ಮೈಸೂರು : ಪಠ್ಯ ಕ್ರಮವನ್ನು ಕಡಿಮೆ ಮಾಡಿ ಆನ್ಲೈನ್ನಲ್ಲೇ ಪಾಠ ಮಾಡುತ್ತೇವೆ ಎಂಬ ಗೊಂದಲ ಸರಿಯಲ್ಲ. ಈ ಬಗ್ಗೆ ಶಿಕ್ಷಣ ಸಚಿವರು ಗಮನಹರಿಸಬೇಕೆಂದು ಮಾಜಿ ಶಿಕ್ಷಣ ಸಚಿವ ಹೆಚ್ ವಿಶ್ವನಾಥ್ ಹೇಳಿದ್ದಾರೆ. ಕೊರೊನಾ ಹಿನ್ನೆಲೆ ನಿಗದಿತ ಸಮಯಕ್ಕೆ ಪರೀಕ್ಷೆಗಳು ನಡೆಯದೆ ವಿದ್ಯಾರ್ಥಿಗಳು ಗೊಂದಲದಲ್ಲಿದ್ದಾರೆ.
ಶಿಕ್ಷಣ ಎನ್ನುವುದು ಬಹಳ ಆದ್ಯತೆ ಮೇರೆಗೆ ಸರ್ಕಾರ ನಡೆಸಬೇಕು. ಬಹಳ ಅವಸರ ಮಾಡುತ್ತಿದ್ದಾರೆ, ಇನ್ನೂ ರಜಾ ತಿಂಗಳಲ್ಲೇ ಇದ್ದೀವಿ, ಮೇ ತಿಂಗಳು ರಜಾ ತಿಂಗಳು. ಕೋವಿಡ್-19 ಕಡಿಮೆಯಾಗುತ್ತದೆಯೋ ಇಲ್ಲವೇ ಎಂದು ನೊಡೋಣ. ಇದಲ್ಲದೆ ಶೇ.30% ಪಠ್ಯ ಕ್ರಮ ಕಡಿಮೆ ಮಾಡುವುದು, ಆನ್ಲೈನ್ನಲ್ಲಿ ಪಾಠ ಮಾಡುವುದು ಗೊಂದಲದ ವಿಷಯ ಎಂದರು. ನಮ್ಮ ಸರ್ವೇ ಪ್ರಕಾರ ಸ್ಮಾರ್ಟ್ ಫೋನ್ ಇರುವುದೇ ಶೇ. 23% ಜನರಲ್ಲಿ ಮಾತ್ರ. ನಮ್ಮ ಹಳ್ಳಿ ಮಕ್ಕಳಿಗೆ ಇದು ಕಷ್ಟ ಮತ್ತು ನಾನು ಶಿಕ್ಷಣ ಮಂತ್ರಿಯಾಗಿದ್ದಾಗ 42 ಸಾವಿರ ಶಾಲೆಗಳಿಗೆ ನಾವು ಕಾಂಪೌಂಡ್ ಹಾಗೂ ಗಿಡ ಮರ ನೆಟ್ಟಿಸಿದ್ದೀವಿ. ಕಾಂಪೌಂಡ್ ಒಳಗೆ ನೀವು ಪಾಠ ಮಾಡಿ ಎಂದರು.
ನಾನು ಶಿಕ್ಷಣ ಮಂತ್ರಿಯಲ್ಲಿ ವಿನಂತಿ ಮಾಡುತ್ತೇನೆ. ಆಮೇಲೆ ಫಲಿತಾಂಶದಲ್ಲಿ ರೀಲ್ಯಾಕ್ಸ್ ಮಾಡಿಕೊಳ್ಳೋಣ. ಯಾಕೆಂದರೆ, ಪಠ್ಯ ಫಿಕ್ಸ್ ಆಗಿರುವುದಕ್ಕೆ ನಿಖರವಾಗಿರುವುದಕ್ಕೆ ನ್ಯಾಷನಲ್ ಕರಿಕ್ಯುಲಂ ಫ್ರೇಂವರ್ಕ್ ಅಂತಾ (ಎನ್‌ಸಿಎಫ್) ಇವೆಲ್ಲಾ ಕೂಡ ಒಟ್ಟಿಗೆ ತಗೋಬೇಕು. ನಾನು ಸುರೇಶ್ ಕುಮಾರ್ ಅವರಿಗೆ ವಿನಂತಿ ಮಾಡುತ್ತೇನೆ. ದಯಮಾಡಿ ಶಿಕ್ಷಕರು, ಪೋಷಕರು ಹಾಗೂ ತಜ್ಞರ ಜೊತೆ ಚರ್ಚೆ ಮಾಡಿ ನ್ಯಾಷನಲ್ ಕರಿಕ್ಯುಲಂ ಫ್ರೇಂ ವರ್ಕ್ನ ಅನುಗುಣವಾಗಿ ಇದು ಆಗಬೇಕು. ನಮ್ಮಲ್ಲೇ ತೀರ್ಮಾನ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.