ETV Bharat / state

ಶಿಥಿಲಾವಸ್ಥೆಯ ಪಾರಂಪರಿಕ ಕಟ್ಟಡಗಳ ಪುನಶ್ಚೇತನಕ್ಕೆ ಬಜೆಟ್​ನಲ್ಲಿ ಸಾವಿರ ಕೋಟಿ ಬೇಕು: ಪಾರಂಪರಿಕ ತಜ್ಞ ಪ್ರೊ ರಂಗರಾಜ್

ಪ್ರವಾಸೋದ್ಯಮ ಕೇಂದ್ರವಾಗಿರುವ ಮೈಸೂರು ನಗರದ ಶಿಥಿಲಾವಸ್ಥೆಯಲ್ಲಿರುವ ಪಾರಂಪರಿಕ ಕಟ್ಟಡಗಳನ್ನು ದುರಸ್ತಿಗೆ ಸರ್ಕಾರ ಈ ಬಾರಿಯ ಬಜೆಟ್​ನಲ್ಲಿ ಪ್ರಾಮುಖ್ಯತೆ ಕೊಡಬೇಕು ಎಂದು ಪ್ರೊ ರಂಗರಾಜ್​ ಮನವಿ ಮಾಡಿಕೊಂಡಿದ್ದಾರೆ.

Heritage Expert Prof. Rangaraj Interview
ಪಾರಂಪರಿಕ ತಜ್ಞ ಪ್ರೊ ರಂಗರಾಜ್ ಸಂದರ್ಶನ
author img

By

Published : Jan 31, 2023, 5:25 PM IST

Updated : Jan 31, 2023, 6:03 PM IST

ಪಾರಂಪರಿಕ ತಜ್ಞ ಪ್ರೊ ರಂಗರಾಜ್ ಸಂದರ್ಶನ

ಮೈಸೂರು: ಸಾಂಸ್ಕೃತಿಕ ನಗರಿ, ಅರಮನೆಗಳ ನಗರಿ, ಪಾರಂಪರಿಕ ನಗರಿ ಎಂಬ ಖ್ಯಾತಿ ಹೊಂದಿರುವ ಮೈಸೂರು ನಗರದಲ್ಲಿ ಸುಮಾರು 600ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳಿದ್ದು, ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡದೆ, ಬಹುತೇಕ ಪಾರಂಪರಿಕ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ. ಅವುಗಳ ದುರಸ್ತಿಗೆ ಈ ಬಾರಿ ಬಜೆಟ್​ನಲ್ಲಿ ಮುಖ್ಯಮಂತ್ರಿಗಳು ಹೆಚ್ಚಿನ ಅನುದಾನ ನೀಡಬೇಕು ಎಂದು, ಮೈಸೂರಿನ ಮಹಾನಗರ ಪಾಲಿಕೆಯ ನಿಯೋಗ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದೆ.

ಈ ಬಾರಿಯ ಬಜೆಟ್​ನಲ್ಲಿ ಪಾರಂಪರಿಕ ಕಟ್ಟಡಗಳ ಪುನಶ್ಚೇತನಕ್ಕೆ ಹೆಚ್ಚಿನ ಅನುದಾನ ನಿರೀಕ್ಷೆ ಮಾಡಲಾಗುತ್ತಿದ್ದು, ಈ ಮಧ್ಯೆ ಮೈಸೂರು ನಗರದ ಪಾರಂಪರಿಕ ಕಟ್ಟಡಗಳ ಸ್ಥಿತಿಗತಿ ಬಗ್ಗೆ ಪಾರಂಪರಿಕ ತಜ್ಞ ಪ್ರೊ ರಂಗರಾಜ್, ಈಟಿವಿ ಭಾರತ್​ಗೆ ವಿಶೇಷ ಸಂದರ್ಶನ ನೀಡಿದ್ದು ಅದರ ಪೂರ್ಣ ಮಾಹಿತಿ ಇಲ್ಲಿದೆ.

ಪ್ರಪಂಚದಲ್ಲೇ ಅತಿ ಹೆಚ್ಚು ಪಾರಂಪರಿಕ ಕಟ್ಟಡಗಳನ್ನು ಹೊಂದಿರುವ ನಗರಗಳಲ್ಲಿ ಮೈಸೂರು ಸಹ ಒಂದು. ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ನಗರ ಸಹ ಇದಾಗಿದ್ದು, ಇಲ್ಲಿ ಇರುವ ಕಟ್ಟಡಗಳು ಪಾರಂಪರಿಕ ಕಟ್ಟಡಗಳಾಗಿವೆ. ಮೈಸೂರು ನಗರದಲ್ಲಿ ಈಗ 600 ಪಾರಂಪರಿಕ ಕಟ್ಟಡಗಳಿವೆ. ಅವುಗಳಲ್ಲಿ ಸುಮಾರು 30 ಮುಖ್ಯ ಕಟ್ಟಡಗಳು ದುರಸ್ತಿಯಲ್ಲಿವೆ.

ಕೆಲವು ಕಟ್ಟಡಗಳು ಸರಿಯಾದ ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆಗೆ ತಲುಪಿವೆ. ಈ ಪಾರಂಪರಿಕ ಕಟ್ಟಡಗಳ ಉಳಿವಿಗಾಗಿ ಪಾಲಿಕೆಯ ಮೇಯರ್ ಶಿವಕುಮಾರ್ ನೇತೃತ್ವದಲ್ಲಿ, ಪಾರಂಪರಿಕ ಕಟ್ಟಡಗಳ ದುರಸ್ತಿಗೆ, ಈ ಬಜೆಟ್​ನಲ್ಲಿ ಹೆಚ್ಚಿನ ಅನುದಾನ ನೀಡಬೇಕೆಂದು ಮೈಸೂರಿಗೆ ಮುಖ್ಯಮಂತ್ರಿಗಳು ಬಂದಾಗ ಮನವಿ ಮಾಡಲಾಗಿತ್ತು. ಆದರೆ, ಈ ಬಾರಿ ಬಜೆಟ್​ನಲ್ಲಿ ಎಷ್ಟು ಹಣ ಮೀಸಲಿಡಲಾಗುತ್ತದೆ ಎಂಬುದೇ ಪ್ರಶ್ನೆಯಾಗಿದೆ.

ದುರಸ್ತಿಗೆ ಸಾವಿರ ಕೋಟಿ ಬೇಕು: ಮೈಸೂರು ನಗರದ ಪಾರಂಪರಿಕ ಕಟ್ಟಡಗಳ ಮೊದಲ ಸರ್ವೇ ಪ್ರಕಾರ 234 ಪಾರಂಪರಿಕ ಕಟ್ಟಡಗಳು ಇದ್ದು, ಅದರಲ್ಲಿ 14 ಅರಮನೆಗಳು ಸೇರಿವೆ. ಇನ್ನೂ ಎರಡನೇ ಹಂತದ ಸರ್ವೇಯಲ್ಲಿ 480 ಪಾರಂಪರಿಕ ಕಟ್ಟಡಗಳಿದ್ದು, ಅನಂತರ ಮೂರನೇ ಸರ್ವೇಯಲ್ಲಿ 600 ಪಾರಂಪರಿಕ ಕಟ್ಟಡಗಳು ಇವೆ ಎಂದು ಅಂದಾಜು ಮಾಡಲಾಗಿದೆ. ಇದರಲ್ಲಿ ಕೇಂದ್ರ ಸರ್ಕಾರದ, ರಾಜ್ಯ ಸರ್ಕಾರದ ಇಲಾಖೆಗಳಿರುವ ಕಟ್ಟಡಗಳು ಜಿಲ್ಲಾಧಿಕಾರಿ ಕಚೇರಿ, ಮೈಸೂರು ವಿಶ್ವವಿದ್ಯಾಲಯ, ಈ ವಿಶ್ವವಿದ್ಯಾಲಯದ ಆವರಣದಲ್ಲೇ 25 ಪಾರಂಪರಿಕ ಕಟ್ಟಡಗಳಿದ್ದು, ಅವುಗಳು ನೂರು ವರ್ಷ ಪೂರೈಸಿವೆ.

ಜೊತೆಗೆ ಕೆಲವು ಖಾಸಗಿ ಒಡೆತನದಲ್ಲಿರುವ ಕಟ್ಟಡಗಳು ಸಹ ಪಾರಂಪರಿಕ ಕಟ್ಟಡಗಳಾಗಿದ್ದು, ಅವುಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಇದರಿಂದ ಅವು ಶಿಥಿಲಾವಸ್ಥೆ ತಲುಪಿವೆ. ಇವುಗಳ ನಿರ್ವಹಣೆಗೆ ಕನಿಷ್ಠ ಸಾವಿರ ಕೋಟಿ ಹಣ ಬೇಕು ಎನ್ನುತ್ತಾರೆ ಪಾರಂಪರಿಕ ತಜ್ಞ ಪ್ರೊ. ರಂಗರಾಜ್.

ಅಪಾಯದಲ್ಲಿರುವ ಪಾರಂಪರಿಕ ಕಟ್ಟಡಗಳು: ಮೈಸೂರು ನಗರದ ಸುಮಾರು 25 ರಿಂದ 30 ಸಾರ್ವಜನಿಕವಾಗಿ ಉಪಯೋಗಿಸಲ್ಪಡುತ್ತಿರುವ ಪಾರಂಪರಿಕ ಕಟ್ಟಡಗಳು. ಅವುಗಳಲ್ಲಿ ದೇವರಾಜ ಮಾರ್ಕೆಟ್, ಲ್ಯಾನ್ಸ್​ಡೌನ್ ಕಟ್ಟಡ, ದೊಡ್ಡಗಡಿಯಾರ, ಜಯಲಕ್ಷ್ಮಿ ವಿಲಾಸ್, ಮಹಾರಾಣಿ ಕಾಲೇಜು, ಸರಸ್ವತಿಪುರಂ ಫೈರ್ ಬ್ರಿಗೇಡ್, ಗೌರ್ಮೆಂಟ್ ಹೌಸ್ ಸೇರಿದಂತೆ ಹಲವು ಪ್ರಮುಖ ಆಕರ್ಷಣೀಯ ಪಾರಂಪರಿಕ ಕಟ್ಟಡಗಳು ದುಃಸ್ಥಿತಿಯಲ್ಲಿವೆ. ಈ ಬಾರಿಯ ಬಜೆಟ್​ನಲ್ಲಿ ತುರ್ತಾಗಿ ಅವುಗಳ ರಿಪೇರಿಗೆ ಹಣ ಮಿಸಲಿಡಬೇಕು, ಇಲ್ಲದಿದ್ದರೆ ಈ ಕಟ್ಟಡಗಳು ಮತ್ತಷ್ಟು ಹಾಳಾಗಲಿದ್ದು, ಪಾರಂಪರಿಕತೆ ಕಳೆದುಕೊಳ್ಳುತ್ತದೆ.

ಸರ್ಕಾರ ತುರ್ತಾಗಿ ಈ ಪಾರಂಪರಿಕ ಕಟ್ಟಡಗಳ ಉಳಿವಿಗಾಗಿ ಕ್ರಮ ಕೈಗೊಳ್ಳಬೇಕಾಗಿದ್ದು ಅನಿವಾರ್ಯ. ಇಲ್ಲದಿದ್ದರೆ ಪಾರಂಪರಿಕ ಕಟ್ಟಡಗಳು ನಶಿಸಿಹೋಗುತ್ತವೆ ಎಂದು ಪಾರಂಪರಿಕ ಕಟ್ಟಡಗಳ ಉಳಿವಿನ ಬಗ್ಗೆ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪಾರಂಪರಿಕ ತಜ್ಞರಾದ ಪ್ರೊ. ರಂಗರಾಜ್ ಸುದೀರ್ಘವಾಗಿ ವಿವರಿಸಿದ್ದಾರೆ.

ಇದನ್ನೂ ಓದಿ: ಮೈಸೂರಿನಲ್ಲಿ ಪಾರಂಪರಿಕ ಕಟ್ಟಡ ಒಡೆಯಲು ರಾಜಮನೆತನದ ವಿರೋಧ

Last Updated : Jan 31, 2023, 6:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.