ಮೈಸೂರು: ಮೀಸಲಾತಿ ವಿಚಾರವಾಗಿ ರಾಜ್ಯ ಸರ್ಕಾರ ಹಿಂದೇಟು ಹಾಕದೇ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು. ನಮ್ಮ ಹೇಳಿಕೆಗಳು ಸ್ಪಷ್ಟವಾಗಿರಬೇಕು ಎಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದರು.
ಮೀಸಲಾತಿಗಳು ರಾಜಕೀಯ ಪ್ರೇರಿತ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜಕೀಯ ಪ್ರೇರಿತವಾದರೆ ಮುಖ್ಯಮಂತ್ರಿಗಳು, ಕಾನೂನು ಸಚಿವರು ಈ ಬಗ್ಗೆ ಹೇಳಬೇಕು. ಪಕ್ಷದ ಕೋರ್ ಕಮಿಟಿಯಲ್ಲಿ ಚರ್ಚಿಸಬೇಕು. ಆದರೆ, ಇದರ ಬಗ್ಗೆ ಸ್ಪಷ್ಟ ಹೇಳಿಕೆಗಳೇ ಬರುತ್ತಿಲ್ಲ. ಪಕ್ಷದಲ್ಲಿ ಸ್ಪಷ್ಟ ನಿಲುವಿಲ್ಲ, ಗೊಂದಲದಲ್ಲಿ ಸಿಲುಕಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಠಾಧಿಪತಿಗಳ ಹೋರಾಟದ ಬಗ್ಗೆ ನಾನು ಮಾತನಾಡಲ್ಲ, ಯಾರು ಏನು ಹೇಳಿದ್ದಾರೋ ಗೊತ್ತಿಲ್ಲ. ಸರ್ಕಾರ ಸ್ಪಷ್ಟ ನಿಲುವು, ಹೇಳಿಕೆಗಳ ಮೂಲಕ ಜನರ ಮನಸ್ಸಿನ ಸಂಶಯ ಹೋಗಲಾಡಿಸಬೇಕು ಎಂದು ಆಗ್ರಹಿಸಿದರು.
ಓದಿ : 'ಇಲ್ಲೇ ಹೀಗೆ ವರ್ತಿಸಿದ್ರೆ, ಜನರಿಗೆ ನೀವೇನು ನ್ಯಾಯ ಒದಗಿಸುತ್ತೀರಿ?'
ಕೋವಿಡ್ನಿಂದ ರಾಷ್ಟ್ರ ತತ್ತರಿಸಿ ಹೋಗಿದೆ, ರೈತರ ದೊಡ್ಡ ಚಳವಳಿಯಾಗುತ್ತಿದೆ. ಸಂಸದರ ಸಂಬಳ ಕಡಿತವಾಗಿದೆ, ಅಭಿವೃದ್ಧಿಗೆ ಹಣ ಬರುತ್ತಿಲ್ಲ. ಮೋದಿಯವರ ಮೇಲೆ ವಿಶ್ವಾಸವಿಟ್ಟು ಜನ ಎರಡನೇ ಬಾರಿ ಗೆಲ್ಲಿಸಿದ್ದಾರೆ. ಇದನ್ನು ನಾವು ಉಳಿಸಿಕೊಳ್ಳಬೇಕು. ನಾವು ಪಕ್ಷದ ಸಂಘಟನೆಗೆ ದುಡಿದಿರುವವರು, ಕಾರ್ಯಕಾರಣಿಯಲ್ಲಿ ಇರುವವರು. ನಮ್ಮ ಬಿಚ್ಚು ಮನಸ್ಸಿನ ಸಲಹೆ ನಾಯಕರಿಗೆ ತಿಳಿಸೋಣ ಎಂದರು.