ಮೈಸೂರು: ತಾಯಿ ವಯೋಸಹಜ ಅನಾರೋಗ್ಯದಿಂದ ಸಾವನ್ನಪ್ಪಿದ್ದು, ತಾಯಿಯ ಸಾವಿನ ದುಃಖ ತಾಳಲಾರದೆ ಮಗ ಅಸ್ವಸ್ಥನಾಗಿ ಸಾವನ್ನಪ್ಪಿರುವ ಮನಕಲುಕುವ ಘಟನೆ ನಗರದ ಗೋಕುಲಂನಲ್ಲಿ ನಡೆದಿದೆ.
ತಾಯಿ ಅಂತ್ಯ ಸಂಸ್ಕಾರ ಮುಗಿಸಿ ಅಸ್ವಸ್ಥನಾಗಿ ಸಾವನ್ನಪ್ಪಿದ ವ್ಯಕ್ತಿ ಮಲ್ಲಿಕಾರ್ಜುನ (53). ಈತನ ತಾಯಿ ರತ್ನಮ್ಮ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದಾರೆ.
ನಂತರ ಕುಟುಂಬದವರೆಲ್ಲಾ ತಾಯಿ ರತ್ನಮ್ಮರ ಅಂತ್ಯ ಸಂಸ್ಕಾರ ನೇರವೇರಿಸಿ ಮನೆಗೆ ಮರಳಿದ್ದಾರೆ. ಮಗ ಮಲ್ಲಿಕಾರ್ಜುನ ಅಸ್ವಸ್ಥರಾಗಿದ್ದು ಗಾಬರಿಗೊಂಡ ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಮಾರ್ಗ ಮಧ್ಯೆಯೇ ಮೃತಪಟ್ಟಿದ್ದು, ಸಾವಿನಲ್ಲೂ ತಾಯಿ-ಮಗ ಒಂದಾಗಿದ್ದಾರೆ.