ETV Bharat / technology

ಟಾಟಾ ನೆಕ್ಸಾನ್ ಐಸಿಎನ್‌ಜಿ ಕಾರು ಮಾರುಕಟ್ಟೆ ಪ್ರವೇಶ: ಮೈಲೇಜ್‌, ಬೆಲೆ, ವೈಶಿಷ್ಟ್ಯಗಳ ಕಂಪ್ಲೀಟ್‌ ಮಾಹಿತಿ - Tata Nexon iCNG Launched

author img

By ETV Bharat Karnataka Team

Published : 3 hours ago

Tata Nexon iCNG Launched: ವಾಹನಪ್ರಿಯರಿಗೆ ಸಿಹಿಸುದ್ದಿ!. ಹಬ್ಬದ ಸಂದರ್ಭದಲ್ಲಿ ಮತ್ತೊಂದು ಹೊಸ ಕಾರು ಮಾರುಕಟ್ಟೆಗೆ ಬಂದಿದೆ. ನೆಕ್ಸಾನ್ ಐಸಿಎನ್‌ಜಿ ಕಾರು ಹೊಸ ವೈಶಿಷ್ಟ್ಯಗಳೊಂದಿಗೆ ಟಾಟಾ ಬಿಡುಗಡೆಗೊಳಿಸಿದೆ.

TATA NEXON ICNG  TATA NEXON ICNG LAUNCHED  TATA NEXON CNG PRICE  TATA NEXON CNG MILEAGE
ಟಾಟಾ ನೆಕ್ಸಾನ್ ಐಸಿಎನ್‌ಜಿ ಕಾರು (tatamotorscars)

Tata Nexon iCNG Car Launched: ಪ್ರಸಿದ್ಧ ಅಟೊಮೊಬೈಲ್ ತಯಾರಕ ಟಾಟಾ ಮೋಟರ್ಸ್ ತನ್ನ ನೆಕ್ಸಾನ್ ಶ್ರೇಣಿಯಲ್ಲಿ ಹೊಸ ಸಬ್‌ಕಾಂಪ್ಯಾಕ್ಟ್ SUVಯನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನೆಕ್ಸಾನ್ ಈಗಾಗಲೇ ಪೆಟ್ರೋಲ್, ಡೀಸೆಲ್ ಮತ್ತು EV ರೂಪಾಂತರಗಳನ್ನು ಹೊಂದಿದೆ. ಇತ್ತೀಚೆಗೆ CNG ರೂಪಾಂತರವನ್ನೂ ಪರಿಚಯಿಸಿದೆ. ಈ ಕಾರು ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿರುವ ಭಾರತದ ಮೊದಲ CNG ವಾಹನ. ನೆಕ್ಸಾನ್ 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ ICNG ಅನ್ನು ರಿಲೀಸ್ ಮಾಡಿದೆ.

ಸುಧಾರಿತ ವೈಶಿಷ್ಟ್ಯಗಳೊಂದಿಗೆ ಡ್ಯುಯಲ್ ಸಿಲಿಂಡರ್ ಸೌಲಭ್ಯ ಇದರಲ್ಲಿದೆ. ಎರಡು ಸ್ಲಿಮ್ ಸಿಲಿಂಡರ್‌ಗಳ ಜೊತೆಗೆ ಕಾರ್ಗೋ ಪ್ರದೇಶ ವಿಶಾಲವಾಗಿದೆ ಎಂದು ಟಾಟಾ ಮೋಟಾರ್ಸ್ ಹೇಳಿದೆ. CNG ಮೋಡ್‌ನಲ್ಲಿ ಇದರ ಮೈಲೇಜ್​ 24 kmpl ಎಂದು ಹೇಳಲಾಗಿದೆ. 8 ರೂಪಾಂತರಗಳಲ್ಲಿ ತರಲಾಗಿದೆ. 6 ಏರ್‌ಬ್ಯಾಗ್‌ಗಳನ್ನು ಅದರ ಎಲ್ಲ ರೂಪಾಂತರಗಳಲ್ಲಿ ಸುರಕ್ಷತಾ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಹ್ಯಾರಿಯರ್ ಮತ್ತು ಸಫಾರಿ ಜೊತೆಗೆ, ಹೆಚ್ಚು ಜನಪ್ರಿಯವಾಗಿದ್ದ ರೆಡ್ ಡಾರ್ಕ್ ಆವೃತ್ತಿಯೂ ಹೊರ ಬಿದ್ದಿದೆ.

ಟಾಟಾ ನೆಕ್ಸಾನ್ ICNG ವಿಶೇಷತೆಗಳು:

  • 10.25 ಇಂಚಿನ ಡಿಜಿಟಲ್ ಡ್ರೈವರ್ ಡಿಸ್​ಪ್ಲೇ
  • ಎಂಜಿನ್: 1.2 ಲೀಟರ್ ಟರ್ಬೊ ಪೆಟ್ರೋಲ್
  • ಟಾರ್ಕ್: 98 bhp, 170 Nm
  • 6 ಏರ್ ಬ್ಯಾಗ್‌ಗಳು
  • ಸನ್‌ರೂಫ್
  • 360 ಡಿಗ್ರಿ ಕ್ಯಾಮೆರಾ
  • ಲೆದರ್​ ಸೀಟ್ಸ್​
  • ನ್ಯಾವಿಗೇಷನ್ ಡಿಸ್​ಪ್ಲೇ

ಟಾಟಾ ನೆಕ್ಸಾನ್ ಐಸಿಎನ್‌ಜಿ ರೂಪಾಂತರಗಳು: ಟಾಟಾ ನೆಕ್ಸಾನ್ ಐಸಿಎನ್‌ಜಿ ಎಂಟು ರೂಪಾಂತರಗಳೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.

  • ಸ್ಮಾರ್ಟ್ (O)
  • ಸ್ಮಾರ್ಟ್ +
  • ಸ್ಮಾರ್ಟ್ + ಎಸ್
  • ಪ್ಯೂರ್​
  • ಪ್ಯೂರ್ ಎಸ್
  • ಕ್ರಿಯೆಟಿವ್​
  • ಕ್ರಿಯೆಟಿವ್​ +
  • ಫಿಯರ್ಲೆಸ್ + ಪಿಎಸ್

ಇವುಗಳಲ್ಲಿ, ಟಾಪ್ ವೇರಿಯಂಟ್ ಫಿಯರ್‌ಲೆಸ್ + ಪಿಎನ್ ಬೆಲೆ 14.50 ಲಕ್ಷ ರೂ (ಎಕ್ಸ್ ಶೋ ರೂಂ). ಟಾಟಾ ನೆಕ್ಸಾನ್ ಐಸಿಎನ್‌ಜಿ 8.99 ಲಕ್ಷ ರೂ.ಯಿಂದ ಪ್ರಾರಂಭವಾಗುತ್ತದೆ (ಎಕ್ಸ್ ಶೋ ರೂಂ).

ಇದನ್ನೂ ಓದಿ: ಈ ಬಾಹ್ಯಾಕಾಶ ಶಿಲೆ ಭೂಮಿಗೆ ಎರಡನೇ ಚಂದ್ರ ಆಗಲಿದೆಯೇ? - Planetary Debris Approaches Earth

ETV Bharat Logo

Copyright © 2024 Ushodaya Enterprises Pvt. Ltd., All Rights Reserved.