ಮೈಸೂರು: ಮೈಸೂರಿನಲ್ಲಿ ಶಾಸಕ ಎನ್.ಮಹೇಶ್ ಪುತ್ರನ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡು ನಂತರ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್, ಇನ್ನೂ ರಮೇಶ್ ಜಾರಕಿಹೊಳಿ ಸ್ಟೇಟ್‌ಮೆಂಟ್ ಕೊಟ್ಟಿಲ್ಲ. ಆ ಹೆಣ್ಣು ಮಗಳು ಏನೂ ಹೇಳಿಲ್ಲ. ಎಲ್ಲಾ ಸತ್ಯಾಸತ್ಯತೆ ಹೊರ ಬರಲಿ. ಆ ನಂತರ ನಾನು ಪ್ರತಿಕ್ರಿಯೆ ನೀಡುವೆ. ನೈತಿಕ ಹೊಣೆ ಹೊರಬೇಕು ನಿಜ, ಆದರೆ ಅವರು ಮಾತನಾಡದೆ ನಾನು ಪ್ರತಿಕ್ರಿಯೆ ಕೊಡೋದಿಲ್ಲ. ನನ್ನ ನಿಲುವು ಅಷ್ಟೇ, ನೋಡೋಣ ಎಲ್ಲ ಸರಿಯಾಗಿ ಹೊರ ಬರಲಿ ಎಂದರು.
ಇದನ್ನೂ ಓದಿ:ನಮ್ಮದು ಶಿಸ್ತಿನ ಪಕ್ಷ ಇವೆಲ್ಲಾ ಸಹಿಸಲ್ಲ: ರಮೇಶ್ ಜಾರಕಿಹೊಳಿ ಪ್ರಕರಣಕ್ಕೆ ಜೋಶಿ ಪ್ರತಿಕ್ರಿಯೆ
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ನಾನು ಒಂದು ಮದುವೆ ಗಲಾಟೇಲಿ ಇದ್ದೀನಿ. ಈ ಬಗ್ಗೆ ಗಮನಕ್ಕೆ ಬಂದಿಲ್ಲ. ಮಾಹಿತಿ ಪಡೆದುಕೊಂಡು ಮಾತನಾಡುತ್ತೇನೆ ಎಂದಿದ್ದಾರೆ.