ETV Bharat / state

ವಿಶ್ವ ಶ್ವಾಸಕೋಶ ದಿನಾಚರಣೆ: ಧೂಮಪಾನಿಗಳಲ್ಲದವರಲ್ಲಿ ಕ್ಯಾನ್ಸರ್​ಗೆ ಮುಖ್ಯ ಕಾರಣ ಇದು - World Lung Day

author img

By ETV Bharat Karnataka Team

Published : 3 hours ago

ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಮತ್ತು ಯುವ ಪೀಳಿಗೆಗಳಲ್ಲಿ ಶ್ವಾಸಕೋಶದ ಸಮಸ್ಯೆಗಳು ಹೆಚ್ಚುತ್ತಿದ್ದು, ಹೆಚ್ಚು ಜನ ಶ್ವಾಸಕೋಶ ಸಂಬಂಧಿತ ತೊಂದರೆಗಳಿಂದ ಬಳಲುತ್ತಿದ್ದಾರೆ ಎನ್ನುತ್ತಾರೆ ವೈದ್ಯರು.

World Lung Cancer Day 2024: Air pollution is the main cause of cancer in non-smokers
ಸಾಂದರ್ಭಿಕ ಚಿತ್ರ (ETV Bharat)

ಬೆಂಗಳೂರು: ವಿಶ್ವದಾದ್ಯಂತ ಒಟ್ಟು ಕ್ಯಾನ್ಸರ್ ಸಾವಿನ ಪ್ರಮಾಣದಲ್ಲಿ ಶೇ.21 ರಷ್ಟು ತಂಬಾಕು ಸೇವನೆಯಿಂದ ಸಂಭವಿಸುತ್ತಿವೆ. ಇದರಲ್ಲಿ ಶ್ವಾಸಕೋಶ ಕ್ಯಾನ್ಸರ್ ಸಹ ಸೇರಿದೆ. ಧೂಮಪಾನ ಮಾಡದಿರುವವರಲ್ಲಿಯೂ ಈ ಶ್ವಾಸಕೋಶದ ಕ್ಯಾನ್ಸರ್​ನ ಅಪಾಯಗಳು ಹೆಚ್ಚಿವೆ ಮತ್ತು ಇದಕ್ಕೆ ಸಾಕಷ್ಟು ಕಾರಣಗಳಿವೆ. ವಾಯುಮಾಲಿನ್ಯವು ಈ ವರ್ಗದವರಲ್ಲಿ ಶ್ವಾಸಕೋಶ ಕ್ಯಾನ್ಸರ್ ಉಂಟುಮಾಡುವಲ್ಲಿ ಪ್ರಮುಖ ಕಾರಣವಾಗಿದೆ. ಮನುಷ್ಯ ಹಾಗೂ ಪ್ರಾಣಿಗಳಲ್ಲಿ ಅಗತ್ಯ ಉಸಿರಾಟದ ಅಂಗ ಎಂದರೆ ಅದು ಶ್ವಾಸಕೋಶ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಮತ್ತು ಯುವ ಪೀಳಿಗೆಗಳಲ್ಲಿ ಶ್ವಾಸಕೋಶದ ಸಮಸ್ಯೆಗಳು ಹೆಚ್ಚುತ್ತಿದ್ದು, ಹೆಚ್ಚು ಜನ ಶ್ವಾಸಕೋಶ ಸಂಬಂಧಿತ ತೊಂದರೆಗಳಿಂದ ಬಳಲುತ್ತಿದ್ದಾರೆ ಎನ್ನುತ್ತಾರೆ ವೈದ್ಯರು.

ನಮ್ಮ ಶ್ವಾಸಕೋಶಗಳ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಲು ಆಮ್ಲಜನಕ ನಮಗೆ ಉತ್ತಮ ರೀತಿಯಲ್ಲಿ ಸರಬರಾಜು ಆದಲ್ಲಿ ನಮ್ಮ ಇಡೀ ದೇಹ ಲವಲವಿಕೆಯಿಂದ ಇರುತ್ತದೆ. ಜತೆಗೆ ದೇಹದಲ್ಲಿರುವ ಇಂಗಾಲದ ಡೈ ಆಕ್ಸೈಡ್‌ನ್ನು ನಾವು ಹೊರ ಹಾಕಬೇಕುತ್ತದೆ. ಈ ಕೆಲಸವನ್ನು ಶ್ವಾಸಕೋಶಗಳು ಮಾಡುತ್ತವೆ. ಹೃದಯದ ರೀತಿ ಶ್ವಾಸಕೋಶಗಳು ವಿಶ್ರಾಂತಿ ಪಡೆಯುವುದಿಲ್ಲ. ಡೀಸೆಲ್ ಮತ್ತು ಗ್ಯಾಸೊಲಿನ್ ಲೋಹಗಳು ಸಿಲಿಕಾದಂತಹ ಉಸಿರಾಟದ ಮೂಲಕ ದೇಹವನ್ನು ಸೇರಿಕೊಳ್ಳುವ ಧೂಳು ಮತ್ತು ಗಣಿಗಾರಿಕೆ, ಫೌಂಡರಿಗಳು, ಟ್ರಕ್ ಸಾಗಣೆ, ಕಾರ್ಬನ್ ಬ್ಲ್ಯಾಕ್ ಮತ್ತು ಡಾಂಬರ್ ಉತ್ಪಾದನೆ ಮಾಡುವಂತಹ ಸ್ಥಳಗಳಲ್ಲಿ ದೀರ್ಘಕಾಲದವರೆಗೆ ಕೆಲಸ ಮಾಡುವುದರಿಂದ ಶ್ವಾಸಕೋಶ ಕ್ಯಾನ್ಸರ್ ಬರುವ ಸಾಧ್ಯತೆಗಳಿವೆ ಎನ್ನುತ್ತಾರೆ ಸಂಶೋಧಕರು.

ವಿಶ್ವ ಶ್ವಾಸಕೋಶ ದಿನಾಚರಣೆ ಅಂಗವಾಗಿ ಮಾರಕ ಶ್ವಾಸಕೋಶ ಕ್ಯಾನ್ಸರ್ ಮತ್ತು ಪರಿಹಾರಗಳ ಕುರಿತು ಮಾತನಾಡಿರುವ ಬೆಂಗಳೂರಿನ ಸಂಪ್ರದ ಹಾಸ್ಪಿಟಲ್​ನ ಕನ್ಸಲ್ಟೆಂಟ್ ಮೆಡಿಕಲ್ ಆಂಕಾಲಾಜಿಸ್ಟ್, ಹೆಮಟೋಲಾಜಿಸ್ಟ್, ಬೋನ್ ಮ್ಯಾರೋ ಟ್ರಾನ್ಸ್​ಪ್ಲಾಂಟ್ ಫಿಸಿಶಿಯನ್ ಡಾ.ರಾಧೇಶ್ಯಾಂ ನಾಯಕ್, ಶ್ವಾಸಕೋಶದ ಕ್ಯಾನ್ಸರ್ ಪ್ರಮಾಣ ಧೂಮಪಾನಿಗಳಿಂತ ಧೂಮಪಾನ ಮಾಡದವರಲ್ಲಿ ಕಡಿಮೆ ಇರುತ್ತದೆ. ಆದರೆ, ತಂಬಾಕೇತರ ಅಪಾಯದ ಅಂಶಗಳ ಬಗ್ಗೆ ಧೂಮಪಾನಿಗಳಲ್ಲದವರು ಜಾಗೃತರಾಗಿರಬೇಕು ಮತ್ತು ಇಂತಹ ಅಂಶಗಳಿಗೆ ಹೆಚ್ಚು ಎಕ್ಸ್​ಪೋಸ್ ಆಗುವುದನ್ನು ನಿಯಂತ್ರಿಸಬೇಕಿದೆ.

ದೀರ್ಘಕಾಲದವರೆಗೆ ಅಥವಾ ನಿರಂತರವಾಗಿ ವಾಯುಮಾಲಿನ್ಯ ಇರುವೆಡೆ ಎಕ್ಸ್​ಪೋಸ್ ಆದರೆ ಶ್ವಾಸಕೋಶ ಕ್ಯಾನ್ಸರ್​ನ ಅಪಾಯದ ಮಟ್ಟ ಹೆಚ್ಚುತ್ತದೆ. ವಾಹನಗಳಿಂದ ಹೊರ ಸೂಸುವ ಹೊಗೆ, ಬೆಂಜೇನ್, ಪಾಲಿಯಾರೊಮ್ಯಾಟಿಕ್, ಹೈಡ್ರೋಕಾರ್ಬನ್​ಗಳು ಹಾಗೂ ಡೈಆಕ್ಸಿನ್ ನಂತಹ ಅನೇಕ ಹ್ಯೂಮನ್ ಕಾರ್ಸಿನೋಜೆನ್​ಗಳನ್ನು ಹೊಂದಿರುತ್ತದೆ. ಇದು ಶ್ವಾಸಕೋಶದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಧೂಮಪಾನ ತ್ಯಜಿಸಿದವರಲ್ಲಿಯೂ ಶ್ವಾಸಕೋಶದ ಕ್ಯಾನ್ಸರ್ ಬೆಳವಣಿಗೆಯಾಗುವ ಅಪಾಯವಿದೆ. ಮದ್ಯಪಾನವು ಸಹ ವಿಶ್ವದಾದ್ಯಂತ ಒಟ್ಟು ಕ್ಯಾನ್ಸರ್​ಗಳಲ್ಲಿ ಶೇ.4 ರಷ್ಟು ಕಾರಣವಾಗಿದೆ. ಇದರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಸಹ ಸೇರಿದೆ ಎಂದು ವಿವರಿಸಿದ್ದಾರೆ.

World Lung Cancer Day 2024: Air pollution is the main cause of cancer in non-smokers
ಡಾ.ರಾಧೇಶ್ಯಾಂ ನಾಯಕ್ (ETV Bharat)

ಇದನ್ನೂ ಓದಿ: ವಿಶ್ವ ಫಾರ್ಮಸಿಸ್ಟ್‌ ದಿನ: ಆರೋಗ್ಯ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿರುವ ಫಾರ್ಮಸಿಸ್ಟ್‌ಗಳು - World Pharmacists Day 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.