ಮೈಸೂರು: ಕೋವಿಡ್ ನಿಂದ ಈ ವರ್ಷ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ ವಿಧ್ಯಾರ್ಥಿಗಳಿಗೆ ಸರಿಯಾಗಿ ಪಾಠ ನಡೆದಿಲ್ಲ. ಸರ್ಕಾರ ಪರೀಕ್ಷೆ ಇಲ್ಲದೆಯೇ ಈ ಎರಡು ತರಗತಿಯ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕೆಂದು ಕನ್ನಡ ಚಳವಳಿಯ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.
ಇಂದು ನಗರದ ಆರ್.ಗೇಟ್ ಬಳಿ ಲಾಕ್ ಡೌನ್ ವಿಸ್ತರಣೆ ವಿರೋಧಿಸಿ ಏಕಾಂಗಿ ಪ್ರತಿಭಟನೆ ನಡೆಸಿದ ಅವರು, 'ಈಟಿವಿ ಭಾರತ'ದೊಂದಿಗೆ ಮಾತನಾಡಿದ್ರು. ಲಾಕ್ ಡೌನ್ ನಿಂದ ಜನಸಾಮಾನ್ಯರಿಗೆ ತುಂಬ ಕಷ್ಟವಾಗಿದೆ. ಲಾಕ್ ಡೌನ್ಅನ್ನು ಮುಖ್ಯಮಂತ್ರಿಗಳು , ಅಧಿಕಾರಿಗಳು ಹಾಗೂ ಸಚಿವರು ಎಂಜಾಯ್ ಮಾಡುತ್ತಿದ್ದಾರೆ. ಆದರೆ, ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಜನಸಾಮಾನ್ಯರಿಗೆ ಲಾಕ್ ಡೌನ್ ಪರಿಹಾರ ನೀಡಬೇಕು ಹಾಗೂ ಲಾಕ್ ಡೌನ್ ವಿಸ್ತರಣೆ ಬೇಡ ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.
ಕಳೆದ ವರ್ಷ ಮೊದಲ ಕೋವಿಡ್ ಅಲೆಯಿಂದ ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ ಆಗಿಲ್ಲ. ಈ ವರ್ಷ ಕೋವಿಡ್ ನ ಎರಡನೇ ಅಲೆಯಿಂದ ಸಹ ಸರಿಯಾಗಿ ಪಾಠಗಳು ನಡೆದಿಲ್ಲ. ಸರ್ಕಾರ ಈ ವರ್ಷ ಪರೀಕ್ಷೆ ಇಲ್ಲದೆ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ. ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕು ಇಲ್ಲದಿದ್ದರೆ, ಚಳವಳಿ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.