Health Benefits Of Betel Leaves In Kannada: ಹೂವುಗಳು ಮತ್ತು ಹಣ್ಣುಗಳ ಜೊತೆಗೆ, ವೀಳ್ಯದೆಲೆಗಳನ್ನು ಹೆಚ್ಚಾಗಿ ಪೂಜೆ, ಶುಭ ಕಾರ್ಯಗಳು ಮತ್ತು ಮುತ್ತೈದೆಯರಿಗೆ ಉಡಿ ತುಂಬಲು ಬಳಸಲಾಗುತ್ತದೆ. ಮನೆಯಲ್ಲಿ ಯಾವುದೇ ಹಬ್ಬ ಅಥವಾ ಶುಭ ಸಂದರ್ಭವಿದ್ದರೂ ವೀಳ್ಯದೆಲೆಗಳು ಪಟ್ಟಿಯಲ್ಲಿರಬೇಕು. ವೀಳ್ಯದೆಲೆಯನ್ನು ಮಂಗಳಕರ ಕಾರ್ಯಗಳಿಗೆ ಬಳಸುವುದರಿಂದ ಕೆಲವು ರೀತಿಯ ಆರೋಗ್ಯ ಸಮಸ್ಯೆಗಳೂ ದೂರವಾಗುತ್ತವೆ ಎನ್ನುತ್ತಾರೆ ತಜ್ಞರು. ವೀಳ್ಯದೆಲೆ ಔಷಧೀಯ ಗುಣಗಳನ್ನು ಹೊಂದಿದೆ. ಅವುಗಳ ಬಗ್ಗೆ ಈಗ ಅರಿತುಕೊಳ್ಳೋಣ..
- ಕೆಲವರಿಗೆ ನಿತ್ಯ ವೀಳ್ಯದೆಲೆ ತಿನ್ನುವ ಅಭ್ಯಾಸವಿರುತ್ತದೆ. ದಿನವೂ ವೀಳ್ಯದೆಲೆಯನ್ನು ತಿನ್ನುವುದರಿಂದ ದೇಹದಲ್ಲಿನ ಕೆಲವು ಆರೋಗ್ಯದ ಸಮಸ್ಯೆಗಳು ತಕ್ಷಣವೇ ದೂರವಾಗುತ್ತವೆ.
![BETEL LEAVES BENEFITS IN Kannada BETEL LEAVES USES HEALTH BENEFITS OF BETEL LEAVES BETEL LEAVES BENEFITS](https://etvbharatimages.akamaized.net/etvbharat/prod-images/25-09-2024/22533926_thu2.jpeg)
![BETEL LEAVES BENEFITS IN Kannada BETEL LEAVES USES HEALTH BENEFITS OF BETEL LEAVES BETEL LEAVES BENEFITS](https://etvbharatimages.akamaized.net/etvbharat/prod-images/25-09-2024/22533926_thu1.jpeg)
- ಒಂದು ದೊಡ್ಡ ಲೋಟ ನೀರಿನಲ್ಲಿ ಕೆಲವು ವೀಳ್ಯದೆಲೆಗಳನ್ನು ಹಾಕಿ. ಮತ್ತು ಆ ನೀರನ್ನು ಸಂಪೂರ್ಣವಾಗಿ ಕುದಿಸಿ. ನಿತ್ಯವೂ ಈ ನೀರನ್ನು ಕುಡಿಯುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ ಎನ್ನುತ್ತಾರೆ ತಜ್ಞರು.
- ವೀಳ್ಯದೆಲೆ ದುರ್ವಾಸನೆ ಹೋಗಲಾಡಿಸುತ್ತದೆ. ಅಲ್ಲದೇ, ವೀಳ್ಯದೆಲೆಯು ಒಸಡುಗಳಿಂದ ಉಂಟಾಗುವ ರಕ್ತಸ್ರಾವ ನಿಲ್ಲಿಸುವ ಮತ್ತು ಹಲ್ಲುಗಳನ್ನು ಬಲಪಡಿಸುವ ಗುಣವನ್ನು ಹೊಂದಿದೆ.
![BETEL LEAVES BENEFITS IN Kannada BETEL LEAVES USES HEALTH BENEFITS OF BETEL LEAVES BETEL LEAVES BENEFITS](https://etvbharatimages.akamaized.net/etvbharat/prod-images/25-09-2024/22533926_thu4.jpeg)
- ವೀಳ್ಯದೆಲೆ ಚರ್ಮದ ಮೇಲಿನ ಅಲರ್ಜಿ, ತುರಿಕೆ ಇತ್ಯಾದಿ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇವುಗಳಲ್ಲಿರುವ ಆ್ಯಂಟಿಸೆಪ್ಟಿಕ್ ಗುಣಗಳು ಚರ್ಮದ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
- ಹಾಲುಣಿಸುವ ತಾಯಂದಿರ ಎದೆಯಲ್ಲಿ ಹಾಲು ಹೆಪ್ಪುಗಟ್ಟುತ್ತದೆ. ಇದು ಅಸಹನೀಯ ನೋವನ್ನು ಉಂಟುಮಾಡುತ್ತದೆ. ಆ ಸಮಯದಲ್ಲಿ ವೀಳ್ಯದೆಲೆಯನ್ನು ಸ್ವಲ್ಪ ಬಿಸಿ ಮಾಡಿ ಎದೆಗೆ ಹಾಕಿದರೆ ಪರಿಹಾರ ಸಿಗುತ್ತದೆ.
![BETEL LEAVES BENEFITS IN Kannada BETEL LEAVES USES HEALTH BENEFITS OF BETEL LEAVES BETEL LEAVES BENEFITS](https://etvbharatimages.akamaized.net/etvbharat/prod-images/25-09-2024/22533926_thu3.jpeg)
- ಗಾಯಗಳನ್ನು ಗುಣಪಡಿಸಲು ವೀಳ್ಯದೆಲೆಗಳನ್ನು ಸಹ ಬಳಸಲಾಗುತ್ತದೆ. ಕೆಲವು ವೀಳ್ಯದೆಲೆಯಿಂದ ತೆಗೆದ ರಸವನ್ನು ಗಾಯಕ್ಕೆ ಹಚ್ಚಿ, ಅದರ ಮೇಲೆ ಇನ್ನೊಂದು ವೀಳ್ಯದೆಲೆಯನ್ನು ಇಟ್ಟು ಬ್ಯಾಂಡೇಜ್ ಹಾಕುತ್ತಾರೆ. ಹೀಗೆ ಮಾಡುವುದರಿಂದ ಎರಡು ಮೂರು ದಿನಗಳಲ್ಲಿ ಗಾಯ ಮಾಯುತ್ತದೆ.
- ವೀಳ್ಯದೆಲೆಯನ್ನು ಜಗಿದು ರಸವನ್ನು ನುಂಗುವುದರಿಂದ ಜೀರ್ಣಕ್ರಿಯೆಯ ತೊಂದರೆ ಕಡಿಮೆಯಾಗುತ್ತದೆ. ಆದ್ದರಿಂದ ಊಟವಾದ ನಂತರ ತಾಂಬೂಲ ಸೇವಿಸುವುದು ಉತ್ತಮ.
![BETEL LEAVES BENEFITS IN Kannada BETEL LEAVES USES HEALTH BENEFITS OF BETEL LEAVES BETEL LEAVES BENEFITS](https://etvbharatimages.akamaized.net/etvbharat/prod-images/26-09-2024/22533926_thu5.jpg)
![BETEL LEAVES BENEFITS IN Kannada BETEL LEAVES USES HEALTH BENEFITS OF BETEL LEAVES BETEL LEAVES BENEFITS](https://etvbharatimages.akamaized.net/etvbharat/prod-images/25-09-2024/22533926_thu6.jpg)
- ಹೃದಯವನ್ನು ಆರೋಗ್ಯವಾಗಿಡಲು ವೀಳ್ಯದೆಲೆಯು ತುಂಬಾ ಪ್ರಯೋಜನಕಾರಿಯಾಗಿದೆ. ಎದೆನೋವು, ಎದೆಯುರಿ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವವರು ವೀಳ್ಯದೆಲೆಯ ರಸವನ್ನು ಕುಡಿದರೆ ಪರಿಹಾರ ಸಿಗುತ್ತದೆ.
- ಬೆನ್ನು ನೋವಿನಿಂದ ಬಳಲುತ್ತಿರುವವರು ವೀಳ್ಯದೆಲೆಗೆ ಸ್ವಲ್ಪ ಎಣ್ಣೆಯನ್ನು ಹಚ್ಚಿ ನೋವು ಇರುವ ಜಾಗಕ್ಕೆ ಮಸಾಜ್ ಮಾಡುವುದರಿಂದ ನೋವಿನಿಂದ ಪರಿಹಾರ ಪಡೆಯಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ಗೆ ಭೇಟಿ ನೀಡಿ:
- https://www.ncbi.nlm.nih.gov/pmc/articles/PMC4324734/#:~:text=In%20the%20present%20study%2C%20arecoline,as%20revealed%20by%20the%20IPGTT.
- https://www.ncbi.nlm.nih.gov/pmc/articles/PMC3892533/
ಮುಖ್ಯ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.