ETV Bharat / state

ಮೈಸೂರು: ಮುಖ್ಯ ರಸ್ತೆಗಳಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಪಿಎಸ್​ಐ ಪುತ್ರನ ವಶಕ್ಕೆ ಪಡೆದ ಪೊಲೀಸರು - ಸಂಚಾರಿ ನಿಯಮ

ಸಂಚಾರಿ ನಿಯಮ ಉಲ್ಲಂಘಿಸಿ ರಸ್ತೆಗಳಲ್ಲಿ ಮನ ಬಂದಂತೆ ವ್ಹೀಲಿಂಗ್​ ಮಾಡುತ್ತಿದ್ದ ಪಿಎಸ್​ಐ ಪುತ್ರನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಿಎಸ್​ಐ ಪುತ್ರನ ವ್ಹೀಲಿಂಗ್​
ಪಿಎಸ್​ಐ ಪುತ್ರನ ವ್ಹೀಲಿಂಗ್​
author img

By ETV Bharat Karnataka Team

Published : Aug 26, 2023, 6:05 PM IST

Updated : Aug 26, 2023, 6:31 PM IST

ಮೈಸೂರು: ನಗರದ ರಿಂಗ್ ರಸ್ತೆ ಮತ್ತು ರಾಜೀವ್ ಗಾಂಧಿ ನಗರದ ರಸ್ತೆಗಳಲ್ಲಿ ಪಿಎಸ್ಐ ಪುತ್ರನೊಬ್ಬ ವ್ಹೀಲಿಂಗ್ ಮಾಡಿದ್ದು, ಈ ಸಂಬಂಧ ನಗರದ ಸಿದ್ದಾರ್ಥನಗರ ಸಂಚಾರ ಠಾಣೆಯ ಪೊಲೀಸರು ಆತನನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಗರದ ಉದಯಗಿರಿ ನಿವಾಸಿಯಾದ ಪಿಎಸ್ಐಯೊಬ್ಬರ ಪುತ್ರನಾಗಿದ್ದಾನೆ. ಈತ ನಗರದ ರಿಂಗ್ ರಸ್ತೆ ಮತ್ತು ರಾಜೀವ್ ನಗರದ ಪ್ರಮುಖ ರಸ್ತೆಗಳಲ್ಲಿ ತನ್ನ ಬೈಕ್​ನಲ್ಲಿ ವ್ಹೀಲಿಂಗ್ ಮಾಡಿದ್ದಾನೆ. ಇದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳ್ಳಿ ಹಂಚಿಕೊಂಡಿದ್ದು ವಿಡಿಯೋ ಆಧರಿಸಿ ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ದಿನಾಂಕ 19.08.2023 ರಂದು ಮಧ್ಯಾಹ್ನ 2.30 ರಿಂದ 03.00 ಗಂಟೆ ಸಮಯದಲ್ಲಿ, ಸೈಯದ್ ಐಮಾನ್ ಹೆಲ್ಮೆಟ್ ಅನ್ನು ಧರಿಸದೇ, ರಿಂಗ್ ರಸ್ತೆಯಲ್ಲಿ ಆರ್.ಟಿ.ಒ ಕಡೆಯಿಂದ ರಾಜೀವ್ ನಗರ ವಾಟರ್ ಟ್ಯಾಂಕ್ ವರೆಗೂ ಸಂಚಾರಿ ನಿಯಮ ಉಲ್ಲಂಘಿಸಿ ನಿರ್ಲಕ್ಷ್ಯತೆಯಿಂದ ಮಾನವ ಜೀವಕ್ಕೆ ಮತ್ತು ಇತರ ವಾಹನ ಸಂಚಾರಕ್ಕೆ ತೊಂದರೆಯುಂಟಾಗುವ ರೀತಿಯಲ್ಲಿ ವ್ಹೀಲಿಂಗ್ ಮಾಡುತ್ತಾ ಅಪಾಯಕಾರಿಯಾಗಿ ಸ್ಕೂಟರ್ ಅನ್ನು ಚಾಲನೆ ಮಾಡಿ, ನಂತರ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಸಹ ಮಾಡಿದ್ದ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಸಿದ್ಧಾರ್ಥ ನಗರ ಸಂಚಾರಿ ಪೊಲೀಸರು, ವ್ಹೀಲಿಂಗ್ ಮಾಡುತ್ತಿರುವ ವಿಡಿಯೋಗಳನ್ನು ಆಧರಿಸಿ ಯುವಕನನ್ನು ವಶಕ್ಕೆ ಕಾರ್ಯಾಚರಣೆ ನಡೆಸಿದ್ದರು. ಅದರಂತೆ ಸ್ಕೂಟರ್ ಮತ್ತು ಸವಾರನನ್ನು ಪತ್ತೆ ಮಾಡಿ ಬೈಕ್ ಮತ್ತು ರೈಡರ್​ನನ್ನು ವಶಕ್ಕೆ ಪಡೆದಿದ್ದು, ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ‌.

ಬೈಕ್​ ಕದ್ದು ವ್ಹೀಲಿಂಗ್​ ಮಾಡುತ್ತಿದ್ದವರ ಬಂಧನ: ಸೋಷಿಯಲ್​ ಮೀಡಿಯಾದಲ್ಲಿ ಫೇಮಸ್​ ಆಗಲೆಂದು ದ್ವಿಚಕ್ರ ವಾಹನಗಳನ್ನ ಕದ್ದು ಅದರಲ್ಲಿ ವ್ಹೀಲಿಂಗ್, ಅಪಾಯಕಾರಿ ರೇಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಹೈಗ್ರೌಂಡ್ಸ್ ಠಾಣಾ ಪೊಲೀಸರು ಬಂಧಿಸಿದ್ದ ಘಟನೆ ಕಳೆದ ವಾರ ಬೆಂಗಳೂರಲ್ಲಿ ನಡೆದಿತ್ತು. ಪವನ್ (19), ರಿತಿಕ್ (19) ಬಂಧಿತ ಅರೋಪಿಗಳು.

ರಸ್ತೆ ಬದಿಯಲ್ಲಿ ನಿಲ್ಲಿಸಿರುವ ದ್ವಿಚಕ್ರ ವಾಹನಗಳ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡಿ, ಬಳಿಕ ಆ ವಾಹನಗಳ ನಂಬರ್ ಪ್ಲೇಟ್ ಬದಲಿಸಿ ವ್ಹೀಲಿಂಗ್, ಸ್ಟಂಟ್ ಮಾಡುತ್ತಿದ್ದರು. ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರ ತನಿಖೆ ನಡೆಸಿದ ಪೊಲೀಸರು, ಆರೋಪಿಗಳಿಬ್ಬರನ್ನೂ ಬಂಧಿಸಿದ್ದರು.

ಇದನ್ನೂ ಓದಿ: ವ್ಹೀಲಿಂಗ್ ವೇಳೆ ಮತ್ತೊಂದು ಬೈಕ್​ಗೆ ಡಿಕ್ಕಿ.. ಓರ್ವ ಸಾವು, ಮತ್ತೋರ್ವನಿಗೆ ಗಂಭೀರ ಗಾಯ- Video Viral

Last Updated : Aug 26, 2023, 6:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.