ETV Bharat / state

ಉಸ್ತುವಾರಿ ಸಚಿವರಿಗೆ ವಾರ್ನಿಂಗ್​ ಕೊಟ್ಟ ರೈತ ಸಂಘ - ಮೈಸೂರು ಪ್ರತಿಭಟನೆ ಲೆಟೆಸ್ಟ್ ನ್ಯೂಸ್

4 ದಿನಗಳಿಂದ ನಡೆಯುತ್ತಿರುವ ಧರಣಿ ಸ್ಥಳಕ್ಕೆ ನಾಳೆ ಉಸ್ತುವಾರಿ ಸಚಿವರು ಬಂದು ಸಮಸ್ಯೆ ಆಲಿಸದಿದ್ದರೆ ಕೆ.ಡಿ.ಪಿ ಸಭೆಗೆ ಅಡ್ಡಿ ಪಡಿಸುವುದಾಗಿ ರಾಜ್ಯ ರೈತ ಸಂಘ ಎಚ್ಚರಿಕೆ ನೀಡಿದೆ.

Protest at Mysore....Farmers' Association warned the Minister
ಉಸ್ತುವಾರಿ ಸಚಿವರಿಗೆ ಎಚ್ಚರಿಕೆ ನೀಡಿದ ರೈತ ಸಂಘ
author img

By

Published : Jan 2, 2020, 7:35 PM IST

ಮೈಸೂರು: 4 ದಿನಗಳಿಂದ ನಡೆಯುತ್ತಿರುವ ಧರಣಿ ಸ್ಥಳಕ್ಕೆ ನಾಳೆ ಉಸ್ತುವಾರಿ ಸಚಿವರು ಬಂದು ಸಮಸ್ಯೆ ಆಲಿಸದಿದ್ದರೆ ಕೆ.ಡಿ.ಪಿ ಸಭೆಗೆ ಅಡ್ಡಿ ಪಡಿಸುವುದಾಗಿ ರಾಜ್ಯ ರೈತ ಸಂಘ ಎಚ್ಚರಿಕೆ ನೀಡಿದೆ.

ಉಸ್ತುವಾರಿ ಸಚಿವರಿಗೆ ಎಚ್ಚರಿಕೆ ನೀಡಿದ ರೈತ ಸಂಘ

ಕಳೆದ 4 ದಿನಗಳಿಂದ ಅನಿರ್ದಿಷ್ಟ ಅವಧಿಯ ಮುಷ್ಕರವನ್ನು ಕೈಗೊಂಡಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಬಡಲಗಪುರ ನಾಗೇಂದ್ರ ಧರಣಿ ಸ್ಥಳದಲ್ಲೇ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಹಳ್ಳಿಗಳಲ್ಲಿ ಮನೆಗಳ ಮೇಲೆ ಪವರ್ ಗ್ರೀಡ್ ಮಾರ್ಗ ಹೋಗಿದ್ದು, ಇದನ್ನು ಬದಲಾಯಿಸುವಂತೆ ಹಲವಾರು ಬಾರಿ ಮನವಿ ಸಲ್ಲಿಸಿದ್ದು ಯಾವುದೇ ಪ್ರಯೋಜನ ಆಗಿಲ್ಲ. ಈ ಬಗ್ಗೆ ಯಾವುದೇ ಜನಪ್ರತಿನಿಧಿಗಳು ಕ್ರಮ ಕೈಗೊಂಡಿಲ್ಲ, ಇದನ್ನು ವಿರೋಧಿಸಿ ಕಳೆದ 4 ದಿನಗಳಿಂದಲೂ ಜಿಲ್ಲಾಧಿಕಾರಿಗಳ ಕಚೇರಿಯ ಹತ್ತಿರ ಅನಿರ್ದಿಷ್ಟಾವಧಿಯ ಧರಣಿ ನಡೆಸುತ್ತಿದ್ದರೂ ಕೂಡಾ ಯಾವುದೇ ಜನಪ್ರತಿನಿಧಿಗಳು ಆಗಮಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾಳೆ ಜಿಲ್ಲಾ ಪಂಚಾಯತ್​ನಲ್ಲಿ ಕೆ.ಡಿ.ಪಿ ಸಭೆಗೆ ಆಗಮಿಸುತ್ತಿರುವ ಉಸ್ತುವಾರಿ ಸಚಿವರು ಇಲ್ಲಿಗೆ ಬಂದು ನಮ್ಮ ಸಮಸ್ಯೆಯನ್ನು ಆಲಿಸಬೇಕು ಇಲ್ಲದಿದ್ದರೆ, ಕೆ.ಡಿ.ಪಿ ಸಭೆಗೆ ಅಡ್ಡಿ ಪಡಿಸುವುದಾಗಿ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಕೆ ನೀಡಿದರು.

ನಾಳೆ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲ ತಾಲೂಕು ಘಟಕಗಳಿಂದ ರೈತರು ಆಗಮಿಸಲಿದ್ದು, ಜನವರಿ 8ರಂದು ಕರ್ನಾಟಕದ ಗ್ರಾಮೀಣ ಬಂದ್ ಆಚರಿಸಲು ನಿರ್ಧರಿಸಿದ್ದೇವೆ. ಅಂದು ಗ್ರಾಮಾಂತರ ಪ್ರದೇಶದಿಂದ ಯಾವುದೇ ಅಗತ್ಯ ವಸ್ತುಗಳು ನಗರ ಪ್ರದೇಶಕ್ಕೆ ಬರದಂತೆ ತಡೆದು ಬಂದ್ ಆಚರಿಸುತ್ತೇವೆ ಎಂದು ತಿಳಿಸಿದರು.

Intro:ಮೈಸೂರು: ೪ ದಿನದಿಂದ ನಡೆಯುತ್ತಿರುವ ಧರಣಿ ಸ್ಥಳಕ್ಕೆ ನಾಳೆ ಉಸ್ತುವಾರಿ ಸಚಿವರು ಬಂದು ಸಮಸ್ಯೆ ಆಲಿಸದಿದ್ದರೆ ಕೆ.ಡಿ.ಪಿ ಸಭೆಗೆ ಅಡ್ಡಿ ಪಡಿಸುವುದಾಗಿ ರಾಜ್ಯ ರೈತ ಸಂಘ ಎಚ್ಚರಿಕೆ ನೀಡಿದೆ.

Body:ಕಳೆದ ೪ ದಿನಗಳಿಂದ ಅನಿರ್ದಿಷ್ಟ ಅವಧಿಯ ಮುಷ್ಕರವನ್ನು ಕೈಗೊಂಡಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಬಡಲಗಪುರ ನಾಗೇಂದ್ರ ಧರಣಿ ಸ್ಥಳದಲ್ಲೇ ಪತ್ರಿಕಾಗೋಷ್ಠಿ ನಡೆಸಿ ಹಳ್ಳಿಗಳಲ್ಲಿ ಮನೆಗಳ ಮೇಲೆ ಪವರ್ ಗ್ರೀಡ್ ಮಾರ್ಗ ಹೋಗಿದ್ದು, ಇದನ್ನು ಬದಲಾಯಿಸುವಂತೆ ಹಲವಾರು ಬಾರಿ ಮನವಿ ಸಲ್ಲಿಸಿದ್ದು ಯಾವುದೇ ಪ್ರಯೋಜನ ಆಗಿಲ್ಲ, ಈ ಬಗ್ಗೆ ಯಾವುದೇ ಜನಪ್ರತಿನಿಧಿಗಳು ಕ್ರಮ ಕೈಗೊಂಡಿಲ್ಲ, ಇದನ್ನು ವಿರೋಧಿಸಿ ಕಳೆದ ೪ ದಿನಗಳಿಂದಲೂ ಜಿಲ್ಲಾಧಿಕಾರಿಗಳ ಕಚೇರಿಯ ಹತ್ತಿರದ ಅನಿರ್ದಿಷ್ಟಾವದಿಯ ಧರಣಿ ನಡೆಸುತ್ತಿದ್ದರು ಯಾವುದೇ ಜನಪ್ರತಿನಿಧಿಗಳು ಆಗಮಿಸಿಲ್ಲ, ನಾಳೆ ಜಿಲ್ಲಾ ಪಂಚಾಯತ್ ನಲ್ಲಿ ಕೆ.ಡಿ.ಪಿ ಸಭೆಗೆ ಆಗಮಿಸುತ್ತಿರುವ ಉಸ್ತುವಾರಿ ಸಚಿವರು ನಾವು ಧರಣಿ ನಡೆಸುತ್ತಿರುವ ಸ್ಥಳಕ್ಕೆ ಬಂದು ನಮ್ಮ ಸಮಸ್ಯೆಯನ್ನು ಆಲಿಸಬೇಕು ಇಲ್ಲದಿದ್ದರೆ, ಕೆ.ಡಿ.ಪಿ ಸಭೆಗೆ ಅಡ್ಡಿ ಪಡಿಸುವುದಾಗಿ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಕೆ ನೀಡಿದರು.
ನಾಳೆ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಾ ತಾಲೂಕು ಘಟಕಗಳಿಂದ ರೈತರು ಆಗಮಿಸಲಿದ್ದು ಜನವರಿ ೮ ರಂದು ಕರ್ನಾಟಕದ ಗ್ರಾಮೀಣ ಬಂದ್ ಅನ್ನು ಆಚರಿಸಲು ನಿರ್ಧರಿಸಿದ್ದು, ಅಂದು ಗ್ರಾಮಾಂತರ ಪ್ರದೇಶದಿಂದ ಯಾವುದೇ ಅಗತ್ಯ ವಸ್ತುಗಳು ನಗರ ಪ್ರದೇಶಕ್ಕೆ ಬರದಂತೆ ಬಂದ್ ಆಚರಿಸುತ್ತೇವೆ ಎಂದು ರಾಜ್ಯಾಧ್ಯಕ್ಷರು ತಿಳಿಸಿದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.