ETV Bharat / technology

ಇದು ಐಫೋನ್‌ಪ್ರಿಯರಿಗೆ ಒಳ್ಳೆಯ ಸುದ್ದಿ ಅಲ್ಲ​! ಏನದು?

Apple iPhone: ಆ್ಯಪಲ್ ಕಂಪನಿಯು ಕೆಲವು ಐಫೋನ್‌ ಮಾಡೆಲ್​ಗಳ ಉತ್ಪಾದನೆಯನ್ನು ಸ್ಥಗಿತಗೊಳಿಸುತ್ತಿದೆ.

APPLE IPHONE DISCONTINUED  IPHONE 15 PRO  IPHONE 15 PRO MAX  IPHONE 13
ಆ್ಯಪಲ್ ಐಫೋನ್ (IANS)
author img

By ETV Bharat Tech Team

Published : Nov 11, 2024, 8:02 AM IST

Updated : Nov 11, 2024, 9:33 AM IST

Apple iPhone: ಆ್ಯಪಲ್​ ಕಂಪನಿ ತನ್ನ ಐಫೋನ್​ 15 ಪ್ರೋ, ಐಫೋನ್​ 15 ಪ್ರೋ ಮ್ಯಾಕ್ಸ್​ ಮತ್ತು ಐಫೋನ್​ 13 ಫೋನ್​ಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಅಷ್ಟೇ ಅಲ್ಲದೇ, ಆ್ಯಪಲ್​ ಸ್ಟೋರ್‌ಗಳಿಂದಲೂ ಇವುಗಳನ್ನು ತೆಗೆದುಹಾಕಲು ನಿರ್ಧರಿಸಿದೆ. ಆದರೆ ಈಗಾಗಲೇ ಉಪಯೋಗಿಸುತ್ತಿರುವ ಈ ಮಾಡೆಲ್​ಗಳ ಭವಿಷ್ಯದ ಅಪ್​ಡೇಟ್​ಗಳು ಲಭ್ಯವಿವೆ.

ಐಫೋನ್​ 16 ಸೀರಿಸ್ ಮಾರುಕಟ್ಟೆಗೆ ಬಂದಿರುವ ಕಾರಣ ಕಂಪನಿ ಕೆಲ ಹಳೆಯ ಮಾಡೆಲ್​ಗಳ ಬೆಲೆ ತಗ್ಗಿಸಿತ್ತು. ಬೆಲೆ ಇಳಿಸಿದ ನಂತರ ಹಳೆಯ ಐಫೋನ್​ ಮಾದರಿಗಳನ್ನು ಖರೀದಿಸಲು ಯೋಜಿಸುತ್ತಿದ್ದ ಆ್ಯಪಲ್‌ಪ್ರಿಯರಿಗೆ ಇದೀಗ ಕಂಪನಿಯ ನಿರ್ಧಾರದಿಂದ ನಿರಾಸೆಯಾಗಿದೆ.

ಹಾಗಾಗಿ, ಇನ್ನುಮುಂದೆ ಬಳಕೆದಾರರು ಐಫೋನ್​ 14, ಐಫೋನ್​ 14 ಪ್ಲಸ್​, ಐಫೋನ್​ 15, ಐಫೋನ್​ 15 ಪ್ಲಸ್​, ಐಫೋನ್​ 16 ಮತ್ತು ಐಫೋನ್​ 16 ಪ್ರೋ ಮಾತ್ರ ಖರೀದಿಸಬಹುದಾಗಿದೆ. ವೆಬ್​ಸೈಟ್‌ನಿಂದ ತೆಗೆದುಹಾಕಿರುವ ಐಫೋನ್‌ಗಳು ಸರ್ವೀಸ್​, ಸೆಕ್ಯೂರಿಟಿ ಅಪ್​ಡೇಟ್​ ಮತ್ತು ಒಎಸ್​ ಅಪ್​ಡೇಟ್​ ಪಡೆಯುವುದನ್ನು ಮುಂದುವರಿಸುತ್ತವೆ ಎಂದು ತಿಳಿಸಲಾಗಿದೆ.

ವೆಬ್‌ಸೈಟ್‌ನಿಂದ ತೆಗೆದುಹಾಕಿರುವ ಐಫೋನ್‌ಗಳನ್ನು ಆಫ್‌ಲೈನ್ ಮತ್ತು ಆನ್‌ಲೈನ್ ಮಾರುಕಟ್ಟೆಯಿಂದ ಖರೀದಿಸಬಹುದು. ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಾದ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಪ್ರಸ್ತುತ ಐಫೋನ್‌ಗಳಲ್ಲಿ ಗ್ರಾಹಕರಿಗೆ ಬಂಪರ್ ರಿಯಾಯಿತಿಗಳನ್ನು ಒದಗಿಸಬಹುದು. ಪ್ರಸ್ತುತ, ನೀವು ಐಫೋನ್​ 13 ಮತ್ತು ಐಫೋನ್​ ಸಿರೀಸ್​ಗಳಲ್ಲಿ ಆಫ್‌ಲೈನ್ ಮತ್ತು ಆನ್‌ಲೈನ್‌ನಲ್ಲಿ ಉತ್ತಮ ಆಫರ್​ಗಳನ್ನು ಪಡೆಯಬಹುದು.

ಇದನ್ನೂ ಓದಿ: ಭಾರತದ ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಿ ಶೇಕಡ 7-8ರಷ್ಟು ಏರಿಕೆ ಕಾಣಲಿದೆ: ವರದಿ

Last Updated : Nov 11, 2024, 9:33 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.