ETV Bharat / state

31 ರ ವರೆಗೆ ಸಾಂಸ್ಕೃತಿಕ ನಗರಿ ಲಾಕ್ ಡೌನ್: ಏನೆಲ್ಲಾ ಸಿಗುತ್ತೆ..? ಏನು ಸಿಗಲ್ಲ..? - corona latest news

ಕೊರೊನಾ ಹಿನ್ನೆಲೆ ಮಾರ್ಚ್​ 31 ರವರೆಗೆ ರಾಜ್ಯದ 9 ಜಿಲ್ಲೆಗಳನ್ನು ಲಾಕ್​ ಡೌನ್​ ಮಾಡಲಾಗಿದೆ. ಈ ಹಿನ್ನೆಲೆ ನಗರದಲ್ಲಿ ಏನೇನು ಇರಲಿದೆ, ಏನೇನು ಇರುವುದಲ್ಲ ಎನ್ನುವುದರ ಕಂಪ್ಲೀಟ್​ ಡೀಟೇಲ್ಸ್​​ ಇಲ್ಲಿದೆ.

mysore-lock-down
31 ರ ವರೆಗೆ ಸಾಂಸ್ಕೃತಿಕ ನಗರಿ ಲಾಕ್ ಡೌನ್
author img

By

Published : Mar 23, 2020, 10:13 AM IST

ಮೈಸೂರು: ಕೊರೋನಾ ವೈರಸ್ ಹಿನ್ನೆಲೆ ರಾಜ್ಯದ 9 ಜಿಲ್ಲೆಗಳು ಮಾರ್ಚ್ 31 ವರೆಗೆ ಲಾಕ್ ಡೌನ್ ಆಗಿವೆ, ಈ ದಿನಗಳಲ್ಲಿ ನಗರದಲ್ಲಿ ಏನೇನು ಇರುತ್ತದೆ..? ಏನೇನು ಇರಲ್ಲ..? ಎಂಬ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ರೀತಿಯ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಆದೇಶ ನೀಡಲಾಗಿದೆ, ಲಾಕ್ ಡೌನ್ ಆದೇಶ ನೀಡಿದ ಹಿನ್ನೆಲೆ, ಭಯಗೊಂಡ ಜನರು ಬೆಳಗ್ಗೆಯಿಂದಲೇ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದಾರೆ.

ಏನೆಲ್ಲಾ ಸೇವೆಗಳು ಇರಲಿದೆ..

ಹಾಲು, ತರಕಾರಿ, ಮೆಡಿಕಲ್ ಸ್ಟೋರ್, ಪೆಟ್ರೋಲ್ ಬಂಕ್, ಮಾಂಸ ಹಾಗೂ ಮೀನಿನ ಅಂಗಡಿಗಳು ಕಾರ್ಯ ನಿರ್ವಹಸಲಿವೆ. ಎಲ್ಲಾ ಸರಕು ಸಾಗಣಿಕೆ ವಾಹನಗಳು ಸಂಚರಿಸಲಿವೆ, ಪೋಲಿಸ್ ಮತ್ತು ಅಗ್ನಿ ಸೇವೆಗಳು ಎಂದಿನಂತೆ ಲಭ್ಯವಿರುತ್ತದೆ. ಸರ್ಕಾರಿ ಕಚೇರಿಗಳು, ಅಂಚೆ ಕಚೇರಿಗಳು, ವಿದ್ಯುತ್​ ನೀರು ಸರಬರಾಜು, ಬ್ಯಾಂಕ್, ಎಟಿಎಂ, ಟೆಲಿಕಾಂ ಸೇವೆಗಳು ಅಗತ್ಯ ವಸ್ತುಗಳನ್ನು ಮನೆಗೆ ತೆಗೆದುಕೊಂಡು ಹೋಗುವ ಪಾರ್ಸಲ್ ಸರ್ವಿಸ್ ಇರುತ್ತದೆ, ಹೋಟೆಲ್ ಗಳು ತೆರೆದಿರುತ್ತವೆ ಆದರೆ ಆಹಾರ ಪಾರ್ಸಲ್ ಗಳಿಗೆ ಮಾತ್ರ ಅವಕಾಶ ಇರುತ್ತದೆ. ಇನ್ನು ಕೃಷಿ ಸಂಬಂಧಿಸಿದ ಅಂಗಡಿಗಳು ಮಾರುಕಟ್ಟೆಗಳು ತೆರೆಯಲು ಅವಕಾಶ ಮಾಡಿಕೊಡಲಾಗಿದೆ.

31 ರ ವರೆಗೆ ಸಾಂಸ್ಕೃತಿಕ ನಗರಿ ಲಾಕ್ ಡೌನ್

ಏನೆಲ್ಲಾ ಇರುವುದಿಲ್ಲ..
ಅಗತ್ಯ ವಸ್ತುಗಳ ವ್ಯಾಪ್ತಿಗೆ ಬಾರದ ಅಂಗಡಿಗಳು, ಕಾರ್ಖಾನೆಗಳು, ವರ್ಕ್ ಶಾಪ್, ವಾಣಿಜ್ಯ ಮಳಿಗೆಗಳು, ಗೋಡಾನ್ ಗಳು, ಅತಿ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಕಾರ್ಖಾನೆಗಳು ತೆರೆದಿರುವುದಿಲ್ಲ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಸಂಸ್ಥೆ ಗಳು, ಎಸಿ ಬಸ್ ಗಳು ಅಂತರ್ ಜಿಲ್ಲಾ ಹಾಗೂ ಅಂತರ್ ರಾಜ್ಯ ಬಸ್ ಗಳು, ಬಾರ್ ಅಂಡ್ ರೆಸ್ಟೋರೆಂಟ್, ವೈನ್ ಶಾಪ್ ಸೇವೆ ಇರುವುದಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.