಣಿ ದತ್ತು ಸ್ವೀಕಾರ ದೃಢೀಕರಣ ಪತ್ರ ಪಡೆದಿದ್ದಾರೆ ಎಂದು ಮೃಗಾಲಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಜಿತ್ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.