ದುಬೈ : ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ನೂತನ ಶ್ರೇಯಾಂಕ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದ್ದು, ಭಾರತೀಯ ಕ್ರಿಕೆಟಿಗರು ಭರ್ಜರಿ ಏರಿಳಿತ ಕಂಡಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭರ್ಜರಿ ಶತಕ ಸಿಡಿಸಿದ ರಿಷಬ್ ಪಂತ್ ಟಾಪ್ 10 ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ರನ್ ಗಳಿಸಲು ಪರದಾಡಿದ ಹಿರಿಯ ಆಟಗಾರರಾದ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಭಾರೀ ಇಳಿಕೆ ಕಂಡಿದ್ದಾರೆ.
ಚೆನ್ನೈನಲ್ಲಿ ನಡೆದ ಟೆಸ್ಟ್‌ನಲ್ಲಿ ಅಮೋಘ ಶತಕ ಸಿಡಿಸಿದ ರಿಷಬ್ ಪಂತ್ 731 ಸಂಪಾದಿಸುವ ಮೂಲಕ ಆರನೇ ಸ್ಥಾನ ಪಡೆದರೆ, ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 751 ರೇಟಿಂಗ್ನೊಂದಿಗೆ ಐದನೇ ಸ್ಥಾನಕ್ಕೇರಿದರು.
ಭಾರತದ ನಾಯಕ ರೋಹಿತ್ ಶರ್ಮಾ ಎರಡು ಇನಿಂಗ್ಸ್ನಲ್ಲಿ ರನ್ ಗಳಿಸದ ಕಾರಣ, ಐದು ಸ್ಥಾನ ಕುಸಿದು ಅಗ್ರ ಹತ್ತರಲ್ಲಿದ್ದಾರೆ. ಸದ್ಯ ಅವರು 716 ರೇಟಿಂಗ್ ಹೊಂದಿದ್ದಾರೆ. ಇದಕ್ಕೂ ಮೊದಲು ಅವರು ಟಾಪ್ 5 ರಲ್ಲಿದ್ದರು. ಇನ್ನೊಬ್ಬ ಹಿರಿಯ ಆಟಗಾರ ವಿರಾಟ್ ಕೊಹ್ಲಿ 5 ಸ್ಥಾನ ಕುಸಿದು ಟಾಪ್ 10 ರಿಂದಲೇ ಹೊರಬಿದ್ದಿದ್ದಾರೆ. ಸದ್ಯ ಅವರು 709 ರೇಟಿಂಗ್ನೊಂದಿಗೆ ಶ್ರೇಯಾಂಕ ಪಟ್ಟಿಯಲ್ಲಿ 12 ನೇ ಸ್ಥಾನದಲ್ಲಿದ್ದಾರೆ. ಇದಕ್ಕೂ ಮೊದಲು ಟಾಪ್ 7ನೇ ಕ್ರಮಾಂಕದಲ್ಲಿದ್ದರು.
🔸Afghanistan batter's historic feat
— ICC (@ICC) September 25, 2024
🔸Rishabh Pant's stunning return
🔸Sri Lanka spinner's Test jump
Read on about the Men's Ranking updates ⬇https://t.co/TFqmlnBXTM
ಪಂತ್ ಜೊತೆಗೆ ಶತಕ ಬಾರಿಸಿದ ಶುಭ್ಮನ್ ಗಿಲ್ 5 ಸ್ಥಾನ ಏರಿಕೆ ಕಂಡು 701 ರೇಟಿಂಗ್ನೊಂದಿಗೆ 14 ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಪಟ್ಟಿಯಲ್ಲಿ ಇಂಗ್ಲೆಂಡ್ ಜೋ ರೂಟ್ ಅಗ್ರಸ್ಥಾನದಲ್ಲಿ ಮುಂದುವರಿದರೆ, ನ್ಯೂಜಿಲ್ಯಾಂಡ್ನ ಕೇನ್ ವಿಲಿಯಮ್ಸನ್, ಡೇರಿಯಲ್ ಮಿಚೆಲ್ ನಂತರದಲ್ಲಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಆಲ್ರೌಂಡರ್ ರವೀಂದ್ರ ಜಡೇಜಾ 1 ಸ್ಥಾನ ಮೇಲೇರಿ 6 ನೇ ಕ್ರಮಾಂಕ ಪಡೆದಿದ್ದಾರೆ. ಇನ್ನೂ ತಂಡದ ಹಿರಿಯ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ನಂ.1 ಸ್ಥಾನದಲ್ಲಿ ಮುಂದುವರೆದರೆ, ಜಸ್ಪ್ರೀತ್ ಬೂಮ್ರಾ 2ನೇ ಸ್ಥಾನದಲ್ಲಿದ್ದಾರೆ.
ಆಲ್ರೌಂಡರ್ ವಿಭಾಗದಲ್ಲಿ ಭಾರತೀಯರ ಪ್ರಾಬಲ್ಯ ಮುಂದುವರಿದಿದ್ದು, ರವೀಂದ್ರ ಜಡೇಜಾ ಅಗ್ರಸ್ಥಾನದಲ್ಲಿದ್ದರೆ, ರವಿಚಂದ್ರನ್ ಅಶ್ವಿನ್ 2ನೇ ಸ್ಥಾನದಲ್ಲಿದ್ದಾರೆ. ಅಕ್ಷರ್ ಪಟೇಲ್ 6 ನೇ ಕ್ರಮಾಂಕದಲ್ಲಿ ಮುಂದುವರಿದಿದ್ದಾರೆ.