ಮೈಸೂರು : ಐಪಿಎಸ್ ಅಧಿಕಾರಿ ಡಿ.ರೂಪಾ ಅವರನ್ನ ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಶ್ಲಾಘಿಸಿ, ಟ್ವೀಟ್ ಮಾಡಿದ್ದಾರೆ.
ರೂಪಾ ಅವರನ್ನು ಉಲ್ಲೇಖಿಸಿ ಎಂಪೋರಿಯಂಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಸಂಸದರು, 'ಕಾವೇರಿ ಎಂಪೋರಿಯಂನ ಹೆಸರು ಉಳಿಸಲು ನೀವು ಸರಿಯಾದ ವ್ಯಕ್ತಿಯಾಗಿದ್ದೀರಿ ರೂಪಾ ಮೇಡಂ. ಕೆಲವು ಖಾಸಗಿಯವರು ಇದರ ಉತ್ಪನ್ನಗಳನ್ನು ನಕಲು ಮಾಡಿ ಹೆಸರು ಹಾಳು ಮಾಡುತ್ತಿದ್ದಾರೆ. ನಾನು ನಿಮ್ಮ ಕಚೇರಿಗೆ ಸದ್ಯದಲ್ಲೇ ಭೇಟಿ ನೀಡುತ್ತೇನೆ'' ಎಂದು ಬರೆದುಕೊಂಡಿದ್ದಾರೆ.
![ಡಿ.ರೂಪಾ ಶ್ಲಾಘಿಸಿದ ಸಂಸದ ಪ್ರತಾಪ್ ಸಿಂಹ](https://etvbharatimages.akamaized.net/etvbharat/prod-images/img-20210105-wa0005_0501newsroom_1609814604_622.jpg)
ಇದಕ್ಕೆ ಟ್ವಿಟರ್ನಲ್ಲಿ ಪ್ರತಿಕ್ರಿಯೆ ನೀಡಿರುವ ರೂಪಾ, 'ನಿಮಗೆ ಸದಾ ಸ್ವಾಗತವಿದೆ ಪ್ರತಾಪ್‌ಸಿಂಹ ಸರ್. ನೀವು ಬರುವುದರಿಂದ ನಮಗೆ ದೊಡ್ಡ ಪ್ರೋತ್ಸಾಹ ಸಿಕ್ಕಂತಾಗುತ್ತದೆ. ಕಾವೇರಿ ಬ್ರಾಂಡ್‌ಗೆ ನೀವೂ ಬ್ರಾಂಡ್ ಅಂಬಾಸಿಡರ್. ನಿಮ್ಮ ಭೇಟಿ ನೂರಾರು ಜನ ಭೇಟಿ ನೀಡುವಂತೆ ಪ್ರೇರೇಪಿಸುತ್ತದೆ.
ಕಾವೇರಿ ಎಂಪೋರಿಯಂ ಬಗ್ಗೆ ನಿಮಗಿರುವ ಹೆಮ್ಮೆ ಮತ್ತು ಕಳಕಳಿಗೆ ನಾನು ಕೃತಜ್ಞಳಾಗಿದ್ದೇನೆ. ಹಾಗೆಯೇ ಸಂಸದ ತೇಜಸ್ವಿ ಸೂರ್ಯ ಅವರೂ ಕಾವೇರಿ ಎಂಪೋರಿಯಂಗೆ ಭೇಟಿ ನೀಡಲಿ ಅಂತಾ ಮನವಿ ಮಾಡುತ್ತೇನೆ ಎಂದು ರೂಪಾ ಟ್ವೀಟ್ ಮಾಡಿದ್ದಾರೆ.
![ಡಿ.ರೂಪಾ ಶ್ಲಾಘಿಸಿದ ಸಂಸದ ಪ್ರತಾಪ್ ಸಿಂಹ](https://etvbharatimages.akamaized.net/etvbharat/prod-images/img-20210105-wa0008_0501newsroom_1609814604_892.jpg)