ಮೈಸೂರು: ರಾಜವಂಶಸ್ಥ ಯದುವೀರ್ ವಿಜಯಯಾತ್ರೆಯ ವೇಳೆ ಪಲ್ಲಕ್ಕಿಗೆ ಕಟ್ಟಿದ್ದ ಎತ್ತುಗಳು ವಾಲಗದ ಶಬ್ದಕ್ಕೆ ವಿಚಲಿತಗೊಂಡ ಘಟನೆ ನಡೆದಿದೆ.
ಅರಮನೆಯಿಂದ ವಿಜಯಯಾತ್ರೆ ಸಂದರ್ಭದಲ್ಲಿ ಆನೆ, ಕುದುರೆ, ಒಂಟೆಗಳು ಭುವನೇಶ್ವರಿ ದೇವಾಲಯದ ಹತ್ತಿರ ಇರುವ ಶಮಿ ಮರದ ಹತ್ತಿರ ಮೆರವಣಿಗೆಯಲ್ಲಿ ಬರುವಾಗ ವಾಲಗದ ಶಬ್ದಕ್ಕೆ ಪಲ್ಲಕ್ಕಿಯಲ್ಲಿ ಕಟ್ಟಿದ್ದ ಎತ್ತುಗಳು ಗಾಬರಿಗೊಂಡಿವೆ. ಇದನ್ನು ಕಂಡ ಅರಮನೆ ಆನೆಗಳು ಸಹ ಗಲಿಬಿಲಿಗೊಂಡಿವೆ. ಕೂಡಲೇ ಪಲ್ಲಕ್ಕಿಯಿಂದ ಎತ್ತುಗಳನ್ನು ಬಿಡಿಸಿ, ಜನರೇ ಪಲ್ಲಕ್ಕಿಯನ್ನು ಎಳೆದುಕೊಂಡು ಬಂದರು.
ಈ ಬಾರಿ ಯದುವೀರ್ ಪಲ್ಲಕ್ಕಿಯಲ್ಲಿ ಕುಳಿತುಕೊಳ್ಳದೆ ಕಾರಿನಲ್ಲಿ ಶಮಿ ಮರದ ಹತ್ತಿರ ಬಂದಿದ್ದು ವಿಶೇಷವಾಗಿತ್ತು.